ಚೆನ್ನೈ: ಸಿನಿಮಾ ಸೆಲಿಬ್ರಿಟಿಗಳ ಬಗ್ಗೆ ಅಭಿಮಾನಿಗಳಲ್ಲಿ ವಿಭಿನ್ನ ಕೇಜ್ ಇದೆ. ತಮ್ಮ ನೆಚ್ಚಿನ ನಟರಿಗೆ ಅಥವಾ ನಟಿಯರಿಗೆ ಪ್ರೀತಿಯಿಂದ ಹೊಸ ಹೆಸರು ಅಥವಾ ಅಡ್ಡಹೆಸರುಗಳನ್ನು ಇಡುತ್ತಾರೆ. ಅದರಲ್ಲೂ ಸೌತ್ನಲ್ಲಿ ಇಂತಹ ಉದಾಹರಣೆಗಳು ಸಾಕಷ್ಟಿವೆ. ಕಾಲಿವುಡ್ನಲ್ಲಿ ರಜನಿಕಾಂತ್ ಅವರಿಗೆ ತಲೈವಾ ಎನ್ನುವ ಹಾಗೇ ಕಮಲ್ ಹಾಸನ್(Kamal Haasan) ಅವರಿಗೆ ಉಳಗ ನಾಯಗನ್ ಎಂದು ಕರೆಯುತ್ತಾರೆ. ಆದರೆ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿರುವ ಹಿರಿಯ ನಟ ಕಮಲ್ ಹಾಸನ್ ಅಭಿಮಾನಿಗಳು ಪ್ರೀತಿಯಿಂದ ನೀಡಿರುವ ಈ ಬಿರುದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಇದನ್ನು ಓದಿ: ಆಲ್ಕೋಹಾಲ್ & ವಿಷಕಾರಿ ಜನರಿಂದ ದೂರವಿರಿ; ಬ್ರೇಕಪ್ ಬಳಿಕ Malaika Arora ಹೀಗೆಳಿದ್ದೇಕೆ?
ತಮ್ಮ ಹೆಸರಿಗೆ ಯಾವುದೇ ರೀತಿಯ ಅಡ್ಡಹೆಸರನ್ನು ಸೇರಿಸಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿರುವ ಅವರು, ತಮ್ಮನ್ನು ಕಮಲ್ ಹಾಸನ್ ಎಂದೇ ಕರೆಯುವಂತೆ ಹೇಳಿದ್ದಾರೆ. ನೀವು ನನ್ನನ್ನು ತುಂಬಾ ಪ್ರೀತಿಸುತ್ತೀರಿ, ಅದಕ್ಕಾಗಿಯೇ ನನ್ನನ್ನು ‘ಉಳಗನಾಯಗನ್’ (ವಿಶ್ವ ನಾಯಕ) ಎಂದು ಕರೆಯುತ್ತೀರಿ. ಅಲ್ಲದೆ ನನಗೆ ಅನೇಕ ಇತರ ಅಲಿಯಾಸ್‌ಗಳನ್ನು ಸಹ ಬಳಸಲಾಗುತ್ತದೆ. ಆದರೆ ಯಾರಿಗೂ ಅಗೌರವ ತೋರದೆ ನನಗಿರುವ ಎಲ್ಲಾ ಶೀರ್ಷಿಕೆಗಳು ಮತ್ತು ಇತರ ಅಲಿಯಾಸ್‌ಗಳನ್ನು ಕೈಬಿಡುತ್ತೇನೆ ಎಂದು ತಿಳಿಸಿದ್ದಾರೆ.
ಉಳಗನಾಯಗನ್ನಂತಹ ಪ್ರೀತಿಯ ಬಿರುದುಗಳನ್ನು ನೀಡಿದ್ದಕ್ಕಾಗಿ ನಾನು ಯಾವಾಗಲೂ ಕೃತಜ್ಞತೆಯನ್ನು ಹೊಂದಿದ್ದೇನೆ. ಪ್ರತಿಯೊಬ್ಬರ ಪ್ರೀತಿಗೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ. ಸಹ ಕಲಾವಿದರು ಮತ್ತು ಅಭಿಮಾನಿಗಳು ನೀಡಿದ ಮತ್ತು ಸ್ವೀಕರಿಸಿದ ಪ್ರಶಂಸೆಯ ಮಾತುಗಳಿಂದ ನನಗೆ ತುಂಬಾ ಸಂತೋಷವಾಗಿದೆ. ನಿಮ್ಮ ಪ್ರೀತಿ ನನಗೆ ತುಂಬಾ ಅರ್ಥವಾಗಿದೆ. ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿ.
ನನ್ನ ನ್ಯೂನತೆಗಳ ಬಗ್ಗೆ ನನಗೆ ಅರಿವಿದೆ ಮತ್ತು ಮುಂದುವರಿಯಲು ಬಯಸುತ್ತೇನೆ. ಯಾವುದೇ ಕಲಾವಿದ ತನ್ನ ಕಲೆಗಿಂತ ದೊಡ್ಡವನಾಗಬಾರದು. ನಾನು ಇನ್ನೂ ಕಲಿಯಲು ಬಯಸುತ್ತೇನೆ. ಕಲೆಯೊಂದಿಗೆ ಸಂಪರ್ಕದಲ್ಲಿರಲು ನಾನು ಬಯಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಸುದೀರ್ಘ ಪೋಸ್ಟ್ನಲ್ಲಿ ಬರೆದಿದ್ದಾರೆ.
உங்கள் நான்,
கமல் ஹாசன். pic.twitter.com/OpJrnYS9g2
— Kamal Haasan (@ikamalhaasan) November 11, 2024
ಕಮಲ್ ಹಾಸನ್ ‘ಥಗ್ ಲೈಫ್’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಸಿಲಂಬರಸನ್ ಅವರ ಮಗನ ಪಾತ್ರದಲ್ಲಿ ನಟಿಸಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ತ್ರಿಶಾ ಕೃಷ್ಣನ್ ಸೇರಿ ಅಶೋಕ್ ಸೆಲ್ವನ್, ನಾಸಿರ್, ದೆಹಲಿ ಗಣೇಶ್, ಅಭಿರಾಮಿ, ಜೋಜು ಜಾರ್ಜ್, ಐಶ್ವರ್ಯ ಲಕ್ಷ್ಮಿ ಇತರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜುಲೈ 12ರಂದು ಬಿಡುಗಡೆಯಾದ ಇಂಡಿಯನ್ 2 ಸಿನಿಮಾದಲ್ಲಿ ಕಮಲ್ ಹಾಸನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು.(ಏಜೆನ್ಸೀಸ್)
Dhanush ಮುಂದಿನ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್; ಪೋಸ್ಟರ್ ಮೂಲಕ ಮಾಹಿತಿ ಹಂಚಿಕೊಂಡ ಚಿತ್ರತಂಡ