More

    ತಮಿಳಿನ ಬ್ಯಾಡ್​ಬಾಯ್​​ಗೆ ಡಾಕ್ಟರೇಟ್ ಗೌರವ! ‘ಸಿಂಬು’ದು 39 ವರ್ಷದ ಸಿನಿ ಜರ್ನಿ…

    ಚೆನೈ: ಕೆಲವು ದಿನಗಳ ಹಿಂದೆ, ತಮಿಳು ನಟ ಸಿಲಂಬರಸನ್ ಟಿಆರ್ ಅವರನ್ನು ಜನವರಿ 11 ರಂದು ವೆಲ್ಸ್ ವಿಶ್ವವಿದ್ಯಾನಿಲಯವು ಅವರ ಸಿನಿಮಾ ಕ್ಷೇತ್ರದಲ್ಲಿನ ವಿಶಿಷ್ಟ ಜರ್ನಿಗಾಗಿ ಡಾಕ್ಟರೇಟ್ ನೀಡಿ ಗೌರವಿಸುತ್ತದೆ ಎಂದು ಘೋಷಿಸಲಾಯಿತು. ಹಾಗೆಯೇ, ವೆಲ್ಸ್ ವಿಶ್ವವಿದ್ಯಾನಿಲಯದ11 ನೇ ವಾರ್ಷಿಕ ಘಟಿಕೋತ್ಸವದ ಸಂದರ್ಭದಲ್ಲಿ, ಸಂಸ್ಥಾಪಕ ಮತ್ತು ಅಧ್ಯಕ್ಷರು ಮತ್ತು ಕುಲಪತಿಗಳಾದ ಡಾ. ಇಶಾರಿ.ಕೆ.ಗಣೇಶ್ ಅವರು ಗೌರವ ಡಾಕ್ಟರೇಟ್ ನಟ ಸಿಲಂಬರಸನ್ ಟಿಆರ್​ಗೆ ಪ್ರದಾನ ಮಾಡಿದರು. ಅಂದಹಾಗೆ, ನಟ ಸಿಲಂಬರಸನ್ ಟಿಆರ್ ಗೌತಮ್ ಮೆನನ್ ನಿರ್ದೇಶನದ ವೆಂದು ತಾನಿಂದತು ಕಾಡುಮತ್ತು ಗೋಕುಲ್ ನಿರ್ದೇಶನದ ಕರೋನಾ ಕುಮಾರ್ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಜತೆಗೆ, ಇವೆರಡೂ ವೆಲ್ಸ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿವೆ ಎಂಬುದು ಇಲ್ಲಿ ಗಮನಿಸಿವ ವಿಷಯ.
    ಆದರೆ, ಗೌರವ ಡಾಕ್ಟರೇಟ್‌ಗೂ, ನಮ್ಮ ಪ್ರೊಡಕ್ಷನ್ ಹೌಸ್ ನಿರ್ಮಿಸುವ ಸಿನಿಮಾಗಳಲ್ಲಿ ಸಿಂಬು ನಟಿಸುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಡಾ.ಇಶಾರಿ.ಕೆ.ಗಣೇಶ್ ತಿಳಿಸಿದ್ದಾರೆ. 3 ಫೆಬ್ರವರಿ 2022ಕ್ಕೆ ನಟ ಸಿಂಬು ತಮ್ಮ 39ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದು, ಅವರು 6 ತಿಂಗಳ ಮಗು ಆಗಿದ್ದಾಗಿನಿಂದ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ನಟನ ಸಿನಿಮಾ ಜರ್ನಿ ಅವರ ವಯಸ್ಸಿಗೆ ಸಮ ಎಂಬುದು ಇಲ್ಲಿ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. 1983ರಲ್ಲಿ ಜನಿಸಿದ ಸಿಂಬು, 1984ರಲ್ಲಿ ಬಿಡುಗಡೆಯಾದ ಉರವೈ ಕಥೆ ಕಿಲಿಎಂಬ ತಮಿಳು ಸಿನಿಮಾದಲ್ಲಿ ಅವರು ಕೇವಲ 6 ತಿಂಗಳು ಮಗುವಿದ್ದಾಗಲೇ ತೆರೆ ಮೇಲೆ ಮೊದಲ ಬಾರಿ ಕಾಣಿಸಿಕೊಂಡರು. ನಟ ಅವರ ತಂದೆ ಟಿ.ರಾಜೇಂದ್ರ ಅವರ ಹಲವು ಸಿನಿಮಾಗಳಲ್ಲಿ ಬಾಲ ಕಲಾವಿದನಾಗಿ 2002ರ ವೆರೆಗೆ ಪರದೆಯ ಮೇಲೆ 14 ಸಿನಿಮಾಗಳಲ್ಲಿ ಮಿಂಚಿದ್ದಾರೆ

