

| ದೇವರಾಜ್ ಕನಕಪುರ
ಎಲ್ಲವನ್ನೂ ಮಾತೖಭಾಷೆಯಲ್ಲೇ ಕಲಿಯುವಂತಾಗಿದ್ದರೆ ಇಂದು ಮತ್ತಷ್ಟು ಉನ್ನತ ಹುದ್ದೆಗಳಲ್ಲಿ ಕನ್ನಡಿಗರು, ಅದರಲ್ಲೂ ಗ್ರಾಮೀಣ ಭಾಗದ ಜನರೇ ಇರುತ್ತಿದ್ದರು. ಗ್ರಾಮೀಣ ಭಾಗದ ಬಹಳಷ್ಟು ಜನರಿಗೆ ಇಂಗ್ಲಿಷ್ ಕಬ್ಬಿಣದ ಕಡಲೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಇಂಗ್ಲಿಷ್ನಲ್ಲಿದ್ದ ವಿಷಯಗಳನ್ನು ಕನ್ನಡದಲ್ಲಿ ಕಲಿಸುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅಂದರೆ, ಕನ್ನಡದಲ್ಲಿ ಇಂಜಿನಿಯರಿಂಗ್ ಮಾಡಲು ಅವಕಾಶ ಕಲ್ಪಿಸುತ್ತಿದೆ. ಇದರಿಂದಾಗಿ ಇಂಜಿನಿಯರಿಂಗ್ನಲ್ಲಿ ಇಂಗ್ಲಿಷ್ನ ತೊಡಕಿನಿಂದಾಗಿ ಸರಾಗವಾಗಿ ಪಾಸಾಗದೇ ತೊಂದರೆ ಅನುಭವಿಸುತ್ತಿದ್ದ ವಿದ್ಯಾರ್ಥಿಗಳು ಇನ್ನು ಮುಂದೆ ಧೈರ್ಯದಿಂದ, ಆತ್ಮವಿಶ್ವಾಸದಿಂದ ಇಂಜಿನಿಯರಿಂಗ್ ಕೋರ್ಸ್ ಮುಗಿಸಬಹುದಾಗಿದೆ. ಸರ್ಕಾರದ ಈ ಹೊಸ ನಿರ್ಧಾರವು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹೊಸ ಕನಸನ್ನು ಹುಟ್ಟುಹಾಕಿದೆ.
ವಿಟಿಯು ಸಿದ್ಧತೆ: ಎಐಸಿಟಿಇ ಸೂಚನೆ ನೀಡುತ್ತಿದಂತೆಯೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕನ್ನಡದಲ್ಲಿ ಇಂಜಿನಿಯರಿಂಗ್ ಕೋರ್ಸ್ ಬೋಧನೆ ಮಾಡುವುದಕ್ಕಾಗಿ ಪಠ್ಯಕ್ರಮ ಸಿದ್ಧಪಡಿಸಿಕೊಳ್ಳುತ್ತಿದೆ. ಕನ್ನಡದಲ್ಲಿ ತಾಂತ್ರಿಕ ಕೋರ್ಸ್ ಪಡೆಯಲು ಅವಕಾಶ ಮಾಡಿಕೊಡಬೇಕು ಎಂಬ ಉದ್ದೇಶದಿಂದ ವಿಟಿಯು ಈ ಹಿಂದೆಯೇ ಸಿದ್ಧತೆ ನಡೆಸುತ್ತಿತ್ತು. ಇಂಜಿನಿಯರಿಂಗ್ ಶಿಕ್ಷಣ ನೀಡಬೇಕಾದಲ್ಲಿ ಅದಕ್ಕೆ ಬೇಕಾದ ಪಠ್ಯಪುಸ್ತಕವನ್ನು ರಚಿಸಬೇಕಾಗಿದೆ. ಆಂಗ್ಲ ಭಾಷೆಯಲ್ಲಿರುವ ಪಠ್ಯಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಬೇಕಿದೆ. ಇದಕ್ಕಾಗಿ ವಿಟಿಯು ವಿಷಯ ತಜ್ಞರ ಸಮಿತಿ ರಚಿಸಿದ್ದು, ಸಮಿತಿಯು ಅನುವಾದ ಕಾರ್ಯವನ್ನು ಕೈಗೆತ್ತಿ ಕೊಂಡಿದೆ. ಬೇಗ ಕನ್ನಡ ಪಠ್ಯ ಸಿದ್ಧವಾಗಲಿದೆ ಎನ್ನುತ್ತವೆ ವಿಟಿಯು ಮೂಲಗಳು.
