

ಹಾಗೆ ನೋಡಿದರೆ ಷಿ ಮಾರ್ಚ್ 2018ರಲ್ಲಿ ಎರಡನೆಯ ಬಾರಿಗೆ ಅಧ್ಯಕ್ಷರಾದಾಗಲೇ ಅವರು ಜೀವಮಾನವಿಡೀ ರಾಷ್ಟ್ರಾಧ್ಯಕ್ಷರಾಗಿಯೇ ಮುಂದುವರಿಯುವುದು ನಿಶ್ಚಿತ ಎಂದಾಗಿತ್ತು. ಅದಕ್ಕಾಗಿ ಅವರು ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಮಹಾಧಿವೇಶನದಲ್ಲಿ ಪಕ್ಷದ ಸಮ್ಮತಿ ಪಡೆದುಕೊಳ್ಳುವ ಔಪಚಾರಿಕತೆಯಷ್ಟೇ ಬಾಕಿಯಿದ್ದದ್ದು. ಇದುವರೆಗೆ ಜೀವಮಾನಪೂರ್ತಿ ಪಕ್ಷದ ಮಹಾ ಕಾರ್ಯದರ್ಶಿ ಮತ್ತು ರಾಷ್ಟ್ರಾಧ್ಯಕ್ಷರ ಸ್ಥಾನ ಅನುಭವಿಸಿದ್ದವರು ಚೀನೀ ಜನತಾ ಗಣರಾಜ್ಯದ ಸ್ಥಾಪಕ ಮಾವೋ ಜೆದಾಂಗ್ ಮಾತ್ರ. 1949-76ರ ನಡುವಿನ ಅವರ 26 ವರ್ಷಗಳ ದೀರ್ಘ ಸರ್ವಾಧಿಕಾರದ ನಂತರ ಎರಡು ವರ್ಷಗಳು ಚೀನಾ ಅನುಭವಿಸಿದ್ದು ತಾತ್ಕಾಲಿಕ ರಾಜಕೀಯ ಅಸ್ಥಿರತೆ. ‘ಗ್ಯಾಂಗ್ ಆಫ್ ಫೋರ್’ ಎಂದು ಹೆಸರಿಸಲ್ಪಟ್ಟ ಮಾವೋರ ಮೂರನೆಯ ಪತ್ನಿ ಜಿಯಾಂಗ್ ಚಿಂಗ್ ಮತ್ತವರ ಮೂರು ಸಹಚರರ ರೆಕ್ಕೆಗಳನ್ನು ಕೊನೆಗೂ ಕತ್ತರಿಸಿ ಹುವಾ ಗುವೋಫೆಂಗ್ ಅಧ್ಯಕ್ಷರಾದರೂ, 1978-81ರ ನಡುವೆ ಅವರು ದೆಂಗ್ ಷಿಯಾವೋ ಪಿಂಗ್ ನೇತೃತ್ವದ ಉಚ್ಚಸ್ತರೀಯ ನಾಯಕರಿಂದ ಹಂತಹಂತವಾಗಿ ಮೂಲೆಗೊತ್ತರಿಸಲ್ಪಟ್ಟು ಇತಿಹಾಸಕ್ಕೆ ಸೇರಿಹೋದರು. ಅವರ ಉತ್ತರಾಧಿಕಾರಿ ಮತ್ತು ಚೀನಾ ಭಾಗ್ಯವಿಧಾತ ದೆಂಗ್ ಷಿಯಾವೋ ಪಿಂಗ್ ಚೀನಾವನ್ನು ಆರ್ಥಿಕ ಅಭ್ಯುದಯದ ಹಾದಿಗೇರಿಸಿದರು. ಆಂತರಿಕವಾಗಿ ಅವರು ತಂದ ರಾಜಕೀಯ ವ್ಯವಸ್ಥೆ ಮಹತ್ವಪೂರ್ಣ. ಮಾವೋರ ನೀತಿ, ಪಕ್ಷದ ಮೇಲೆ ತಮಗಿದ್ದ ಅಪರಿಮಿತ ಹಿಡಿತ ಹಾಗೂ ಅಪಾರ ಜನಬೆಂಬಲವನ್ನು ಉಪಯೋಗಿಸಿಕೊಂಡು