ಒಂದೇ ದಿನ 10 ಹುಡುಗರಿಗೆ ಕಿಸ್‌ ಮಾಡಿದ್ದೇನೆ; ಸ್ಟಾರ್​ ನಟಿಯ ಸೀಕ್ರೆಟ್​​ ರಿವೀಲ್

annehathaway
Published on

ಮುಂಬೈ: ಸಿನಿಮಾ ಇಂಡಸ್ಟ್ರೀಯಲ್ಲಿ ಕೆಲವು ಸಿಹಿ ಹಾಗೂ ಕಹಿ ಅನುಭವಗಳು ನಟ-ನಟಿಯರಿಗೆ ಆಗುತ್ತವೆ. ಹಾಲಿವುಡ್‌ ಸ್ಟಾರ್‌ ನಟಿ ಅನ್​​ ಹಾಥ್‌ವೇ ತನ್ನ ವೃತ್ತಿ ಜೀವನದ ಆರಂಭದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಒಂದೇ ದಿನ 10 ಹುಡುಗರಿಗೆ ಕಿಸ್​ ಮಾಡಿದ್ದ ಆ ಘಟನೆ ಕುರಿತಾಗಿ ಸಂದರ್ಶನವೊಂದರಲ್ಲಿ ನೆನಪು ಮಾಡಿ ಕೊಂಡಿದ್ದಾರೆ.

ಹಾಲಿವುಡ್‌ ಸ್ಟಾರ್‌ ನಟಿ ಆನ್‌ ಹಾಥ್‌ವೇ ಸಂದರ್ಶನವೊಂದರಲ್ಲಿ ಮಾತನಾಡಿ, ನನ್ನ ಹಾಗೂ ಹೀರೋ ನಡುವೆ ಕೆಮಿಸ್ಟ್ರಿ ಹೇಗೆ ಇರುತ್ತದೆ ಎಂದು ನೋಡುವ ಸಲುವಾಗಿ 10 ಮಂದಿ ಹುಡುಗರಿಗೆ ಕಿಸ್‌ ಮಾಡಬೇಕಾಯ್ತು. 2000 ಇಸವಿಯ ಸಮಯದಲ್ಲಿ ನನಗೆ ಈ ಪರಿಸ್ಥಿತಿ ಎದುರಾಗಿತ್ತು. ಕೆಮಿಸ್ಟ್ರಿ ಚೆನ್ನಾಗಿದ್ಯಾ ಎಂದು ನೋಡುವ ಸಲುವಾಗಿ ಹೀಗೆಲ್ಲಾ ಮಾಡುತ್ತಿದ್ದರು. ಬಹುಶಃ ಇದು ಅತೀ ಕೆಟ್ಟ ಸಂಗತಿ ಎಂದಿದ್ದಾರೆ.

10 ಜನ ಹುಡುಗರು ಬರುತ್ತಿದ್ದಾರೆ. ನೀವೇ ಅದಕ್ಕೆ ಹೀರೋ. ಎಲ್ಲರಿಗೂ ಕಿಸ್‌ ಮಾಡುವಾಗ ನೀವು ಎಕ್ಸೈಟ್‌ ಆಗುತ್ತೀರಾ ಎಂದು ಕೇಳಲಾಗಿತ್ತು. ನನ್ನ ತಲೆಯಲ್ಲಿ ಆಗ ಏನೂ ಅನಿಸುತ್ತಿರಲಿಲ್ಲ. ನನಗೆನಾದರೂ ಸಮಸ್ಯೆ ಇದ್ಯಾ ಎನ್ನುವ ಯೋಚನೆ ಬಂದಿದ್ದು ನಿಜ. ಅಂದು ನಾನು ಬಹಳ ಚಿಕ್ಕವಳಾಗಿದ್ದೆ. ಇದೆಲ್ಲವೂ ನನಗೆ ಅರ್ಥವಾಗುತ್ತಿರಲಿಲ್ಲ. ಆಡಿಷನ್‌ನಲ್ಲಿ ಯಾರೂ ಕೂಡ ಹರ್ಟ್‌ ಮಾಡಿರಲಿಲ್ಲ. ಆದರೆ, ಅಂದಿನ ದಿನಗಳು ಡಿಫರೆಂಟ್‌ ಆಗಿದ್ದವು. ಈಗ ವಿಚಾರಗಳು ಬೇಗ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

ಲವ್ & ಅದರ್ ಡ್ರಗ್ಸ್, ದಿ ಹಸಲ್, ಓಷಿಯನ್ 8, ಲೆಸ್ ಮಿಸರೇಬಲ್ಸ್, ದಿ ಡಾರ್ಕ್ ನೈಟ್ ರೈಸಸ್, ಬ್ರೈಡ್ ವಾರ್ಸ್, ಮುಂತಾದ ಚಿತ್ರಗಳಲ್ಲಿನ ಪಾತ್ರಗಳಿಗೆ ಆನ್ ಹ್ಯಾಥ್‌ವೇ ಹೆಸರುವಾಸಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net