ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ(Malaika Arora) ತಮ್ಮ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವ ವಿಚಾರ ಗೊತ್ತೆ ಇದೆ. ನಟ ಅರ್ಜುನ್ ಕಪೂರ್ ಅವರೊಂದಿಗಿನ ಬ್ರೇಕಪ್ ಬಳಿಕ ನಟಿಯ ಪೋಸ್ಟ್ಗಳು ಸಾಕಷ್ಟು ಸುದ್ದಿಯಾಗುತ್ತಿವೆ. ಸದ್ಯ ನಟಿಯ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ನಿಂದ ಅವರು ಈ ತಿಂಗಳು ವೆಲ್ನೆಸ್ ಚಾಲೆಂಜ್ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಅವರು ಆರೋಗ್ಯವಕರವಾಗಿರಲು 9 ಮಾನದಂಡಗಳನ್ನು ಉಲ್ಲೇಖಿಸಿದ್ದಾರೆ.
ಇದನ್ನು ಓದಿ: ಬ್ರೇಕಪ್ ಬಳಿಕ ಮಲೈಕಾ ಅರೋರಾ ಫಸ್ಟ್ ಪೋಸ್ಟ್ ; ಅರ್ಜುನ್ ಕಪೂರ್ ಹೇಳಿಕೆಗೆ ನಟಿ ಹೇಳಿದಿಷ್ಟು
ಮಲೈಕಾ ಅರೋರಾ ಅವರು ಆರೋಗ್ಯವಾಗಿರಲು 9 ಮಾನದಂಡಗಳನ್ನು ಹೊಂದಿದ್ದಾರೆ. ಮದ್ಯಪಾನದಿಂದ ದೂರವಿರುವುದು, ಎಂಟು ಗಂಟೆಗಳ ನಿದ್ದೆ, ಮಾರ್ಗದರ್ಶಕರ ಅವಶ್ಯಕತೆ, ದೈನಂದಿನ ವ್ಯಾಯಾಮ ಹೀಗೆ 9 ಮಾನದಂಡಗಳನ್ನು ಹಂಚಿಕೊಂಡಿದ್ದಾರೆ. ಅರ್ಜುನ್ ಕಪೂರ್ ಅವರು ತಮ್ಮ ಬ್ರೇಕಪ್ ವಿಚಾರವನ್ನು ಖಚಿತಪಡಿಸಿದಾಗಿನಿಂದ ಮಲೈಕಾ ಅರೋರಾ ಸಾಮಾಜಿಕ ಜಾಲತಾಣದಲ್ಲಿ ರಹಸ್ಯವಾದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಲೈಕಾ ಅರೋರಾ ಅವರು ನವೆಂಬರ್ ಚಾಲೆಂಜ್ ಅನ್ನು ನೀವು ನೋಡಬಹುದು.
‘ಸಿಂಗಮ್ ಎಗೇನ್’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ನಟ ಅರ್ಜುನ್ ಕಪೂರ್ಗೆ ಅಲ್ಲಿದ್ದವರು ಮಲೈಕಾ ಹೆಸರನ್ನು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಅರ್ಜುನ್ ‘ಇಲ್ಲ, ಇಲ್ಲ! ನಾನು ಇನ್ನೂ ಸಿಂಪಲ್ ಆಗಿದ್ದೇನೆ ಎಂದು ಹೇಳಿದರು.ಆದರೆ ಅರ್ಜುನ್‌ಗಿಂತ ಭಿನ್ನವಾಗಿ ಮಲೈಕಾ ತನ್ನ ಬ್ರೇಕಪ್ ಬಗ್ಗೆ ಮೌನವಾಗಿದ್ದಾರೆ. ಅವರ ಬ್ರೇಕಪ್ ವದಂತಿಗಳು ತಿಂಗಳುಗಟ್ಟಲೆ ಗಮನ ಸೆಳೆಯುತ್ತಿದ್ದವು. ಸದ್ಯ ಅರ್ಜುನ್ಕಪೂರ್ ಸಿಂಗಮ್ ಎಗೇನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)
Dhanush ಮುಂದಿನ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್; ಪೋಸ್ಟರ್ ಮೂಲಕ ಮಾಹಿತಿ ಹಂಚಿಕೊಂಡ ಚಿತ್ರತಂಡ