ದೆಂಗ್ ಆಜೀವಪರ್ಯಂತ ಚೀನಾದ ಸರ್ವಾಧಿಕಾರಿಯಾಗಬಹುದಿತ್ತು. ಆದರೆ ರಾಷ್ಟ್ರಾಧ್ಯಕ್ಷ ಎಲ್ಲ ಅಧಿಕಾರವನ್ನೂ ತನ್ನ ಕೈಯಲ್ಲಿರಿಸಿಕೊಂಡು ಸರ್ವಾಧಿಕಾರಿಯಾಗುವುದು ಅವರಿಗೆ ಸಮ್ಮತವಿರಲಿಲ್ಲ. ಹೀಗಾಗಿ ಅವರು ಸಾಮೂಹಿಕ ನಾಯಕತ್ವದ ಪರಿಕಲ್ಪನೆ ರೂಪಿಸಿ ಅದನ್ನು ಕಾರ್ಯರೂಪಕ್ಕೂ ತಂದರು. ಅದರ ಪ್ರಕಾರ ಪಕ್ಷದ ವ್ಯವಹಾರಗಳು ಹಾಗೂ ದೇಶದ ಆಡಳಿತ ಏಳು ಸದಸ್ಯರ ಪಾಲಿಟ್ಬ್ಯೂರೋದ ಜವಾಬ್ದಾರಿಗಳಾದವು. ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರಾಧ್ಯಕ್ಷ ಆ ಏಳರಲ್ಲೊಬ್ಬನಾದರೂ ಆತ ಸರ್ವಾಧಿಕಾರಿಯಾಗುವಂತಿರಲಿಲ್ಲ. ದೆಂಗ್ರ ಪ್ರಕಾರ ಆತ ‘ಸಮಾನರಲ್ಲಿ ಮೊದಲಿಗ’. ಇದು ಬ್ರಿಟಿಷ್ ಕ್ಯಾಬಿನೆಟ್ನಲ್ಲಿ ಪ್ರಧಾನ ಮಂತ್ರಿ ಊಜ್ಟಿಠಠಿ ಅಞಟ್ಞಜ ಉಟ್ಠಿಚ್ಝಠ ಎಂದು ಕರೆಸಿಕೊಳ್ಳುವಂತೆ. ಹೀಗೆ ರಾಷ್ಟ್ರಾಧ್ಯಕ್ಷನ ಅಧಿಕಾರವನ್ನು ಇತರ ಆರು ಜನರೊಂದಿಗೆ ಹಂಚಿಕೊಂಡ ಅವರು ಅಧ್ಯಕ್ಷಾವಧಿಗಳನ್ನೂ ಎರಡಕ್ಕಷ್ಟೇ ಸೀಮಿತಗೊಳಿಸಿದರು.
ತಮ್ಮದೇ ನೀತಿಗನುಗುಣವಾಗಿ ದೆಂಗ್ 1989ರಲ್ಲಿ ಅಧಿಕಾರ ತ್ಯಜಿಸಿದ ತರುವಾಯದ ಕಾಲು ಶತಮಾನ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಿಸಿಪಿ ಮತ್ತು ಚೀನಾ ಸಾಗಿದವು. ಯಾಂಗ್ ಶಾಂಗ್ಕುನ್ ಒಂದು ಅವಧಿಗೆ, ಜಿಯಾಂಗ್ ಝೆಮಿನ್ ಮತ್ತು ಹು ಜಿಂತಾವೋ ಎರಡೆರಡು ಅವಧಿಗಳಿಗೆ ರಾಷ್ಟ್ರಾಧ್ಯಕ್ಷರಾದರು. ಇದೆಲ್ಲವೂ ಬದಲಾಗತೊಡಗಿದ್ದು ದೇಶದ ಏಳನೆಯ ಅಧ್ಯಕ್ಷರಾಗಿ ಷಿ ಜಿನ್ಪಿಂಗ್ ಮಾರ್ಚ್ 2013ರಲ್ಲಿ ಅಧಿಕಾರಕ್ಕೇರಿದಾಗ.
