ಒಂದೇ ಕುಟುಂಬದಲ್ಲಿ ಇದ್ದಾರೆ ಬರೋಬ್ಬರಿ 10 ಶಿಕ್ಷಕರು!

|ರತ್ನಾಕರ, ಸುಬ್ರಹ್ಮಣ್ಯ

ದ.ಕ.ಜಿಲ್ಲೆಯ ಬಿಳಿನೆಲೆ ಗ್ರಾಮದ ಕೈಕಂಬ ಸಮೀಪದ ನಡುತೋಟ ಗ್ರಾಮದ ನೀಲಪ್ಪ ಗೌಡರ ಕುಟುಂಬ ಸಮಾಜಕ್ಕೆ ಹತ್ತು ಶಿಕ್ಷಕರನ್ನು ನೀಡಿದೆ! ಕುಟುಂಬದ ಹಿರಿಯ ಸದಸ್ಯರಾಗಿರುವ ನೀಲಪ್ಪ ಗೌಡರು, ಪತ್ನಿ ಮತ್ತು ನಾಲ್ವರು ಸಹೋದರರು ಮತ್ತು ಅವರ ಪತ್ನಿಯರು ಶಿಕ್ಷಕ ವೃತ್ತಿಯಲ್ಲೇ ತೊಡಗಿದವರು.

ನೀಲಪ್ಪ ಗೌಡರು 40 ವರ್ಷ ಶಿಕ್ಷಕ ವೃತ್ತಿ ಮಾಡಿದ್ದಾರೆ. ಕಲಿತ ಸುಬ್ರಹ್ಮಣ್ಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಬಳಿಕ ಕಡಬದ ಏಮ್ಸ್​ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ಇವರ ಪತ್ನಿ ಶಾಂತಿ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ. ನೀಲಪ್ಪ ಗೌಡರ ಸಹೋದರ ದಿವಾಕರ ಗೌಡ ಸುಂಕದಕಟ್ಟೆ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದರು. ಸೇವೆಯಲ್ಲಿರುವಾಗಲೇ ಅವರು ನಿಧನ ರಾದರು. ಅವರ ಪತ್ನಿ ಸುಮತಿ ಬಿಳಿನೆಲೆ ಶಾಲೆಯಲ್ಲಿ ಮುಖ್ಯಶಿಕ್ಷಕಿ.

ಇದನ್ನೂ ಓದಿ: ಅಬ್ಬಬ್ಬಾ! ಇದು ‘ಸೀರೆ ಗ್ಯಾಂಗ್’​ ಕೈಚಳಕ; ಲಕ್ಷಾಂತರ ರೂ. ಮೌಲ್ಯದ ಸೀರೆಗಳೇ ಇವರ ಟಾರ್ಗೆಟ್​

ನೀಲಪ್ಪ ಗೌಡರ ಇನ್ನೋರ್ವ ಸಹೋದರ ವಿಶ್ವನಾಥ ನಡುತೋಟ ಸುಬ್ರಹ್ಮಣ್ಯದ ಎಸ್​ಎಸ್​ಪಿಯು ಕಾಲೇಜಿನ ಜೆಒಸಿ ವಿಭಾಗದಲ್ಲಿ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಇವರು ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ಇವರ ಪತ್ನಿ ಲೀಲಾ ಕುಮಾರಿ ಪಂಜ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿ. ನೀಲಪ್ಪ ಗೌಡರ ಮತ್ತೋರ್ವ ಸಹೋದರ ವಿಜಯ ಕುಮಾರ್ ನಡುತೋಟ ಸಿರಿಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ. ಇವರ ಪತ್ನಿ ಗೀತಾ ದೈಹಿಕ ಶಿಕ್ಷಣ ಶಿಕ್ಷಕಿ. ನೀಲಪ್ಪ ಗೌಡರ ಸಹೋದರಿ ಉಮಾ ಗುರುವಾಯನಕೆರೆ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿ. ಇವರ ಪತಿ ಧರ್ಣಪ್ಪ ಗೌಡ ಸೋಣಂದೂರು ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ, ಈಗ ನಿವೃತ್ತರು.

ತಂದೆ ನಡು ತೋಟ ರಾಮಪ್ಪ ಗೌಡರು ಕಲಿತವರಲ್ಲ. ತಾಯಿ ರಾಮಕ್ಕ 4ನೇ ತರಗತಿ ತನಕ ಕಲಿತಿದ್ದರು. ತಂದೆ-ತಾಯಿ ಕೃಷಿಕರು. ಆಗ ಜಿಲ್ಲೆಯಲ್ಲಿ ಡಿಡಿಪಿಐ ಆಗಿದ್ದ ಮುದ್ದಾಜೆ ಶಿವರಾಮ ಗೌಡ ಮತ್ತು ಅವರ ಪುತ್ರ ದೇವರಾಜ್ ನೆರವಿನಿಂದ ಟಿಸಿಎಚ್ ಮಾಡಿದೆ. 1972ರಲ್ಲಿ ಕೆಲಸ ಸಿಕ್ಕಿತ್ತು. ಶಿಕ್ಷಕ ವೃತ್ತಿ ಪವಿತ್ರವಾದುದು ಎಂದು ಬಳಿಕ ತಿಳಿಯಿತು. ಬಡತನವಿದ್ದರೂ ಸಹೋದರ-ಸಹೋದರಿಗೆ ಶಿಕ್ಷಕ ವೃತ್ತಿಗೆ ಸೇರಲು ಪ್ರೇರೇಪಿಸಿದೆ.

| ನೀಲಪ್ಪ ಗೌಡ ನಡುತೋಟ ನಿವೃತ್ತ ಪ್ರಾಂಶುಪಾಲ

ಅಧ್ಯಾಪಕರು ವಿದ್ಯಾರ್ಥಿಗಳನ್ನು ಬೆಳೆಸುವ ಜತೆಗೆ ತಾವೂ ಬೆಳೆಯಬೇಕು. ಮಕ್ಕಳನ್ನು ಸಾಂಸ್ಕೃತಿಕ ಚಟುವಟಿಕೆಗಳತ್ತ ಆಕರ್ಷಿಸುವಂತೆ ಮಾಡಬೇಕು. ನಿವೃತ್ತರಾದ ಬಳಿಕವೂ ಶಿಷ್ಯರು ನೀಡುವ ಗೌರವ ಕಂಡಾಗ ಮನಸು ಸಾರ್ಥಕವಾಗುತ್ತದೆ.

| ವಿಶ್ವನಾಥ ನಡುತೋಟ ನಿವೃತ್ತ ಉಪನ್ಯಾಸಕರು

‘ಡಿ ಗ್ಯಾಂಗ್’​ ವಿರುದ್ಧ ಚಾರ್ಚ್​ಶೀಟ್​ ಸಲ್ಲಿಕೆ: ರಕ್ತದ ಕಲೆ, 200ಕ್ಕೂ ಹೆಚ್ಚು ಸಾಕ್ಷ್ಯ! ಸ್ಫೋಟಕ ಸಂಗತಿ ಬಯಲು

‘ಕಾಸ್ಟಿಂಗ್ ಕೌಚ್’​ ವಿವಾದದಿಂದ AMMA ಕಂಗಾಲು! ಜವಾಬ್ದಾರಿ ಹೊರಲು ಇಚ್ಛಿಸದ ಇಬ್ಬರು ಸ್ಟಾರ್​ ನಟರು

Share This Article

ಸುಖವಾದ ನಿದ್ದೆ ಬೇಕೆಂದರೆ ಯೋಗದ ಮೊರೆಹೋಗಿ

ಪ್ರ:ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ 2-3 ತಾಸು ನಿದ್ರೆ ಬಂದರೆ ಹೆಚ್ಚು. ಸುಖನಿದ್ರೆಗಾಗಿ ಯಾವ ಯೋಗ…

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…

ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…