ಮುಂಬೈ: ಬಾಲಿವುಡ್ನ ಖ್ಯಾತ ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಮೆಹ್ತಾ ಇಳಿವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಪ್ರಾಣ ಕಳೆದುಕೊಂಡಿದ್ದರು. ಮನೆಯ 6ನೇ ಮಹಡಿಯಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದ ಅನಿಲ್ ಅವರ ಸಾವು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದರೂ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಟಿಯ ತಂದೆಯ ಸಾವಿಗೆ ಅಸಲಿ ಕಾರಣ ಏನು ಅನ್ನುವುದರ ಕುರಿತು ಚರ್ಚೆ ಜೋರಾಗಿದೆ. ಪ್ರಾಣ ಕಳೆದುಕೊಳ್ಳುವ ಕೆಲ ಹೊತ್ತಿಗೂ ಮುನ್ನ ಅನಿಲ್ ಅವರು ತಮ್ಮ ಪುತ್ರಿಯರಿಗೆ ಕರೆ ಮಾತನಾಡಿದ್ದರು ಎಂದು ವರದಿಯಾಗಿದ್ದು, ಕೆಲವೊಂದು ವಿಚಾರ ಹಂಚಿಕೊಂಡಿರುವ ಸುದ್ದಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಆರ್ಸಿಬಿಗೆ ರಾಹುಲ್, ರೋಹಿತ್ ಆಗಮನ ಫಿಕ್ಸ್; ತಂಡದಲ್ಲಿ ಈ ನಾಲ್ಕು ಬದಲಾವಣೆ ನಿಶ್ಚಿತ
ಅನಿಲ್ ಅವರ ಪತ್ನಿ ಜೋಯ್ಸೆ ಮುಂಜಾನೆ 9 ಗಂಟೆ ಸುಮಾರಿಗೆ ಪತಿ ಮನೆಯಲ್ಲಿ ಇಲ್ಲದ್ದನ್ನು ಗಮನಿಸಿದರು. ಅವರ ಚಪ್ಪಲಿ ಮನೆಯಲ್ಲೇ ಇತ್ತು. ಆದರೆ, ಪತಿ ಕಾಣಿಸಲಿಲ್ಲ. ಹೀಗಾಗಿ, ಅವರಿಗಾಗಿ ಹುಡುಕಾಟ ನಡೆಸಿದರು. ಅವರು ಬಾಲ್ಕನಿಗೆ ಬಂದು ನೋಡಿದಾಗ ಸೆಕ್ಯುರಿಟಿ ಗಾರ್ಡ್ ಸಹಾಯಕ್ಕಾಗಿ ಅರಚಾಡುತ್ತಿರುವುದು ಕಂಡು ಬಂತು. ಪಕ್ಕದಲ್ಲಿ ಪತಿ ರಕ್ತಸಿಕ್ತವಾಗಿ ಬಿದ್ದಿದ್ದು ಕಂಡು ಬಂತು. ಕೂಡಲೇ ಪೊಲೀಸರು ಹಾಗೂ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಈ ಘಟನೆ ನಡೆಯುವುದಕ್ಕೂ ಕೆಲವು ಗಂಟೆ ಮೊದಲು ಅನಿಲ್ ಅವರು ಮಕ್ಕಳಾದ ಮಲೈಕಾ ಅರೋರಾ ಹಾಗೂ ಅಮೃತಾ ಅರೋರಾಗೆ ಫೋನ್ ಮಾಡಿ ಮತುಕತೆ ನಡೆಸಿದ್ದರು ಎಂದು ವರದಿಯಾಗಿದೆ. ನಾನು ಅನಾರೋಗ್ಯದಿಂದ ಬೇಸತ್ತಿದ್ದೇನೆ ಎಂದು ಹೇಳಿರುವುದಾಗಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅನಿಲ್ ಅರೋರಾ ಮೆಹ್ತಾ ವಯೋಸಹಜ ಮಂಡಿನೋವುನಿಂದ ಬಳಲುತ್ತಿದ್ದರಂತೆ, ಆದರೆ ಇಷ್ಟೇ ಕಾರಣಕ್ಕೆ, ಪ್ರಾಣ ಹಾನಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರೇಕೆ ಎಂಬ ವಿಚಾರ ಎಲ್ಲರಲ್ಲೂ ಅನುಮಾನ ಮೂಡಿಸುತ್ತಿದೆ.