ದೆಂಗ್ರ ಆರ್ಥಿಕ ನೀತಿಗಳನ್ನು ಅವರ ಉತ್ತರಾಧಿಕಾರಿಗಳೆಲ್ಲರೂ ಮುಂದುವರಿಸಿ 2010ರ ಹೊತ್ತಿಗೆ ಚೀನಾವನ್ನು ಜಗತ್ತಿನ ಎರಡನೆಯ ಬೃಹತ್ ಅರ್ಥವ್ಯವಸ್ಥೆಯ ಸ್ಥಾನಕ್ಕೇರಿಸಿದರೇನೋ ನಿಜ. ಆದರೆ ಅವರು ಅದೇ ದೆಂಗ್ರ ಏಜಿಛಛಿ ಢಟ್ಠ್ಟ ಠಠ್ಟಿಛ್ಞಿಜಠಿಜ, ಚಿಜಿಛಛಿ ಢಟ್ಠ್ಟ ಠಿಜಿಞಛಿ ಎಂಬ ಕಿವಿಮಾತನ್ನೂ ಗಮನದಲ್ಲಿಟ್ಟುಕೊಂಡು, ಚೀನಾದ್ದು ‘ಶಾಂತಿಯುತ ಉತ್ಕರ್ಷ’ ಎಂಬ ಅಭಿಪ್ರಾಯ ಜಾಗತಿಕವಾಗಿ ಮೂಡುವಂತೆ ಮಾಡಲೂ ಶ್ರಮಿಸಿದರು. 2003-2013ರ ಅಧ್ಯಕ್ಷಾವಧಿಯಲ್ಲಿ ಹು ಜಿಂತಾವೋ ಚೀನೀ ಆರ್ಥಿಕ ಪ್ರಭಾವವನ್ನು ಏಶಿಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾಗಳಲ್ಲಿ ವಿಸ್ತರಿಸಲು ಪ್ರಯತ್ನಿಸಿದರೂ ಅದು ಜಾಗತಿಕವಾಗಿ ಆತಂಕಕ್ಕೆ ಎಡೆ ಮಾಡಿಕೊಡದಂತೆ ಎಚ್ಚ್ಚಕೆ ವಹಿಸಿದರು. ಸೆಂಕಾಕು ನಡುಗಡ್ಡೆಗಳ ವಿಷಯದಲ್ಲಿ ಜಪಾನ್ ಜತೆ ತಗಾದೆಗಿಳಿದರೂ ಸಂಬಂಧ ಹಾಳುಗೆಡವದಂತೆಯೂ ನೋಡಿಕೊಂಡರು. ಇದೆಲ್ಲವನ್ನೂ ನಕಾರಾತ್ಮಕವಾಗಿ ಬದಲಾಯಿಸಿದ್ದು ಷಿ ಜಿನ್ಪಿಂಗ್.
