ತೆಲಂಗಾಣ: ಕಳೆದ ಒಂದು ತಿಂಗಳಿನಿಂದ ಟಾಲಿವುಡ್ ಅಂಗಳದಲ್ಲಿ ಸಿನಿಮಾ ಸುದ್ದಿಗಿಂತಲೂ ಹೆಚ್ಚು ಸದ್ದು ಮಾಡುತ್ತಿರುವುದು ಯುವ ನಟ ರಾಜ್ ತರುಣ್ ಮತ್ತು ಲಾವಣ್ಯ ಪ್ರೇಮ ವಿವಾದ. 11 ವರ್ಷಗಳ ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಗಂಭೀರ ಆರೋಪ ಹೊರಿಸಿರುವ ಪ್ರೇಯಸಿ ಲಾವಣ್ಯ, ರಾಜ್ನಿಂದ ನನಗೆ ಅನ್ಯಾಯವಾಗಿದೆ. ಆತ ತನ್ನ ಸಹ ನಟಿಯಾದ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ, ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಈ ವಿಷಯ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಅನ್ನೋದಕ್ಕಿಂತ ಕ್ಷಣಕ್ಕೊಂದು ಟ್ವಿಸ್ಟ್ ಎನ್ನುವಂತಾಗಿದೆ.
ಇದನ್ನೂ ಓದಿ: ಸುಜ್ಞಾನನಿಧಿ ಶಿಷ್ಯವೇತನ ಪ್ರಯೋಜನವಾಗಲಿ
ಇವರಿಬ್ಬರ ವಿವಾದಕ್ಕೆ ಹೊಸ ತಿರುವುಗಳು ಸಿಗುತ್ತಿದೆಯೇ ವಿನಃ ಪ್ರಕರಣ ಮಾತ್ರ ಅಂತ್ಯಗೊಳ್ಳುತ್ತಿಲ್ಲ. ಪ್ರೀತಿ ಹೆಸರಲ್ಲಿ ವಂಚನೆ ಪ್ರಕರಣದಡಿ ಸದ್ಯ ಕೋರ್ಟ್ ರಾಜ್ ತರುಣ್ಗೆ ನಿರೀಕ್ಷಣಾ ಜಾಮೀನು ಕೊಡುವ ಮೂಲಕ ಬಿಗ್ ರಿಲೀಫ್ ನೀಡಿದ್ದೇ ಆದರೂ ಇವರಿಬ್ಬರ ಜಟಾಪಟಿ ಎಂದಿನಂತೆ ಮುಂದುವರೆದಿದೆ. ಕೆಲವು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ರಾಜ್-ಲಾವಣ್ಯ ಪ್ರಕರಣ ಇದೀಗ ಜ್ವಾಲೆಯಂತೆ ಸ್ಫೋಟಗೊಂಡಿದೆ. ಇವರಿಬ್ಬರ ಪ್ರಕರಣಕ್ಕೆ ಮತ್ತೊಂದು ಶಾಕಿಂಗ್ ಟ್ವಿಸ್ಟ್ ಎದುರಾಗಿದ್ದು, ಪ್ರಿಯಕರ ರಾಜ್ ತರುಣ್ ಮತ್ತು ನಟಿ ಮಾಳ್ವಿ ಒಂದೇ ಫ್ಲಾಟ್ನಲ್ಲಿದ್ದಾರೆ ಎಂಬುದಕ್ಕೆ ನನ್ನ ಬಳಿ ಸಾಕ್ಷಿ ಇದೆ ಎಂದು ಲಾವಣ್ಯ ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋ ಕೂಡ ಜಾಲತಾಣಗಳಲ್ಲಿ ಹರಿದಾಡಿತ್ತು.
