Flight Crash : ದಕ್ಷಿಣ ಕೊರಿಯಾದಲ್ಲಿ ಮತ್ತೊಂದು ವಿಮಾನ ಅಪಘಾತ ಸ್ವಲ್ಪದರಲ್ಲೇ ತಪ್ಪಿದೆ. ನಿನ್ನೆಯಷ್ಟೇ (ಡಿ.29) ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಜೆಜು ಏರ್‌ಲೈನ್ಸ್ ವಿಮಾನದ 179 ಪ್ರಯಾಣಿಕರು ದುರಂತ ಸಾವಿಗೀಡಾಗಿದರು. ದಕ್ಷಿಣ ಕೊರಿಯಾದ ಮಾರಣಾಂತಿಕ ವಾಯುಯಾನ ದುರಂತಗಳಲ್ಲಿ ಇದು ಕೂಡ ಒಂದಾಗಿದೆ.
ಈ ಮಹಾ ದುರಂತದ ಬೆನ್ನಲ್ಲೇ ಮತ್ತೊಂದು ಭೀಕರ ಅಪಘಾತ ಅದೃವಶಾತ್ ತಪ್ಪಿದೆ. ಏನಾಯಿತು ಅಂದರೆ, ಸೋಮವಾರ (ಡಿ.30) ಬೆಳಗ್ಗೆ ಸಿಯೋಲ್‌ನ ಗಿಂಪೊ ವಿಮಾನ ನಿಲ್ದಾಣದಿಂದ ಜೆಜು ಏರ್‌ಲೈನ್ಸ್ ವಿಮಾನ ಟೇಕ್ ಆಫ್ ಆಯಿತು. ಇದಾದ ಕೆಲವೇ ಸಮಯದಲ್ಲಿ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣ ಅದನ್ನು ಗುರುತಿಸಿದ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಗಿಂಪೊ ವಿಮಾನ ನಿಲ್ದಾಣದಲ್ಲಿ ಇಳಿಸಿದರು. ಈ ವಿಮಾನದಲ್ಲೂ ಲ್ಯಾಂಡಿಂಗ್ ಗೇರ್ ಸಮಸ್ಯೆ ಕಂಡುಬಂದಿದೆ ಎನ್ನಲಾಗಿದೆ. ಆದರೂ ನಿಖರ ಕಾರಣ ಏನು ಎಂಬುದು ಇನ್ನು ತಿಳಿದುಬಂದಿಲ್ಲ.
ಇದನ್ನೂ ಓದಿ: ಯಾವುದೇ ವರ್ಕೌಟ್ ಮಾಡದೆ ಈ ಸರಳ ವಿಧಾನ ಫಾಲೋ ಮಾಡಿ 33 KG ತೂಕ ಇಳಿಸಿಕೊಂಡ ಮಹಿಳೆ! Weight Loss
ನಿನ್ನೆ ಮುಂಜಾನೆ ಬೋಯಿಂಗ್ 737-800 ಸಂಖ್ಯೆಯ ಜೆಜು ಏರ್‌ಲೈನ್ಸ್ ವಿಮಾನವು ರನ್‌ವೇಯಿಂದ ಸ್ಕಿಡ್ ಆಗಿ ವೇಗವಾಗಿ ಗಾರ್ಡ್‌ರೈಲ್‌ಗೆ ಅಪ್ಪಳಿಸಿದ ಪರಿಣಾಮ ದೊಡ್ಡದಾಗಿ ಬೆಂಕಿ ಹೊತ್ತಿಕೊಂಡು, ಇಡೀ ವಿಮಾನವೇ ಸುಟ್ಟು ಕರಕಲಾಯಿತು. ಈ ದುರಂತದಲ್ಲಿ 179 ಮಂದಿ ಮೃತಪಟ್ಟರು. ವಿಮಾನದ ಲ್ಯಾಂಡಿಂಗ್ ಗೇರ್ ವಿಫಲವಾದ ಕಾರಣ ಪೈಲಟ್ “ಬೆಲ್ಲಿ ಲ್ಯಾಂಡಿಂಗ್” ಗೆ ಪ್ರಯತ್ನಿಸಿದಂತಿತ್ತು. ವಿಮಾನದ ಅಡಿ ಭಾಗ ಅಂದರೆ ಹೊಟ್ಟೆಯು ರನ್‌ವೇನಲ್ಲಿ ಉಜ್ಜಿಕೊಂಡು ಹೋಗಿ ಅಪ್ಪಳಿಸಿತ್ತು. ತಾಂತ್ರಿಕ ದೋಷದಿಂದ ಲ್ಯಾಂಡಿಂಗ್ ಗೇರ್ ತೆರೆಯದ ಕಾರಣ ಪೈಲಟ್ ಬೆಲ್ಲಿ ಲ್ಯಾಂಡಿಂಗ್ಗೆ ಪ್ರಯತ್ನಿಸಿದ್ದರು ಎನ್ನಲಾಗಿದೆ.
🚨 BREAKING VIDEO: New video shows moment Boeing 737-800 plane carrying 181 people onboard crashes at Muan International Airport in South Korea. #Breaking #Muan #SouthKorea
pic.twitter.com/6aBHyRyrF9— Breaking News Video (@BreakingAlerter) December 29, 2024
ವಿಮಾನದಲ್ಲಿ 175 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು. 173 ಪ್ರಯಾಣಿಕರು ದಕ್ಷಿಣ ಕೊರಿಯನ್ನರು ಮತ್ತು ಇಬ್ಬರು ಥಾಯ್ ಪ್ರಜೆಗಳು. ಅಪಘಾತದಲ್ಲಿ ಇಬ್ಬರು ಬದುಕುಳಿದಿದ್ದಾರೆ. ಅವರಲ್ಲಿ ಒಬ್ಬ ಪ್ರಯಾಣಿಕ ಮತ್ತು ಇನ್ನೊಬ್ಬ ಸಿಬ್ಬಂದಿ. ವಿಮಾನವು ಸಂಪೂರ್ಣವಾಗಿ ನಾಶವಾಗಿದೆ ಎಂದು ಮುವಾನ್ ಅಗ್ನಿಶಾಮಕ ಕೇಂದ್ರದ ಮುಖ್ಯಸ್ಥ ಲೀ ಜಿಯೋಂಗ್-ಹೈಯಾನ್ ತಿಳಿಸಿದ್ದಾರೆ. (ಏಜೆನ್ಸೀಸ್)
ದಕ್ಷಿಣ ಕೊರಿಯಾ ವಿಮಾನ ಪತನ: ಕೊನೇ ಕ್ಷಣದಲ್ಲಿ ಕೈಕೊಟ್ಟ ಲ್ಯಾಂಡಿಂಗ್ ಗೇರ್, 179 ಮಂದಿ ದುರ್ಮರಣ! Flight Crash
ನೀವು ರಾತ್ರಿ ವೇಳೆ ಮೊಟ್ಟೆ ತಿನ್ನುತ್ತೀರಾ? ಆರೋಗ್ಯ ತಜ್ಞರು ಹೇಳೋದೇನು? ಇಲ್ಲಿದೆ ಉಪಯುಕ್ತ ಮಾಹಿತಿ… Eggs