ಜ್ಯೋತಿಷಿಯಾಗಿ ಬದಲಾದ ನಿವೃತ್ತ ಯೋಧನಿಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 8 ತಿಂಗಳ ಬಳಿಕ ಬಂಧನ

Ex-serviceman-turned-astrologer
Published on

ಕೊಟ್ಟಯಾಂ: ಜ್ಯೋತಿಷಿಯಾಗಿ ಬದಲಾಗಿರುವ ನಿವೃತ್ತ ಯೋಧನೊಬ್ಬ 15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಕೇರಳದ ವೈಕೊಮ್​ನಲ್ಲಿ ನಡೆದಿದೆ. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅನೇಕ ಬಾರಿ ದೌರ್ಜನ್ಯ 

ಬಂಧಿತನನ್ನು ಟಿವಿ ಪುರಂ ಮೂಲದ ಸುದರ್ಶನ್​ (55) ಎಂದು ಗುರುತಿಸಲಾಗಿದೆ. 2022ರ ನವೆಂಬರ್​ನಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಈಗ ಬಂಧಿಸಲಾಗಿದೆ. ಸಂತ್ರಸ್ತ ಬಾಲಕಿ ದಲಿತ ಸಮುದಾಯಕ್ಕೆ ಸೇರಿದವಳು. ಆಕೆಯ ಮೇಲೆ ಆರೋಪಿ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬೆದರಿಕೆ 

ದೌರ್ಜನ್ಯ ಸಂಗತಿ ಬಯಲಿಗೆ ಬಂದಾಗ ಸಂತ್ರಸ್ತೆ ಕುಟುಂಬಕ್ಕೆ ಆರೋಪಿ ಕೊಲೆ ಬೆದರಿಕೆ ಹಾಕಿದ್ದ. ಅಲ್ಲದೆ, ಫೋಟೋ ಮತ್ತು ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿದ್ದ. ಈ ಸಂಗತಿಯನ್ನು ತನ್ನ ಫ್ರೆಂಡ್ಸ್​ ಮತ್ತು ಕ್ಲಾಸ್​ ಟೀಚರ್​ಗೆ ಸಂತ್ರಸ್ತೆ ತಿಳಿಸಿದ್ದಳು. ಬಳಿಕ ಶಾಲಾ ಆಡಳಿತ ಮಂಡಳಿ ವೈಕೊಮ್​ ಪೊಲೀಸರಿಗೂ ಮತ್ತು ಪರಿಶಿಷ್ಠ ಜಾತಿ ಅಭಿವೃದ್ಧಿ ಇಲಾಖೆಯ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದರು.

ಜುಲೈ 22ರಂದು ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿ, ಪ್ರಕರಣ ದಾಖಲಿಸಿಕೊಂಡರು. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಎಸ್ಕೇಪ್​ ಆಗಿದ್ದ. ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net