ಈ ಬೆಳವಣಿಗಗಳ ಬೆನ್ನಲ್ಲೇ ನರಸಿಂಗಿ ಪೊಲೀಸರು ಲಾವಣ್ಯ ನೀಡಿದ್ದ ದೂರಿನ ಮೇರೆಗೆ ನಟ ರಾಜ್ ತರುಣ್ ವಿರುದ್ಧ ಇದೀಗ ಚಾರ್ಚ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಸದ್ಯ ಲವ್ ಧೋಖಾ ಕೇಸ್ ಯಾವ ಹಂತ ತಲುಪಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಇನ್ನು ಆತ ನನ್ನಿಂದ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎನ್ನುವುದಕ್ಕೆ ಆಸ್ಪತ್ರೆಯ ವರದಿಗಳು ಸೇರಿದಂತೆ ಒಂದಷ್ಟು ಸಾಕ್ಷ್ಯಗಳು ನನ್ನ ಬಳಿ ಇವೆ ಎಂದು ಲಾವಣ್ಯ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಆಕೆ ಪೊಲೀಸರಿಗೆ ಈಗಾಗಲೇ ಹಸ್ತಾಂತರಿಸಿರುವುದಾಗಿಯೂ ವರದಿಯಾಗಿದೆ.
ಇದನ್ನೂ ಓದಿ: ಪತ್ರಕರ್ತರಿಗೆ ರೈಲ್ವೆ ಪಾಸ್ ನೀಡಲು KUWJ ಒತ್ತಾಯ ಪರಿಶೀಲಿಸುವುದಾಗಿ ಭರವಸೆ ನೀಡಿದ ಸಚಿವ ವಿ.ಸೋಮಣ್ಣ
ಇದರೊಟ್ಟಿಗೆ ಮತ್ತೊಂದು ಬಾಂಬ್ ಸಿಡಿಸಿದ ಲಾವಣ್ಯ, “ನನ್ನ ಪೋಷಕರು ರಾಜ್ ತರುಣ್ಗೆ 70 ಲಕ್ಷ ರೂ. ಹಣ ನೀಡಿದ್ದಾರೆ. ಮದುವೆಗೆ ಖರೀದಿಸಿದ ಎರಡು ನಿವೇಶನಗಳನ್ನು ಮಾರಾಟ ಮಾಡಿ ನನ್ನ ಹೆತ್ತವರು ರಾಜ್ಗೆ ಹಣ ಕೊಟ್ಟರು. ನಿವೇಶನ ಮಾರಾಟ ಮಾಡಿದ ದಿನಾಂಕ, ಆತನಿಗೆ ಪಾವತಿಸಿದ ಚೆಕ್ಗಳ ದಿನಾಂಕ ಎಲ್ಲವೂ ನನ್ನ ಬಳಿ ಇವೆ. ತರುಣ್ ಈ ಹಿಂದೆ ಒಂದೆರೆಡು ವರ್ಷಗಳ ಕಾಲ ಯಾವುದೇ ಸಿನಿಮಾ ಮಾಡಿರಲಿಲ್ಲ, ಆಗ ನಾವು ಬಾಡಿಗೆ ಮನೆಯಲ್ಲಿ ಇದ್ದೆವು. ಅದರ ಬಾಡಿಗೆ ಕಟ್ಟಿದ್ದು ಕೂಡ ನನ್ನ ಪೋಷಕರು” ಎಂದು ಲಾವಣ್ಯ ಹೇಳಿದ್ದಾರೆ. ಈ ಪ್ರಕರಣ ಸದ್ಯ ಟಾಲಿವುಡ್ನಲ್ಲಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದ್ದು, ಇದಕ್ಕೆ ಅಂತ್ಯ ಯಾವಾಗ ಎಂಬ ಪ್ರಶ್ನೆ ಮಾತ್ರ ಕಾಡುತ್ತಿದೆ,(ಏಜೆನ್ಸೀಸ್).
ಸರ್ಕಾರಕ್ಕೆ ಧೋನಿ, ವಿರಾಟ್ ಕಟ್ಟಿದ ತೆರಿಗೆ ಮೊತ್ತ ಎಷ್ಟು ಗೊತ್ತಾ? ಕೇಳಿದ್ರೆ ಹುಬ್ಬೇರೋದು ಖಚಿತ!