ಸರ್ಕಾರಕ್ಕೆ ಧೋನಿ, ವಿರಾಟ್​ ಕಟ್ಟಿದ ತೆರಿಗೆ ಮೊತ್ತ ಎಷ್ಟು ಗೊತ್ತಾ? ಕೇಳಿದ್ರೆ ಹುಬ್ಬೇರೋದು ಖಚಿತ!

ನವದೆಹಲಿ: ಕ್ರಿಕೆಟ್ ಲೋಕದಲ್ಲಿ ದಿಗ್ಗಜ ಆಟಗಾರರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಹಾಗೂ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಭಾರತೀಯ ಸ್ಟಾರ್​ ಕ್ರಿಕೆಟಿಗರೆಂದರೆ ಅದು ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ದಾಖಲೆಗಳ ಸರದಾರ ವಿರಾಟ್ ಕೊಹ್ಲಿ. ಇವರಿಬ್ಬರ ಜೋಡಿಯನ್ನು ಮೈದಾನದಲ್ಲಿ ನೋಡುವುದೇ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬ. ‘ಮಾಸ್ಟರ್​ಮೈಂಡ್’​ ಜತೆ ‘ರನ್​ ಮಷಿನ್’​ ಇದ್ದರೆ ಆ ಪಂದ್ಯವೇ ರೋಚಕ ಎನ್ನುತ್ತಾರೆ ಕ್ರಿಕೆಟ್​ ಪ್ರೇಮಿಗಳು. ಪ್ರಸ್ತುತ ಕ್ರಿಕೆಟ್​ನಿಂದ ದೊಡ್ಡ ಬ್ರೇಕ್ ಪಡೆದಿರುವ ವಿರಾಟ್​, ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದೇ ರೀತಿಯಲ್ಲಿ ಮಾಹಿ ಕೂಡ ಇದ್ದು, ಮುಂಬರುವ ಐಪಿಎಲ್​ ಆವೃತ್ತಿಗೆ ಎಂಟ್ರಿ ಕೊಡಲಿದ್ದಾರಾ? ಅಥವಾ ನಿವೃತ್ತಿ ಘೋಷಿಸಲಿದ್ದಾರಾ ಎಂಬುದೇ ಸದ್ಯ ಫ್ಯಾನ್ಸ್​ಗಳ ಗೊಂದಲವಾಗಿದೆ.

ಇದನ್ನೂ ಓದಿ: ಒಂದೇ ಕುಟುಂಬದಲ್ಲಿ ಇದ್ದಾರೆ ಬರೋಬ್ಬರಿ 10 ಶಿಕ್ಷಕರು!

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಆಡಿದ ವಿರಾಟ್ ಕೊಹ್ಲಿ, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇದರೊಂದಿಗೆ ತಂಡವು ಕೂಡ ಏಕದಿನ ಸರಣಿ ವಶಪಡಿಸಿಕೊಳ್ಳುವಲ್ಲಿ ಮುಗ್ಗರಿಸಿತು. ಇದಾದ ನಂತರದಲ್ಲಿ ಸದ್ಯ ಸುದ್ದಿಗಳಿಂದ ಬಹಳ ದೂರ ಉಳಿದಿರುವ ವಿರಾಟ್ ಮತ್ತು ಧೋನಿ, ಇದೀಗ ಹೊಸ ವಿಷಯದ ಮೂಲಕ ಮತ್ತೆ ಮುನ್ನೆಲೆಗೆ ಬಂದಿರುವುದು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ. ಹೌದು, ಇತ್ತೀಚಿನ ವರದಿಯೊಂದರ ಪ್ರಕಾರ, 2023-24ನೇ ಹಣಕಾಸು ವರ್ಷದಲ್ಲಿ ಇವರಿಬ್ಬರು ಕಟ್ಟಿದ ತೆರಿಗೆ ಮೊತ್ತ ಕ್ರೀಡಾಪಟುಗಳ ಪೈಕಿ ಅತಿ ಹೆಚ್ಚು ಎನ್ನಲಾಗಿದೆ.

ವಿರಾಟ್ 66 ಕೋಟಿ ರೂ. ತೆರಿಗೆ ಪಾವತಿಸಿದ್ರೆ, ಧೋನಿ 38 ಕೋಟಿ ರೂ. ಕಟ್ಟಿದ್ದಾರೆ. ಸದ್ಯ ಈ ಸಂಗತಿ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರಿಸಿದ್ದು, ಅಬ್ಬಬ್ಬಾ ಎನ್ನುವಂತೆ ಮಾಡಿದೆ. ವರದಿಗಳ ಪ್ರಕಾರ, ಧೋನಿ, ಕೊಹ್ಲಿ ನಂತರದ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ 28 ಕೋಟಿ ರೂ., ಸೌರವ್ ಗಂಗೂಲಿ 23 ಕೋಟಿ ರೂ. ಮತ್ತು ಹಾರ್ದಿಕ್ ಪಾಂಡ್ಯ 13 ಕೋಟಿ ರೂ. ತೆರಿಗೆ ಕಟ್ಟುವ ಮೂಲಕ ಮೊದಲ ಐದು ಸ್ಥಾನಗಳನ್ನು ಅಲಂಕರಿಸಿದ್ದಾರೆ,(ಏಜೆನ್ಸೀಸ್).

‘ಡಿ ಗ್ಯಾಂಗ್’​ ವಿರುದ್ಧ ಚಾರ್ಚ್​ಶೀಟ್​ ಸಲ್ಲಿಕೆ: ರಕ್ತದ ಕಲೆ, 200ಕ್ಕೂ ಹೆಚ್ಚು ಸಾಕ್ಷ್ಯ! ಸ್ಫೋಟಕ ಸಂಗತಿ ಬಯಲು

‘ಕಾಸ್ಟಿಂಗ್ ಕೌಚ್’​ ವಿವಾದದಿಂದ AMMA ಕಂಗಾಲು! ಜವಾಬ್ದಾರಿ ಹೊರಲು ಇಚ್ಛಿಸದ ಇಬ್ಬರು ಸ್ಟಾರ್​ ನಟರು

Share This Article

ಸುಖವಾದ ನಿದ್ದೆ ಬೇಕೆಂದರೆ ಯೋಗದ ಮೊರೆಹೋಗಿ

ಪ್ರ:ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ 2-3 ತಾಸು ನಿದ್ರೆ ಬಂದರೆ ಹೆಚ್ಚು. ಸುಖನಿದ್ರೆಗಾಗಿ ಯಾವ ಯೋಗ…

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…

ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…