    ತಮಿಳಿನ ಬ್ಯಾಡ್​ಬಾಯ್​​ಗೆ ಡಾಕ್ಟರೇಟ್ ಗೌರವ! 'ಸಿಂಬು'ದು 39 ವರ್ಷದ ಸಿನಿ ಜರ್ನಿ...

    ನಂತರ, ‘ಕಾದಲ್ ಅಜಿವತಿಲ್ಲೈಎಂಬ ತಮಿಳು ಸಿನಿಮಾ ಮೂಲಕ ನಾಯಕ ನಟನಾಗಿ ನಟಿಸಲು ಆರಂಭಿಸಿದ್ದಾರೆ. ಹಾಗೆ, 39 ವರ್ಷಗಳಲ್ಲಿ ಒಟ್ಟು ಬರೋಬ್ಬರಿ 45 ಚಿತ್ರಗಳಲ್ಲಿ ನಟಿಸಿ, ಈಗ ಇನ್ನು ನಾಲ್ಕು ಮುಂಬರುವ ಸಿನಿಮಾಗಳಲ್ಲಿ ಸಿನಿ ಪ್ರೇಕ್ಷಕರನ್ನು ಮತ್ತು ಅವರ ಅಭಿಮಾನಿಗಳನ್ನು ರಂಜಿಸಲು ರೆಡಿಯಾಗಿದ್ದಾರೆ ನಟ ಸಿಂಬು. ತಮಿಳು ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆದ ನಟ ಸಿಂಬು ಶೀಘ್ರದಲ್ಲೇ ನಟಿ ನಿಧಿ ಅಗರ್​ವಾಲ್ ಅವರನ್ನು ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಸದ್ಯ ಹರಿದಾಡುತ್ತಿವೆ. ಇವರಿಬ್ಬರು ಕಳೆದ 1 ವರ್ಷದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. 

    ವಿಚ್ಛೇದನವಾದ ಕೇವಲ 3 ತಿಂಗಳಿಗೆ ಹೊಸ ಲವ್ ಸ್ಟೋರಿ ಆರಂಭಿಸಿದ ಸಮಂತಾ ಮಾಜಿ ಪತಿ ನಾಗಚೈತನ್ಯ… ವಿಡಿಯೋ ವೈರಲ್!

    ತಮಿಳು ಚಿತ್ರರಂಗದ ಬ್ಯಾಡ್​ಬಾಯ್ ಮತ್ತೆ ಪ್ರೀತಿಯಲ್ಲಿ? ಹೊಸ ಲವರ್ ಜತೆ ಒಂದೇ ಮನೆಯಲ್ಲಿ ಸಿಂಬು ಸಂಸಾರ?

    ರಶ್ಮಿಕಾಗೆ ವಿಜಯ್ ಮೇಲೆ ಏಷ್ಟು ಪ್ರೀತಿ ಗೊತ್ತಾ? ಗೋವಾ ವಿಡಿಯೋಸ್ ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts