ಮುಂಬೈ: ಈ ಹಿಂದೆ ನಾಯಕತ್ವ, ತಂಡದಲ್ಲಿನ ಬಿಕ್ಕಟ್ಟು ಸೇರಿದಂತೆ ಅನೇಕ ವಿಚಾರಗಳಿಗೆ ಸದ್ದು ಮಾಡಿದ್ದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮಾಜಿ ನಾಯಕ ರೋಹಿತ್ ಶರ್ಮ ಸುದ್ದಿಯ ಕೇಂದ್ರ ಬಿಂದುವಾಗಿದ್ದರು ಎಂದರೆ ತಪ್ಪಾಗಲಾರದು. ಟೀಮ್ ಇಂಡಿಯಾ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ರೋಹಿತ್ ಮೈದಾನದ ಹೊರಗೂ ಹೇಗೆ ಸಕ್ರಿಯರಾಗಿರುತ್ತಾರೆ ಎಂಬುದಕ್ಕೆ ಸಹ ಆಟಗಾರ ಪಿಯೂಷ್ ಚಾವ್ಲಾ ವಿವರಿಸಿದ್ದು, ಹಿಟ್ಮ್ಯಾನ್ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಚಾವ್ಲಾ ಅವರು 2007 ರ T20 ವಿಶ್ವಕಪ್ ಮತ್ತು 2011 ODI ವಿಶ್ವಕಪ್ ವಿಜೇತ ಭಾರತೀಯ ತಂಡದ ಭಾಗವಾಗಿದ್ದರು, ಅದರಲ್ಲಿ ರೋಹಿತ್ ಕೂಡ ಇದ್ದರು. 2012ರಲ್ಲಿ ಕಡೆಯದಾಗಿ ಭಾರತದ ಪರ ಆಡಿದ ಚಾವ್ಲಾ 2023ರಲ್ಲಿ, ಚಾವ್ಲಾ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.ಇತ್ತೀಚಿನ ಸಂದರ್ಶನವೊಂದರಲ್ಲಿ, ರೋಹಿತ್ ಮೈದಾನದಿಂದ ಹೊರಗಿದ್ದರೂ ನಾಯಕನಾಗಿ ಹೇಗೆ ಸಕ್ರಿಯವಾಗಿರುತ್ತಾರೆ ಎಂಬುದನ್ನು ಬಹಿರಂಗಪಡಿಸಿದರು.
ಇದನ್ನೂ ಓದಿ: ದಯವಿಟ್ಟು ಪಾಕಿಸ್ತಾನದ ಬಗ್ಗೆ ಮಾತನಾಡಬೇಡಿ… ಭಾರತದ ವಿರುದ್ಧ ಸರಣಿಗೂ ಮುನ್ನ ಬಾಂಗ್ಲಾ ಆಟಗಾರ ಹೀಗೆನ್ನಲು ಕಾರಣವೇನು?
ನಾನು ರೋಹಿತ್ನೊಟ್ಟಿಗೆ ತುಂಬಾ ಕ್ರಿಕೆಟ್ ಆಡಿದ್ದೇನೆ. ನಾವು ಕ್ರಿಕೆಟ್ ಹೊರತಾಗಿ ಮೈದಾನದ ಹೊರಗೆ ಕೂಡ ಮಾತನಾಡುತ್ತಿರುತ್ತೇವೆ. ಒಮ್ಮೆ ಐಪಿಎಲ್ ಸಮಯದಲ್ಲಿ ರಾತ್ರಿ 2:30ಕ್ಕೆ ರೋಹಿತ್ ನನಗೆ ಮೆಸ್ಸೇಜ್ ಮಾಡಿ ನೀವು ಎದ್ದಿದ್ದೀರಾ ಎಂದು ಕೇಳಿದರು. ನಾನು ಹು ಅಂದ ಕೂಡಲೇ ಅವರು ನಾನಿದ್ದ ರೂಮಿಗೆ ಬಂದು ಒಂದು ಪೇಪರ್ ಮೇಲೆ ಡೇವಿಡ್ ವಾರ್ನರ್ರನ್ನು ಹೇಗೆ ಔಟ್ ಮಾಡಬೇಕೆಂಬುದನ್ನು ಬರೆದು ತಂದು ನನಗೆ ಅರ್ಥಮಾಡಿಸಿದರು. ನನ್ನಿಂದ ಹೇಗೆ ಉತ್ತಮವಾದುದ್ದನ್ನು ಪಡೆಯಬೇಕೆಂಬುದು ಆತನಿಗೆ ಚೆನ್ನಾಗಿ ತಿಳಿದಿದೆ.
ನನ್ನ ಪ್ರಕಾರ ರೋಹಿತ್ ಒಬ್ಬ ಉತ್ತಮ ನಾಯಕನಾಗಿದ್ದು, 2023ರಲ್ಲಿ ನಡೆದ ಏಕದಿನ ವಿಶ್ವಕಪ್, 2024ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಆತ ಬ್ಯಾಟಿಂಗ್ ಮಾಡಿದ ರೀತಿಯೇ ಇದಕ್ಕೆ ಉತ್ತಮ ಸಾಕ್ಷಿಯಾಗಿದೆ. ಮುಂಬರುವ ಯುವ ಪೀಳಿಗೆಗೆ ಆತ ಒಬ್ಬ ಆದರ್ಶ ನಾಯಕನಾಗಿದ್ದು, ಆತನಿಂದ ಕಲಿಯುವುದು ಸಾಕಷ್ಟಿದೆ ಎಂದು ಪಿಯೂಷ್ ಚಾವ್ಲಾ ಹಿಟ್ಮ್ಯಾನ್ರನ್ನು ಹಾಡಿ ಹೊಗಳಿದ್ದಾರೆ.