ಮಹತ್ವಾಕಾಂಕ್ಷಿ, ಅಧಿಕಾರಲಾಲಸಿ ಮತ್ತು ಸರ್ವಾಧಿಕಾರಿ ಪ್ರವೃತ್ತಿಯ ಷಿ ಮಾವೋ ನಂತರ ತಾವೇ ಚೀನಾದ ಮಹಾನ್ ನಾಯಕ ಎನಿಸಿಕೊಳ್ಳುವ ಬಯಕೆಯನ್ನು ಮೊದಲ ಅಧಿಕಾರಾವಧಿಯಲ್ಲೇ ತೋರತೊಡಗಿದರು. ಆ ಹಾದಿಯಲ್ಲಿ ಅವರು ದೆಂಗ್ ಷಿಯಾವೋಪಿಂಗ್ ರೂಪಿಸಿದ್ದ ರಾಜಕೀಯ ನಿಯಮಗಳು ಮತ್ತು ಸಂಪ್ರದಾಯಗಳನ್ನು ಮುರಿಯಬೇಕಾಗಿತ್ತು. ಅದನ್ನವರು ಮಾಡಿದ್ದು ಮೊದಲಿಗೆ ಎರಡು ಅಧ್ಯಕ್ಷಾವಧಿಗಳ ಮಿತಿ ತನಗೆ ಸಮ್ಮತವಿಲ್ಲ ಎಂದು ಹೇಳಿ, ನಂತರ ತಾನು ಆಜೀವಪರ್ಯಂತದ ಅಧ್ಯಕ್ಷಾವಧಿಗೆ ಹಕ್ಕುದಾರ ಎನ್ನುವುದನ್ನು ಪಕ್ಷದಲ್ಲಿ ಬಿತ್ತುವ ಮೂಲಕ. ಆ ಅವಧಿಯಲ್ಲೇ ಅವರು ಮಾವೋರ ವಿಚಾರಧಾರೆಗಳ ಜತೆ ತಮ್ಮ ವಿಚಾರಧಾರೆಗಳನ್ನೂ ಶಾಲಾ ಪಠ್ಯಕ್ರಮದ ಭಾಗವಾಗಿಸಿ ಹೊಸ ತಲೆಮಾರಿನಲ್ಲಿ ತಮ್ಮನ್ನು ಪ್ರತಿಷ್ಠಾಪಿಸಿಕೊಳ್ಳುವ ವ್ಯವಸ್ಥಿತ ಪ್ರಯತ್ನವನ್ನೂ ಆರಂಭಿಸಿಯಾಗಿತ್ತು. ಅವರ ಈ ಪ್ರಯತ್ನಗಳು ಯಾವುದೇ ವಿರೋಧವಿಲ್ಲದೇ ಯಶಸ್ವಿಯಾಗುವಂತೆ ಕಾಣತೊಡಗಿಯೂ ಇದ್ದವು. ಆದರೆ ಕಳೆದ ನಾಲ್ಕು ವರ್ಷಗಳ ಬೆಳವಣಿಗೆಗಳು ಷಿಗೆ ಬೇರೆಯೇ ಭವಿಷ್ಯವನ್ನು ಗಟ್ಟಿಮಾಡುವಂತೆ ಕಾಣತೊಡಗಿವೆ.
ಷಿ ಆರಂಭಿಸಿದ ಣ್ಞಛಿ ಆಛ್ಝಿಠಿ ಣ್ಞಛಿ ್ಕಚಛ ಅಥವಾ ಆಛ್ಝಿಠಿ ಚ್ಞಛ ್ಕಚಛ ಐಜಿಠಿಜಿಚಠಿಜಿಡಛಿ ಯೋಜನೆ ತಮ್ಮ ಆರ್ಥಿಕ ಅಭ್ಯುದಯದ ಬಾಗಿಲನ್ನೇ ತೆರೆಯುತ್ತದೆ ಎಂದು ಏಶಿಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ನೂರಕ್ಕೂ ಮಿಕ್ಕಿದ ದೇಶಗಳಷ್ಟೇ ಅಲ್ಲ, ಯೂರೋಪಿನ ಮಾಂಟೆನೀಗ್ರೋ ಸಹಾ ಅದಕ್ಕೆ ಮುಗಿಬಿದ್ದದುಂಟು. ಆದರೆ ನಂತರ ಶ್ರೀಲಂಕಾ, ಝಾಂಬಿಯಾ, ನಮೀಬಿಯಾ, ಉಗಾಂಡಾ, ಕಾಂಬೋಡಿಯಾ, ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳ ಅನುಭವಗಳು ಆ ಯೋಜನೆ ಅಮಾಯಕ ಮುಖವಾಡದ ಕರಾಳ ಸಾಲಸಂಕೋಲೆ ಷಡ್ಯಂತ್ರ ಎನ್ನುವುದನ್ನು ಜಾಗತಿಕವಾಗಿ ಮನಗಾಣಿಸಿತು. ಇದು ಷಿ ಅವರ ಯೋಜನೆ ಮತ್ತು ಚೀನಾದ ಪ್ರತಿಷ್ಠೆಗೆ ಬಿದ್ದ ಮೊದಲ ದೊಡ್ಡ ಹೊಡೆತ. ನಂತರ ಜಗತ್ತಿಗೆ ಎರಗಿದ ಕರೊನಾ ಸಾಂಕ್ರಾಮಿಕ ರೋಗ ಮತ್ತದರಲ್ಲಿ ಇದೇ ಷಿ ಜಿನ್ಪಿಂಗ್ ಸರ್ಕಾರದ ಪಾತ್ರ ಜಾಗತಿಕವಾಗಿ ಚೀನಾವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರೆ ಚೀನಾದೊಳಗೆ ಷಿ ಅವರನ್ನು ರಾಷ್ಟ್ರಘಾತಕ ನಾಯಕನನ್ನಾಗಿ ನೋಡುವಂತೆ ಜನತೆಯನ್ನು ಪ್ರೇರೇಪಿಸಿತು. ಜತೆಗೆ ವ್ಯಾಪಕ ಮತ್ತು ದೀರ್ಘಕಾಲೀನ ಲಾಕ್ಡೌನ್ಗಳು ಚೀನೀ ಅರ್ಥವ್ಯವಸ್ಥೆಯ ಬೆನ್ನೆಲುಬನ್ನೇ ಮುರಿದು ಅಷ್ಟರ ಮಟ್ಟಿಗೆ ಚೀನೀಯರ ಆದಾಯವನ್ನು ಕುಗ್ಗಿಸಿದ್ದಲ್ಲದೇ ‘ಝೀರೋ ಕೋವಿಡ್’ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಷಿ ಕೈಗೊಂಡ ಕರಾಳ ಕ್ರಮಗಳು ಜನಸಾಮಾನ್ಯರನ್ನು ಕಮ್ಯೂನಿಸ್ಟ್ ವ್ಯವಸ್ಥೆಯ ಕುರಿತಾಗಿಯೇ ಭ್ರಮನಿರಸನಗೊಳಿಸಿದವು.
ಇದೇ ಅವಧಿಯಲ್ಲಿ ಷಿ ಭಾರತದ ವಿರುದ್ಧ ಅನಗತ್ಯ ಸೇನಾ ಘರ್ಷಣೆ ಆರಂಭಿಸಿದ್ದು ಮತ್ತು ತೈವಾನ್ ಸುರಕ್ಷೆಗೆ ಅಪಾಯವೊಡ್ಡುವ ಕ್ರಮಗಳನ್ನು ಎಗ್ಗಿಲ್ಲದೇ ಕೈಗೊಳ್ಳತೊಡಗಿದ್ದು ಅವರನ್ನು ಜಾಗತಿಕವಾಗಿ ಶಾಂತಿಕಂಟಕನನ್ನಾಗಿ ಪ್ರತಿಷ್ಠ್ಠಾಪಿಸಿತು.
ಹೀಗೆ ಒಳಗಿನ ಅಶಾಂತಿ ಮತ್ತು ಹೊರಗಿನ ವಿರೋಧಗಳು ಚೀನಾಗೆ ತರತೊಡಗಿದ ಹಾನಿ ಹಿರಿಯ ಕಮ್ಯೂನಿಸ್ಟ್ ನಾಯಕರನ್ನು ತಟ್ಟತೊಡಗಿತು ಮತ್ತು ಪಕ್ಷದ್ದೇ ಅಂಗವಾದ ಪೀಪಲ್ಸ್ ಲಿಬರೇಷನ್ ಆರ್ವಿುಯ ಒಂದು ವರ್ಗದಲ್ಲಿ ಅಸಮಾಧಾನವನ್ನುಂಟುಮಾಡಿತು. ಚೀನೀ ವ್ಯವಸ್ಥೆಯಲ್ಲಿ ಇದು ದೊಡ್ಡದಾಗಿ ಕಾಣಿಸಿಕೊಳ್ಳದಿದ್ದರೂ ಒಳಗೊಳಗೇ ಅದೆಷ್ಟು ವ್ಯಾಪಕವಾಗಿತ್ತೆಂದರೆ ತಾನು ಯಾವುದೇ ಕಾರಣದಿಂದಾದರೂ ದೇಶದಿಂದ ಹೊರಗೆ ಕಾಲಿಟ್ಟರೆ ಅಧಿಕಾರ ತನ್ನ ಕೈನಿಂದ ತಪ್ಪಿಹೋಗುತ್ತದೆ ಎಂದು ಷಿ ಆತಂಕಕ್ಕೊಳಗಾಗುವಂತೆಯೂ ಆಯಿತು.
ಷಿ ಮತ್ತು ಚೀನಾಗೆ ಸಂಬಂಧಿಸಿದಂತೆ ಕಳೆದ ವರ್ಷದ ಸೆಪ್ಟೆಂಬರ್ 15ರಂದು ಜರುಗಿದ ಎರಡು ಪ್ರಕರಣಗಳು ಮುಖ್ಯವಾಗುತ್ತವೆ. ಅಂದು ಷಿ ಅವರ ಶಾಂತಿಕಂಟಕ ನೀತಿಗಳನ್ನು ಸಾಮೂಹಿಕವಾಗಿ ಎದುರಿಸುವ ಉದ್ದೇಶದಿಂದ ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಅಮೆರಿಕಾ ಒಟ್ಟುಗೂಡಿ ಅಖಿಓಖಿಖ ಎಂಬ ಸೇನಾಕೂಟ ರಚಿಸಿದವು. ಇದರಲ್ಲಿ ಆ ಮೂರು ದೇಶಗಳು ಅಧಿಕೃತ ಸದಸ್ಯರಾದರೂ ಜಪಾನ್, ಭಾರತ ಮತ್ತು ತೈವಾನ್ಗಳು ಅದೃಶ್ಯ ಸದಸ್ಯರಾಗಿವೆ. ಆಕಸ್ ಸ್ಥಾಪನೆಯಾದ ದಿನವೇ ಬೀಜಿಂಗ್ನಲ್ಲಿ ಷಿ ಹತ್ಯೆಗೈಯಲು ಕೆಲವರು ಪಿಎಲ್ ಅಧಿಕಾರಿಗಳು ಹೂಡಿದ್ದ ಸಂಚು ಬಯಲಾಯಿತು. ಇವೆರಡು ಘಟನೆಗಳು ಚೀನಾ ಬಗ್ಗೆ ಜಾಗತಿಕವಾಗಿ ಮತ್ತು ಷಿ ಬಗ್ಗೆ ಚೀನಾದೊಳಗೆ ಯಾವ ಬಗೆಯ ಚಿಂತನೆಗಳು ಜಾಲ್ತಿಯಲ್ಲಿವೆ ಎನ್ನುವುದನ್ನು ಅನಾವರಣಗೊಳಿಸಿದವು. ಇದೆಲ್ಲವನ್ನೂ ಸ್ವತಃ ಷಿ ಹೇಗೆ ನೋಡುತ್ತಾರೆ ಎಂದು ತಿಳಿಯಲು ನಾವು ಒಂದಿಡೀ ವರ್ಷ ಕಾಯಬೇಕಾಯಿತು.
ಇದೇ ಸೆಪ್ಟೆಂಬರ್ 15-16ರಂದು ಶಾಂಘೖ ಕೋಆಪರೇಷನ್ ಆರ್ಗನೈಜೇಷನ್ನ ಶೃಂಗಸಭೆ ಉಜ್ಬೇಕಿಸ್ತಾನದ ಸಮರ್ಕಂದ್ನಲ್ಲಿ ಜರುಗಿತಷ್ಟೇ. ಸ್ಥಾಪಕ ರಾಷ್ಟ್ರವಾಗಿ ಚೀನಾ ಎಸ್ಸಿಓ ಸಭೆಯಲ್ಲಿ ತನ್ನ ಅಧ್ಯಕ್ಷನ ಮೂಲಕ ಪ್ರತಿನಿಧಿಸಲ್ಪಡದಿರುವುದು ಅನುಚಿತ ನಡೆಯಾಗಿ ಜಗತ್ತಿನ ಹುಬ್ಬೇರಿಸುತ್ತಿತ್ತು. ಹೀಗಾಗಿ ಷಿ ಮೂವತ್ತೆರಡು ತಿಂಗಳುಗಳ ‘ಸ್ವದೇಶಬಂಧನ’ವನ್ನು ಮುರಿದು ಸಮರ್ಕಂದ್ಗೆ ತೆರಳಿದರು.
ಎಸ್ಸಿಓ ಶೃಂಗಸಭೆಗಾಗಿ ಸೇರಿದ ನರೇಂದ್ರ ಮೋದಿ ಮತ್ತು ವ್ಲಾದಿಮಿರ್ ಪುತಿನ್ ಮುಂತಾದ ನಾಯಕರು ದ್ವಿಪಕ್ಷೀಯ ಮಾತುಕಥೆಗಳನ್ನೂ ಆಯೋಜಿಸಿಕೊಂಡು ರ್ಚಚಿಸಿದರು. ಆದರೆ ಷಿ ಒಂಟಿಯಾಗುಳಿದದ್ದು ಮತ್ತು ತರಾತುರಿಯಲ್ಲಿ ಸ್ವದೇಶಕ್ಕೆ ಹಿಂತಿರುಗಿದ್ದು ಅವರು ನೆಮ್ಮದಿಗೆಟ್ಟಿದ್ದರು ಮತ್ತು ಅನೂಹ್ಯ ಆತಂಕದಿಂದ ಬಳಲುತ್ತಿದ್ದರು ಎಂಬ ಅನುಮಾನ ಮೂಡಿಸಿದವು. ನಂತರದ ಎರಡು ವಾರಗಳು ಬೀಜಿಂಗ್ನಲ್ಲಿ ಕಂಡದ್ದು ಅಥವಾ ‘ಕಾಣದೇಹೋದದ್ದು’ ಷಿ ಬಗೆಗಿನ ಅನುಮಾನಗಳನ್ನು ದಟ್ಟಗೊಳಿಸಿದವು.
ಹತ್ತು ವರ್ಷಗಳ ಹಿಂದೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಮತ್ತು ಕೋವಿಡ್-19 ಜಗತ್ತಿಗೆ ಆವರಿಸಿಕೊಳ್ಳುತ್ತಿದ್ದ ದಿನಗಳಲ್ಲಿ ಷಿ ಎರಡು ಮೂರು ವಾರಗಳವರೆಗೆ ‘ಅದೃಶ್ಯ’ರಾಗಿದ್ದುದುಂಟು. ಆದರೆ ಚೀನಾದಲ್ಲಿ ಎಲ್ಲವೂ ಸಹಜವಾಗಿಯೇ ನಡೆಯುತ್ತಿದ್ದುದರಿಂದ ಷಿ ಅದೃಶ್ಯದಾಟ ಹೆಚ್ಚೇನೂ ಊಹಾಪೋಹಗಳಿಗೆ ಕಾರಣವಾಗಿರಲಿಲ್ಲ. ಆದರೆ ಸಮರ್ಕಂದ್ನಿಂದ ಹಿಂತಿರುಗಿದ್ದೇ ಷಿ ಅದೃಶ್ಯರಾದದ್ದು, ಅವರ ಪ್ರಮುಖ ಟೀಕಾಕಾರ ಹಾಗೂ ಮಾಜಿ ಅಧ್ಯಕ್ಷ ಹು ಜಿಂತಾವೋ ಸಭೆಗಳಲ್ಲಿ ಕಾಣಿಸಿಕೊಂಡದ್ದು, ದೇಶಾದ್ಯಂತ ವಿಮಾನ, ರೈಲು ಸಾರಿಗೆ ಎರಡು ದಿನ ನಿಲುಗಡೆಗೆ ಬಂದದ್ದು ಮತ್ತು ರಾಜಧಾನಿಯಲ್ಲಿ 80,000 ಸೈನಿಕರು ಕಾಣಿಸಿಕೊಂಡದ್ದು ಷಿ ಪದಚ್ಯುತಗೊಂಡಿರಬಹುದೆಂಬ ಅನುಮಾನಕ್ಕೆ ದಾರಿಮಾಡಿಕೊಟ್ಟವು.
