ಸುಜ್ಞಾನನಿಧಿ ಶಿಷ್ಯವೇತನ ಪ್ರಯೋಜನವಾಗಲಿ

4
Published on

ಹಾರೂಗೇರಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಸುಜ್ಞಾನನಿಧಿ ಶಿಷ್ಯವೇತನ ಯೋಜನೆ ಜಾರಿಗೊಳಿಸಿ ಹಲವಾರು ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಈ ಯೋಜನೆಯ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಅಥಣಿ ಜಿಲ್ಲಾ ನಿರ್ದೇಶಕಿ ನಾಗರತ್ನಾ ಹೆಗ್ಗಡೆ ಹೇಳಿದರು.

ಪಟ್ಟಣದ ಮಹಾತ್ಮ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರಗಳ ವಿತರಣಾ ಸಮಾರಂಭಕ್ಕೆ ಸಸಿಗೆ ನೀರುಣಿಸುವ ಮೂಲಕ ಶನಿವಾರ ಚಾಲನೆ ನೀಡಿ ಮಾತನಾಡಿದರು. ಶಿಷ್ಯವೇತನ ಪಡೆದ ಎಲ್ಲ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ತಂದೆ, ತಾಯಿ, ಗುರು, ಹಿರಿಯರ ಕೀರ್ತಿ ತರಬೇಕು ಎಂದರು.

ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ 60 ವಿದ್ಯಾರ್ಥಿಗಳಿಗೆ ಸುಮಾರು 12 ಲಕ್ಷ ರೂ. ಶಿಷ್ಯ ವೇತನ ಮಂಜೂರು ಮಾಡಿದ್ದಾರೆ. ಸುಜ್ಞಾನನಿಧಿ ಶಿಷ್ಯವೇತನಕ್ಕೆ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಮಂಜುನಾಥ ಪತ್ರವನ್ನು ಗಣ್ಯರು ವಿತರಿಸಿದರು. ಪ್ರಾಚಾರ್ಯ ಲಕ್ಷ್ಮಣ ಪಾಟೀಲ, ಎಎಸ್‌ಐ ಸೂರ್ಯಕಾಂತ ಶಿಂಗೆ, ಪತ್ರಕರ್ತ ಹನುಮಂತ ಕುರಿ, ಮುಖ್ಯ ಶಿಕ್ಷಕ ಎಂ.ಬಿ.ಒಡೆಯರ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

ಜನಾಧಿಕಾರಿ ಮೋಹನ್.ಕೆ ಸ್ವಾಗತಿಸಿದರು, ಸಮನ್ವಯಾಧಿಕಾರಿ ಸುರೇಖಾ ನಿರೂಪಿಸಿದರು, ಮೇಲ್ವಿಚಾರಕಿ ಸುಜಾತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net