More

    ಅಂಜು ಗಂಡನ ಬಳಿ ಸೀಮಾ ಬಗ್ಗೆ ಕೇಳಿದ ವರದಿಗಾರ್ತಿ: ಅರವಿಂದ್​ ಕೊಟ್ಟ ಪ್ರತಿಕ್ರಿಯೆ ವೈರಲ್​

    ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಗಡಿಯಾಚೆಗಿನ ಪ್ರೇಮ ಪ್ರಕರಣಗಳದ್ದೇ ಭಾರೀ ಸುದ್ದಿಯಾಗಿದೆ. ಸೀಮಾ ಹೈದರ್​ ಎಂಬಾಕೆ ಪಾಕಿಸ್ತಾನದಿಂದ ಪಬ್​ಜಿ ಪ್ರಿಯಕರನನ್ನು ಹುಡುಕಿಕೊಂಡು ಭಾರತಕ್ಕೆ ಅಕ್ರಮವಾಗಿ ಬಂದು ಮದುವೆಯಾಗಿದ್ದರೆ, ರಾಜಸ್ಥಾನ ಮೂಲದ ಅಂಜು (ಈಗ ಫಾತಿಮಾ) ಎಂಬಾಕೆ ಫೇಸ್​ಬುಕ್​ ಫ್ರೆಂಡ್​ ಹುಡುಕಿಕೊಂಡು ಪಾಕಿಸ್ತಾನಕ್ಕೆ ಹೋಗಿ ಆತನನ್ನು ಮದುವೆ ಆಗಿದ್ದಾಳೆ.

    ಈ ಪ್ರಕರಣಗಳನ್ನು ಭಾರೀ ಸಂಚಲನ ಮೂಡಿಸಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲೂ ಇದು ಭಾರೀ ಚರ್ಚೆಯಾಗುತ್ತಿದೆ. ಇದರ ನಡುವೆ ವರದಿಗಾರ್ತಿಯೊಬ್ಬಳು ಅಂಜುವಿನ ಪತಿ ಅರವಿಂದ್​ನನ್ನು ಸಂದರ್ಶನ ಮಾಡಿದ್ದು, ಅದರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ ವಿಡಿಯೋದಲ್ಲಿ ವರದಿಗಾರ್ತಿ ಮಾಡಿರುವ ಎಡವಟ್ಟಿಗೆ ಅರವಿಂದ್​ ನೀಡಿರುವ ಪ್ರತಿಕ್ರಿಯೆ ನೆಟ್ಟಿಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

    ಇದನ್ನೂ ಓದಿ: ಬೆಂಗಳೂರಲ್ಲಿ ಕಂಪನಿ ನೋಂದಣಿ ಮಾಡಿಸಿಕೊಳ್ಳಲಾಗದೆ ಅಮೆರಿಕಕ್ಕೆ ಹಿಂದಿರುಗುವೆ ಎಂದ ಉದ್ಯಮಿ!

    ವಿಡಿಯೋದಲ್ಲಿ ವರದಿಗಾರ್ತಿ ಅಂಜು ಹೆಸರು ಹೇಳಲು ಹೋಗಿ ಸೀಮಾ ಎಂದು ಹೇಳುತ್ತಾಳೆ. ಸದ್ಯ ದೇಶದಲ್ಲಿ ಈ ಎರಡು ಹೆಸರು ತುಂಬಾ ಚಾಲ್ತಿಯಲ್ಲಿರುವುದರಿಂದ ವರದಿಗಾರ್ತಿಯು ಗೊಂದಲಕ್ಕೀಡಾಗಿ ಅಂಜು ಬದಲು ಸೀಮಾ ಹೆಸರನ್ನು ಕೇಳಿಬಿಟ್ಟಿದ್ದಾಳೆ. ಅದು ಕೂಡ ಲೈವ್​ನಲ್ಲೇ. ಇದೀಗ ಆ ವಿಡಿಯೋ ತುಣುಕು ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಹಾಗಾದ್ರೆ ವರದಿಗಾರ್ತಿ ಕೇಳಿದ್ದೇನು ಅಂತಾ ನೋಡುವುದಾದರೆ, ನೀವು ಇತ್ತೀಚೆಗೆ ಸೀಮಾಳ ಜತೆ ಮಾತನಾಡಿದ್ರಾ? ಎಂದು ಪ್ರಶ್ನಿಸಿದ್ದಾಳೆ. ಆದರೆ, ಸೀಮಾಗೂ ಅರವಿಂದ್​ಗೂ ಸಂಬಂಧವೇ ಇಲ್ಲ. ಇದರಿಂದ ಗೊಂದಲಕ್ಕೆ ಒಳಗಾಗುವ ಅರವಿಂದ್​, ವರದಿಗಾರ್ತಿಯ ಕಡೆ ನೋಡಿ ವಿಚಿತ್ರ ಪ್ರತಿಕ್ರಿಯೆ ನೀಡುತ್ತಾನೆ. ಆ ಬಳಿಕ ತನ್ನ ಪ್ರಮಾದವನ್ನು ಅರಿತ ವರದಿಗಾರ್ತಿ ಮತ್ತೆ ಅಂಜು ಜತೆ ಮಾತನಾಡಿದ್ರಾ ಎಂದು ಕೇಳುತ್ತಾಳೆ. ಬಳಿಕ ಅರವಿಂದ್​ ಇಲ್ಲ ಎಂದು ಉತ್ತರ ನೀಡುತ್ತಾನೆ.

    ಇದನ್ನೂ ಓದಿ: 498A ಕಾನೂನನ್ನು ಪತಿ ವಿರುದ್ಧದ ಅಸ್ತ್ರವನ್ನಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ: ಜಾರ್ಖಂಡ್​ ಹೈಕೋರ್ಟ್​

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. ವಿಡಿಯೋ ನೋಡಿ ನಗೆಗಡಲಲ್ಲಿ ತೇಲಿರುವ ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ಗಳ ಮೂಲಕ ವರದಿಗಾರ್ತಿಯ ಕಾಲೆಳೆಯುತ್ತಿದ್ದಾರೆ. (ಏಜೆನ್ಸೀಸ್​)

    ಮಕ್ಕಳಿಗೆ ಮಾಡಿ ಕೊಡಿ ರುಚಿಯಾದ ವೆಜ್ ಪ್ಯಾನ್‌ಕೇಕ್‌

    ಜ್ಯೋತಿಷಿಯಾಗಿ ಬದಲಾದ ನಿವೃತ್ತ ಯೋಧನಿಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 8 ತಿಂಗಳ ಬಳಿಕ ಬಂಧನ

    ಎಲ್ಲರೂ ಬೇಲಿ ಹಾರುತ್ತಿದ್ದಾರೆ ಎಂದ ಖುಷ್​​ಬೂ; ಉಡುಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಹೀಗಂದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts