More

    ಸೆಕೆಂಡ್ ಇನ್ನಿಂಗ್ಸ್​ ಆರಂಭಿಸಿದ ‘ಥಾಲಾ’; ತಮಿಳಿನಲ್ಲಿ ಮೊದಲ ಸಿನಿಮಾ ನಿರ್ಮಾಣ!

    ಚೆನ್ನೈ: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ನಂತರ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ ಆಡುತ್ತಿದ್ದಾರೆ. ಈ ನಡುವೆ ಸಿನಿಮಾ ಕ್ಷೇತ್ರಕ್ಕೆ ಧೋನಿ ಆಗಮಿಸತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿರಲಿಲ್ಲ. ಸದ್ಯ ಧೋನಿ ತಮ್ಮ ಹೆಸರಿನಲ್ಲ ಧೋನಿ ಎಂಟರ್ಟೈನ್ಮೆಂಟ್ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಇದೀಗ ಈ ಸಂಸ್ಥೆಯ ಮೂಲಕ ತಮಿಳು ಸಿನಿಮಾವೊಂದನ್ನು ನಿರ್ಮಾಣ ಮಾಡಲು ಧೋನಿ ಸಜ್ಜಾಗಿದ್ದಾರೆ.

    ಧೋನಿ ಎಂಟರ್ಟೈನ್ಮೆಂಟ್ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಪತ್ನಿ ಸಾಕ್ಷಿ ಸಿಂಗ್ ಧೋನಿ ಅವರ ಪರಿಕಲ್ಪನೆಯಲ್ಲಿ ಈ ಸಿನಿಮಾ ಕಾರ್ಯ ನಡೆಯುತ್ತಿದೆ. ಈ ಚಿತ್ರ ಕುಟುಂಬ ಸಮೇತ ನೋಡುವ ಮನರಂಜನಾತ್ಮಕ ಸಿನಿಮಾ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಹೆಸರಿಡದ ಚಿತ್ರವನ್ನು ರಮೇಶ್ ತಮಿಳ್ಮಣಿ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಹೆಸರು, ನಾಯಕ, ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುವುದು ಶೀಘ್ರದಲ್ಲೇ ಬಹಿರಂಗಗೊಳ್ಳುವ ಸಾಧ್ಯತೆಯಿದೆ.

    ಐಪಿಎಲ್​ನಲ್ಲಿ ಆರಂಭದಿಂದಲೂ ಚೆನ್ನೈ ಸೂಪರ್​ಕಿಂಗ್ಸ್​ ಪ್ರತಿನಿಧಿಸುವ ಧೋನಿ, ತಮಿಳುನಾಡಿನಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಧೋನಿಯ ಬಗ್ಗೆ ಅಪಾರ ಒಲವು ಇರುವ ಮಂದಿ ಚೆನ್ನೈನಲ್ಲಿದ್ದಾರೆ. ಹೀಗಾಗಿ ಧೋನಿಗೆ ತಮಿಳುನಾಡು ಎಂದರೆ ತವರಿನಷ್ಟೇ ಒಲವು. ಇದೇ ಕಾರಣದಿಂದ ತಮ್ಮ ಬ್ಯಾನರ್​ನಲ್ಲಿ ಮೊದಲ ಸಿನಿಮಾ ತಮಿಳಿನಲ್ಲಿ ನಿರ್ಮಾಣ ಮಾಡಬೇಕೆಂಬುದು ಧೋನಿಯ ನಿರ್ಧಾರವಾಗಿದೆ. ತಮಿಳು ಅಭಿಮಾನಿಗಳು ಧೋನಿಯನ್ನು ಪ್ರೀತಿಯಿಂದ ಥಾಲಾ ಎಂದು ಕರೆಯುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts