ಗಂಡ ಸಂಶಯಪಿಶಾಚಿ- ಅಮ್ಮನ ಮನೆಗೆ ಬಂದಿದ್ದೇನೆ; ಡಿವೋರ್ಸ್​ ಪಡೆದರೆ ನನ್ನ ವಸ್ತು ವಾಪಸ್​ ಸಿಗುವುದೆ?

nyayadevte
Published on
ಮದುವೆಯಾಗಿ 2 ವರ್ಷ ಆಗಿದೆ. ಮೊದಲು ಬೇರೆಯವರ ಜೊತೆ ಎಂಗೇಜ್ಮೆಂಟ್ ಆಗಿತ್ತು. ಅದು ಮುರಿದ ಮೇಲೆ ಇವರನ್ನು ಮದುವೆಯಾದೆ. ಎಲ್ಲ ವಿಷಯ ತಿಳಿಸಿಯೇ ಮದುವೆಯಾಗಿದ್ದೆ. ಆದರೆ ಈಗ ನನ್ನ ಗಂಡ ಅದೇ ವಿಷಯಕ್ಕೆ ಯಾವಾಗಲೂ ಸಂಶಯ ಪಡುತ್ತಾರೆ. ನಿನಗೆ ಅವನ ಜೊತೆ ಈಗಲೂ ಸಂಬಂಧ ಇದೆ ಎಂದು ಹೇಳಿ, ಕುಡಿದು ಬಂದು ಕೈ ಮಾಡುತ್ತಾರೆ. ಈಗ ತವರಿನಲ್ಲಿ ಇದ್ದೇನೆ. ನನ್ನ ವಸ್ತುಗಳೆಲ್ಲ ಗಂಡನ ಹತ್ತಿರವೇ ಇದೆ. ನನಗೂ ಸಾಕಾಗಿದೆ. ಡಿವೋರ್ಸ್ ಪಡೆಯಬೇಕೆಂದುಕೊಂಡಿದ್ದೇನೆ. ನನಗೆ ಸಿಗುತ್ತದೆಯೇ? ನನ್ನ ವಸ್ತುಗಳೆಲ್ಲ ವಾಪಸ್ ಬರುತ್ತದೆಯೇ?

ಉತ್ತರ: ಅನವಶ್ಯಕವಾಗಿ ಹೆಂಡತಿಯ ಮೇಲೆ ಸಂಶಯ ಪಡುವುದು, ಕುಡಿದು ಬಂದು ಹೊಡೆಯುವುದು, ಪತ್ನಿಯ ವಸ್ತುಗಳನ್ನೆಲ್ಲ ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡು ಸತಾಯಿಸುವುದು ಇವೆಲ್ಲ ಕ್ರೂರತೆಯ ಅಂಶಗಳೇ. ಮದುವೆಗೆ ಹಿಂದೆ ನಿಮ್ಮ ಜೀವನದಲ್ಲಿ ಆಗಿರುವ ಘಟನೆಗಳನ್ನು ಹಿಡಿದು ಮದುವೆ ಆದ ಮೇಲೆ ಪತಿ ನಿಮ್ಮನ್ನು ಸತಾಯಿಸುವುದೂ ಕ್ರೂರವೇ.

ಇವೆಲ್ಲದರ ಆಧಾರದ ಮೇಲೆ ನೀವು ವಿಚ್ಛೇದನದ ಪ್ರಕರಣವನ್ನು ದಾಖಲಿಸಬಹುದು. ಹಾಗೆಯೇ ನೀವು ನಿಮ್ಮ ಪತಿಯ ವಿರುದ್ಧ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾಯ್ದೆಯ ಕೆಳಗೆ ಪ್ರಕರಣ ದಾಖಲಿಸಿ. ಆ ಪ್ರಕರಣದಲ್ಲಿ ನಿಮ್ಮ ವಸ್ತುಗಳನ್ನೆಲ್ಲ ಪತಿಯಿಂದ ಕೊಡಿಸಬೇಕೆಂದು ಮಧ್ಯಂತರ ಅರ್ಜಿ ಹಾಕಿ. ನ್ಯಾಯಾಲಯದಿಂದ ಅನುಕೂಲ ಆಗಬಹುದು.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ   https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net