ಮುಂಬೈ: ಬಾಲಿವುಡ್ ನಟ, ಗಾಯಕ, ನಿರ್ದೇಶಕ ಮತ್ತು ರೇಡಿಯೋ ಡಿಸ್ಕ್ ಜಾಕಿಯಿಂದ ದೂರದರ್ಶನ ನಿರೂಪಕನವರೆಗೆ ವಿಭಿನ್ನ ಪಾತ್ರಗಳಲ್ಲಿ ಪರಿಣತರಾಗಿರುವ ಅಣ್ಣು ಕಪೂರ್(Annu Kapoor) ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅಮೆರಿಕದ ಪೌರತ್ವವನ್ನು ಪಡೆಯುವುದು ನನಗೆ ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ನನ್ನ ಹೆಸರಿಗೆ ಉಳಗನಾಯಗನ್ ಎಂದು ಸೇರಿಸಬೇಡಿ; ಫ್ಯಾನ್ಸ್ಗೆ Kamal Haasan ಮನವಿ ಮಾಡಿದ್ದೇಕೆ?
ಅಣ್ಣು ಕಪೂರ್ ಮೂರು ಬಾರಿ ಮದುವೆಯಾಗಿದ್ದಾರೆ. 1992ರಲ್ಲಿ ಅವರು ಅಮೆರಿಕ ಮೂಲದ ಅನುಪಮಾ ಅವರನ್ನು ವಿವಾಹವಾದರು ಮತ್ತು ಅದು ಒಂದು ವರ್ಷದೊಳಗೆ ಕೊನೆಗೊಂಡಿತು. ನಂತರ ಆದ ಎರಡನೇ ವಿವಾಹ ಸುಮಾರು 10 ವರ್ಷಗಳ ಕಾಲವಷ್ಟೆ ಇತ್ತು. ಮೂರನೇ ಮದುವೆಯಾದರೂ ಹೆಚ್ಚು ಕಾಲ ಉಳಿಯಲಿಲ್ಲ. 2008ರಲ್ಲಿ ಮತ್ತೆ ಅವರು ತಮ್ಮ ಮೊದಲನೆ ಹೆಂಡತಿಯನ್ನು ಮದುವೆಯಾಗುತ್ತಾರೆ, ಅವರಿಬ್ಬರಿಗೂ ಮಕ್ಕಳಿದ್ದಾರೆ.
ಅಣ್ಣು ಕಪೂರ್ ಅವರು ಇತ್ತೀಚಿನ ತಮ್ಮ ಸಂದರ್ಶನದಲ್ಲಿ ಅಮೆರಿಕದ ಪತ್ನಿ ಮತ್ತು ಮಕ್ಕಳನ್ನು ಹೊಂದಿದ್ದರೂ, ಅಮೆರಿಕದ ಪೌರತ್ವದ ಬಗ್ಗೆ ಯೋಚಿಸಲೇ ಇಲ್ಲ. ವಿದೇಶದಲ್ಲಿ ನೆಲೆಸುವ ಯೋಚನೆಯೇ ನನಗೆ ಇರಲಿಲ್ಲ. ತಾನು ಅಮೆರಿಕದ ಪೌರತ್ವವನ್ನು ತೆಗೆದುಕೊಳ್ಳುವ ಬಗ್ಗೆ ಎಂದಿಗೂ ಯೋಚಿಸಲಿಲ್ಲ. ಪತ್ನಿ ಹಾಗೂ ಮಕ್ಕಳ ಮೇಲೆ ಯಾವುದೇ ಒತ್ತಡ ಹೇರಿಲ್ಲ ಎಂದು ಹೇಳಿದ್ದಾರೆ.
ಇದೆ ಸಮಯದಲ್ಲಿ ದೇಶಭಕ್ತಿಯ ಬಗ್ಗೆ ಮಾತನಾಡಿದ ಅವರು, ಆಗಸ್ಟ್ 15 ಅಥವಾ ಜನವರಿ 26 ಬಂದ ತಕ್ಷಣ ಜನರ ಮನಸ್ಸಿನಲ್ಲಿ ದೇಶಭಕ್ತಿ ಜಾಗೃತವಾಗುತ್ತದೆ. ಕ್ರಿಕೆಟ್ ಮೈದಾನದಲ್ಲಿ ಧ್ವಜಾರೋಹಣ ಮಾಡುವಾಗ ಜನರು ದೇಶಪ್ರೇಮವನ್ನು ನೆನಪಿಸಿಕೊಳ್ಳುತ್ತಾರೆ. ಮದುವೆಗೆ ಹೋಗಬೇಕಾದರೆ ಒಳ್ಳೆಯ ಸುಗಂಧ ದ್ರವ್ಯವನ್ನು ಧರಿಸಬೇಕು ಎಂಬುದಕ್ಕೆ ದೇಶಭಕ್ತಿ ಎಂಬುದು ಸುಗಂಧ ದ್ರವ್ಯವಲ್ಲ. ದೇಶಭಕ್ತಿ ಎಂದರೆ ನಿಮ್ಮ ದೇಹದಲ್ಲಿ ದಿನದ 24 ಗಂಟೆಯೂ ಹರಿಯುವ ರಕ್ತದ ಹೊಳೆ. ನಿಮ್ಮ ದೇಶಭಕ್ತಿಯು ಸಮಯ ಮತ್ತು ಅವಕಾಶವನ್ನು ಅವಲಂಬಿಸಿದ್ದರೆ ಅದು ದೇಶಭಕ್ತಿಯಲ್ಲ ಎಂದು ನಾನು ಜನರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)
ಆಲ್ಕೋಹಾಲ್ & ವಿಷಕಾರಿ ಜನರಿಂದ ದೂರವಿರಿ; ಬ್ರೇಕಪ್ ಬಳಿಕ Malaika Arora ಹೀಗೆಳಿದ್ದೇಕೆ?