'ಗ್ಯಾಂಗ್ಸ್​ ಆಫ್​ ಗೋದಾವರಿ' ಚಿತ್ರದಲ್ಲಿ ಇದೊಂದು ತಪ್ಪು ಮಾಡಿದ್ದೇನೆ; ನಟಿ ಅಂಜಲಿ

WhatsApp Image 2024-05-26 at 6.53.22 PM
Published on

ಆಂಧ್ರಪ್ರದೇಶ: ಕೃಷ್ಣ ಚೈತನ್ಯ ನಿರ್ದೇಶನದ "ಗ್ಯಾಂಗ್ಸ್ ಆಫ್ ಗೋದಾವರಿ" ಚಿತ್ರದಲ್ಲಿ ನಟ ವಿಶ್ವಕ್ ಸೇನ್, ನಟಿ ಅಂಜಲಿ ಮತ್ತು ನೇಹಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಈ ಹಿಂದೆಯೇ ಚಿತ್ರತಂಡ ತಿಳಿಸಿದಂತೆ ಇದೇ ಮೇ.17ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಇದೀಗ ಚಿತ್ರ ಮೇ.31 ಬಹುತೇಕ ಚಿತ್ರಮಂದಿಗರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ.

ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ಮಾಹಿತಿಗಳನ್ನು ಹಂಚಿಕೊಂಡ ತಮಿಳು ನಟಿ ಅಂಜಲಿ, "ಗ್ಯಾಂಗ್ಸ್ ಆಫ್ ಗೋದಾವರಿ' ನನಗೆ ಸಂಪೂರ್ಣವಾಗಿ ಹೊಸ ಪಾತ್ರದಲ್ಲಿ ನಟಿಸುವ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಸಿನಿಮಾದಲ್ಲಿ ಪ್ರಥಮ ಬಾರಿಗೆ ನನ್ನನ್ನು ಹೊಸ ರೋಲ್​ನಲ್ಲಿ ನೀವು ನೋಡಬಹುದು. ನಿರ್ದೇಶಕ ಚೈತು ಕಥೆಯನ್ನು ಹೇಳಿದ ಬಳಿಕ, ನಾನು ಸೆನ್ಸಾರ್ ಮಂಡಳಿಯಿಂದ ಅಂತಹ ಅಶ್ಲೀಲ ಭಾಷೆಗೆ ಅನುಮತಿ ಸಿಗುತ್ತದೆಯೇ ಎಂದು ಕೇಳಿದ್ದೆ" ಎಂದರು.

"ಇನ್ನು ಈ ಸಿನಿಮಾದಲ್ಲಿ ನಾನು ಕೆಟ್ಟ ಪದಗಳನ್ನು ಬಳಸಿದ್ದೇನೆ. ಇದನ್ನು ಚಿತ್ರದ ಅಂತಿಮ ಕಟ್‌ನಲ್ಲಿ ಸೇರಿಸಲಾಗಿದೆ ಎಂದು ನನಗೆ ಗೊತ್ತಾಯಿತು. 'ಗ್ಯಾಂಗ್ಸ್ ಆಫ್ ಗೋದಾವರಿ' ನನ್ನ ಹಿಂದಿನ ಕೆಲಸಗಳಿಗೆ ಹೋಲಿಕೆ ಮಾಡಿ, ಹೇಳುವುದಾದರೆ ಖಂಡಿತ ಭಿನ್ನವಾಗಿದೆ. ರತ್ನಮಾಲಾ ಪಾತ್ರಕ್ಕಾಗಿ ನಾನು ಹೆಚ್ಚು ಮೇಕಪ್​ ಮಾಡಿಯೇ ಇಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net