ಆದರೆ ಷಿ ಮತ್ತೆ ಕಾಣಿಸಿಕೊಂಡರು; ಪಕ್ಷವನ್ನೂ, ದೇಶವನ್ನೂ ಉದ್ದೇಶಿಸಿ ಅಕ್ಟೋಬರ್ 1ರಂದು ಕಮ್ಯೂನಿಸ್ಟ್ ಸರ್ಕಾರದ ಸ್ಥಾಪನೆಯ 73ನೇ ವಾರ್ಷಿಕೋತ್ಸವದಂದು ಪಕ್ಷದ ಪತ್ರಿಕೆ ಕೈ ಷಿ’ಯಲ್ಲಿ ಲೇಖನವೊಂದನ್ನೂ ಪ್ರಕಟಿಸಿಬಿಟ್ಟರು; ಈಗ ಮೂರನೆಯ ಅವಧಿಗೆ ಪಕ್ಷದ ಮಹಾಧಿವೇಶನದಲ್ಲಿ ಸಮ್ಮತಿಯನ್ನೂ ‘ದಕ್ಕಿಸಿ’ಕೊಂಡಿದ್ದಾರೆ; ಪಾಲಿಟ್ಬ್ಯೂರೋ ಸ್ಥಾಯಿ ಸಮಿತಿಯಲ್ಲಿ ಬಾಲಂಗೋಚಿಗಳನ್ನೇ ತುಂಬಿ, ದೆಂಗ್ ಹುಟ್ಟುಹಾಕಿದ್ದ ಸಾಮೂಹಿಕ ನಾಯಕತ್ವ ಪದ್ಧತಿಗೆ ಎಳ್ಳುನೀರು ಬಿಡಹೊರಟಿದ್ದಾರೆ.
ಷಿ ಮೂರನೆಯ ಬಾರಿಗೆ ಪಟ್ಟ ಕಟ್ಟಿಸಿಕೊಳ್ಳಲು ಇನ್ನೂ ಐದು ತಿಂಗಳಿವೆ. ಪಕ್ಷದ ಮಹಾಧಿವೇಶನದಲ್ಲಿ ಹು ಜಿಂತಾವೋಗಾದ ಅವಮಾನ, ಅದು ಪಕ್ಷದಲ್ಲಿ ಸೃಷ್ಟಿಸಿರಬಹುದಾದ ಅಸಂತೋಷ ಮತ್ತದರ ಜತೆಗೆ ಪೀಪಲ್ಸ್ ಲಿಬರೇಷನ್ ಆರ್ವಿುಯಲ್ಲಿ ಈಗಾಗಲೇ ಇರುವ ವಿರೋಧ ಈ ಐದು ತಿಂಗಳುಗಳನ್ನು ಷಿ ಬದುಕಿನ ಅತ್ಯಂತ ಭೀಕರ ಚಳಿಗಾಲವನ್ನಾಗಿಸಲಿವೆ.