ರಶ್ಮಿಕಾಗೆ ವಿಜಯ್ ಮೇಲೆ ಎಷ್ಟು ಪ್ರೀತಿ ಗೊತ್ತಾ? ಗೋವಾ ವಿಡಿಯೋಸ್ ವೈರಲ್...

Published on
ಹೊಸ ವರ್ಷವನ್ನು ಸ್ವಾಗತಿಸಲು ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಗೋವಾಗೆ ಹೋಗಿದ್ದ ವಿಷಯ ಎಲ್ಲರಿಗೂ ತಿಳಿದೆ ಇದೆ. ಈ ಜೋಡಿ ಎರಡು ಸಿನಿಮಾಗಳಲ್ಲಿ ನಟಿಸಿ ಟಾಲಿವುಡ್ ಸಿನಿಪ್ರೇಕ್ಷಕರನ್ನು ಸಖತ್ ರಂಜಿಸಿದ್ದಾರೆ. ಇವರಿಬ್ಬರನ್ನು ಮತ್ತೆ ತೆರೆ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಕಾದು ಕೂತಿದ್ದಾರೆ. ಹೀಗಿದ್ದರೂ, ತೆರೆ ಮೇಲೆ ಇವರಿಬ್ಬರು ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಸದ್ಯ ತೀರ ಕಡಿಮೆ. ಆದರೆ, ರಶ್ಮಿಕಾ ಮತ್ತು ವಿಜಯ್ ಹೊರಗೆ ಒಟ್ಟಿಗೆ ಕಾಣಿಸಿಕೊಂಡು ತಮ್ಮ ಅಭಿಮಾನಿಗಳ ಖುಷಿಗೆ ಕಾರಣವಾಗುತ್ತಿದ್ದಾರೆ.
ಹೌದು, ಗೋವಾಗೆ ಹೋದ ನ್ಯಾಷನಲ್ ಕ್ರಶ್ ಮತ್ತು ರೌಡಿ ಕಳೆದ ಕೆಲವು ಗಂಟೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ಎರಡು ವಿಡಿಯೋಗಳು. ವಿಜಯ್ ಅವರ 'ಲೈಗರ್' ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಆ ಚಿತ್ರದ ಮೊದಲ ಗ್ಲಿಮ್ಸ್ ವಿಡಿಯೋ ಕಂಡು ಬಹುತೇಕ ಗೋವಾದಲ್ಲಿ ಅವರ ಇಡೀ ಸ್ನೇಹಿತರ ತಂಡ ಮೊದಲ ವಿಡಿಯೋದಲ್ಲಿ ಕುಣಿದು ಕುಪ್ಪಳಿಸಿದೆ. ಈ ಮೊದಲ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಧೂಳಿಬ್ಬಿಸಿದೆ. ನಟಿ ರಶ್ಮಿಕಾ ಅವರು ವಿಜಯ್ ಅನ್ನು ಸಿನಿಮಾದ ಗ್ಲಿಮ್ಸ್ ಕಂಡ ನಂತರ ಕುಣಿದು ಕುಪ್ಪಳಿಸಿ, ವಿಜಯ್ ಅವರನ್ನು ತಬ್ಬಿಕೊಂಡಿದ್ದಾರೆ.
ಇನ್ನು, ಎರಡನೇ ವಿಡಿಯೋದಲ್ಲಿ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ಸ್ನೇಹಿತರ ಜತೆಗೆ ಒಟ್ಟಿಗೆ ಕೂತು ಆಟಗಳು ಆಡುತ್ತಾ, ಸಮಯ ಕಳೆಯುತ್ತಾ, ತಿಂಡಿ ಎಂಜಾಯ್ ಮಾಡುತ್ತಿರುವುದು ಕಂಡುಬಂದಿದೆ. ಎರಡನೇ ವಿಡಿಯೋದಲ್ಲಿ ನಟ ವಿಜಯ್ ಅವರ ಕುಟುಂಬವು ಸಹ ರಶ್ಮಿಕಾ ಅವರ ಜೊತೆಗೆ ಊಟ ಮಾಡುವುದು ಕಾಣಿಸುತ್ತೆ. ಈ ಎರಡು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಇಂದಿನ ಹಾಟ್ ಟಾಪಿಕ್ ಆಗಿವೆ. ಟ್ವಿಟರ್​ನಲ್ಲಿ ಈ ವಿಡಿಯೋಗಳು ರೀ-ಟ್ವೀಟ್ ಮೇಲೆ ರೀ-ಟ್ವೀಟ್​ಗಳನ್ನು ಪಡೆಯುತ್ತಿವೆ. ಈ ವಿಡಿಯೋಗಳನ್ನು ಕಂಡ ರಶ್ಮಿಕಾ ಮತ್ತು ವಿಜಯ್ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net