ಗ್ರಾಮೀಣ ಪ್ರತಿಭೆ: ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಮಾತೖಭಾಷೆಯಲ್ಲಿ ಶಿಕ್ಷಣ ಪಡೆದಿರುತ್ತಾರೆ. ನಮ್ಮ ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಆಂಗ್ಲಭಾಷೆಯಲ್ಲಿ ಉತ್ತೀರ್ಣರಾಗುವುದು ಬಹಳ ಕಷ್ಟದ ವಿಷಯವಾಗಿದೆ. ಈ ಕಾರಣದಿಂದಲೇ ಬಹುತೇಕ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ನಂತರ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳಲು ಹಿಂಜರಿಯುತ್ತಾರೆ. ಬದಲಾಗಿ ಕಲಾ ಅಥವಾ ವಾಣಿಜ್ಯ ವಿಷಯ ತೆಗೆದುಕೊಂಡು ವ್ಯಾಸಂಗ ಮಾಡುತ್ತಾರೆ. ಇದೀಗ ಕನ್ನಡದಲ್ಲೇ ಇಂಜಿನಿಯರಿಂಗ್ ವ್ಯಾಸಂಗ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದು, ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿ ಗಳು ಇಂಜಿನಿಯರಿಂಗ್ ಆಯ್ಕೆ ಮಾಡಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ಪ್ಲೇಸ್ವೆುಂಟ್ ಸಮಸ್ಯೆ: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ಲೇಸ್ವೆುಂಟ್ಗೆ ಆಂಗ್ಲಭಾಷೆ ಮುಖ್ಯವಾಗಿರುತ್ತದೆ. ಬಹುರಾಷ್ಟಿŠೕಯ ಕಂಪನಿಗಳು ಕೇವಲ ಆಂಗ್ಲಭಾಷೆ ಮಾತ್ರವಲ್ಲ, ವಿದೇಶಿ ಭಾಷೆಯನ್ನು ಕಲಿತಿದ್ದರೆ ಉತ್ತಮ ಎಂಬ ನಿಟ್ಟಿನಲ್ಲಿ ಅಭ್ಯರ್ಥಿಗಳನ್ನು ಹುಡುಕುವುದರಿಂದ ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಿದವರಿಗೆ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಉದ್ಯೋಗ ಪಡೆದುಕೊಳ್ಳುವುದು ಕಷ್ಟವಾಗಬಹುದು. ಹೀಗಾಗಿ ಕನ್ನಡದ ಜತೆ ಆಂಗ್ಲ ಭಾಷೆಯ ಜ್ಞಾನವೂ ಇದ್ದರೆ ಒಳ್ಳೆಯದು ಎಂಬುದು ಎಲ್ಲರ ಅಭಿಪ್ರಾಯ.
ಎಐಸಿಟಿಇ ಅಧ್ಯಕ್ಷರೂ ಕನ್ನಡಿಗರು
ಇಡೀ ದೇಶದ ಇಂಜಿನಿಯರಿಂಗ್ ಕಾಲೇಜುಗಳಿಗೆ ನೀತಿ ನಿಯಮ ರೂಪಿಸುವ ಎಐಸಿಟಿಇ ಅಧ್ಯಕ್ಷರಾಗಿರುವ ಅನಿಲ್ ಸಹಸ್ರಬುದ್ಧೆ ಅವರು ಕನ್ನಡಿಗರು. ಇವರು ಇಂಜಿನಿಯರಿಂಗ್ ಪದವಿ ಮುಗಿಸಿದ್ದು, ಹುಬ್ಬಳ್ಳಿಯ ಕರ್ನಾಟಕ ವಿಶ್ವವಿದ್ಯಾಲ ಯದ ಬಿವಿಬಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ.
ಕನ್ನಡದಲ್ಲಿ ಶಿಕ್ಷಣ ನೀಡಲು ನಾವು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆಂಗ್ಲಭಾಷೆ ಎಲ್ಲ ಪದಗಳಿಗೂ ಕನ್ನಡ ಪದ ಹುಡುಕುವುದು ಕಷ್ಟವಾಗಿರುವುದರಿಂದ ತಾಂತ್ರಿಕ ನಿಘಂಟು ಬಹಳ ಮುಖ್ಯವಾಗಿದೆ. ಇದರ ರಚನಾ ಕಾರ್ಯ ಪ್ರಗತಿಯಲ್ಲಿದೆ.
| ಡಾ. ಎ.ಎಸ್. ದೇಶಪಾಂಡೆ ಕುಲಸಚಿವ, ವಿಟಿಯು