ಈ ಕಾಯಿಲೆಯಿಂದ ಬಳಲುತ್ತಿದ್ದಾರಂತೆ ಅನುಸೂಯಾ! ತಾನಾಗೇ ಟ್ರೋಲಿಗರ ಬಲೆಗೆ ಬಿದ್ದ ತೆಲುಗು ಬ್ಯೂಟಿ

Anasuya Bharadwaj Bikini

ಹೈದರಾಬಾದ್​: ಟಾಲಿವುಡ್​​ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯಾ ಭಾರದ್ವಾಜ್ ಬಗ್ಗೆ ಬಹುತೇಕರಿಗೆ ತಿಳಿದೇ ಇರುತ್ತದೆ. ನ್ಯೂಸ್ ರೀಡರ್ ಆಗಿ ವೃತ್ತಿ ಜೀವನ ಆರಂಭಿಸಿದ ಅನಸೂಯಾ ನಂತರ ಆ್ಯಂಕರ್ ಆಗಿ, ನಾಯಕಿಯಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸುವ ಮೂಲಕ ಸೆಲೆಬ್ರಿಟಿಯಾದರು. ಅದರಲ್ಲೂ ತಮ್ಮ ಸೌಂದರ್ಯ ಮತ್ತು ಅಭಿನಯದಿಂದಲೇ ಎಲ್ಲರನ್ನು ತಮ್ಮತ್ತ ಸೆಳೆದಿದ್ದಾರೆ. ಆದರೆ, ಅನಸೂಯಾ ಅವರಿಗೆ ವಿವಾದಗಳು ಹೊರತಲ್ಲ. ಅದರಲ್ಲೂ ತನ್ನ ಹಾಟ್​ ಡ್ರೆಸ್‌ಗಳಿಂದಲೇ ಆಗಾಗ ಟ್ರೋಲ್‌ಗೆ ಒಳಗಾಗುತ್ತಲೇ ಇರುತ್ತಾರೆ. ಆದರೆ, ಇದ್ಯಾವುದಕ್ಕೂ ಅವರು ಕ್ಯಾರೆ ಎನ್ನುವುದಿಲ್ಲ.

ತಾಜಾ ಸಂಗತಿ ಏನೆಂದರೆ, ಅನಸೂಯಾ ಅವರಿಗೆ ಒಂದು ಕಾಯಿಲೆ ಇದೆಯಂತೆ! ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಅನಸೂಯಾ ಅವರು ಸಿಂಬಾ ಚಿತ್ರದ ಮೂಲಕ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಸಿಂಬಾ ಸಿನಿಮಾ ರಿಲೀಸ್ ಆಗಲಿದ್ದು, ಇತ್ತೀಚೆಗಷ್ಟೇ ಪ್ರೀ ರಿಲೀಸ್ ಈವೆಂಟ್​ ನಡೆಯಿತು. ಈ ವೇಳೆ ಅನಸೂಯಾ ಆಡಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನಾನು ಶಾರ್ಟ್​ ಟೈಮ್ ಮೆಮೊರಿಯಿಂದ ಬಳಲುತ್ತಿದ್ದೇನೆ ಎಂದು ಅನಸೂಯಾ ಹೇಳಿಕೊಂಡಿದ್ದಾರೆ. ಸಿಂಬಾ ಸಿನಿಮಾದ ಪ್ರೀ ರಿಲೀಸ್​ ಈವೆಂಟ್​ ವೇಳೆ ಅನಸೂಯಾ ಬಗ್ಗೆ ವಿಶೇಷ ವಿಡಿಯೋ ಪ್ರದರ್ಶಿಸಲಾಯಿತು. ವಿಡಿಯೋ ನೋಡಿದ ಅನಸೂಯಾ, ನನ್ನ ವೃತ್ತಿ ಜೀವನದಲ್ಲಿ ನಾನು ಇಷ್ಟು ಸಿನಿಮಾ ಮಾಡಿರುವುದು ನನಗೆ ಆಶ್ಚರ್ಯ ತಂದಿದೆ ಎಂದರು.

ಸಿಂಬಾ ಕೂಡ ತುಂಬಾ ಅದ್ಭುತವಾಗಿದೆ ಮತ್ತು ನನ್ನ ಜೀವನದಲ್ಲಿ ನಾನು ಮಾಡಿದ ಪಾತ್ರಗಳಲ್ಲಿ ಇದು ಕೂಡ ಉತ್ತಮ ಪಾತ್ರವಾಗಿದೆ ಎಂದು ಹೇಳಿದರು. ಈ ಚಿತ್ರಕ್ಕೆ ಕೆಲಸ ಮಾಡಿದ ಎಲ್ಲರ ಬಗ್ಗೆಯೂ ಮಾತನಾಡಿದ ಅನಸೂಯಾ, ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಕೆಲ ತಂತ್ರಜ್ಞರ ಹೆಸರು ನೆನಪಿಲ್ಲ ಎಂದರು. ನನಗೆ ಶಾರ್ಟ್ ಟರ್ಮ್ ಮೆಮೊರಿ ಇದೆ ಎಂದು ಹೇಳಿದರು.

ನನಗೆ ಶಾರ್ಟ್​ ಟರ್ಮ್​ ಮೆಮೊರಿ ಇದೆ ಎಂದ ಅನಸೂಯಾ ಇದೇ ಸಂದರ್ಭದಲ್ಲಿ ನನಗೆ ವಯಸ್ಸಾಗುತ್ತಿದೆ ಎಂದು ಕಾಮೆಂಟ್ ಮಾಡುವ ಮೂಲಕ ತಾನಾಗೇ ಟ್ರೋಲರ್​ಗಳ ಬಲೆಗೆ ಬಿದ್ದಿದ್ದಾರೆ. ಇಷ್ಟು ದಿನ ತನ್ನನ್ನು ಯಾರಾದರೂ ಆಂಟಿ ಎಂದರೆ ಅನಸೂಯಾ ಉರಿದು ಬೀಳುತ್ತಿದ್ದರು. ಆದರೆ, ಇದೀಗ ತನಗೆ ವಯಸ್ಸಾಗುತ್ತಿದೆ ಎನ್ನುವ ಮೂಲಕ ತಾನೇ ಟ್ರೋಲರ್​ಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. (ಏಜೆನ್ಸೀಸ್​)

ಆ ಒಂದು ಕೆಲಸ ಮಾತ್ರ ನನ್ನ ಜೀವನದಲ್ಲೇ ಮಾಡುವುದಿಲ್ಲ: ಜಾಹ್ನವಿ ಕಪೂರ್​ ಓಪನ್​ ಟಾಕ್​!

ಪ್ರತಿ ನೋಟಿನಲ್ಲಿ ಗಾಂಧಿ ಏಕೆ ನಗುತ್ತಿದ್ದಾರೆ? ವಿದ್ಯಾರ್ಥಿಯ ಉತ್ತರ ವೈರಲ್​, ಆದರೂ ಒಂದು ಅನುಮಾನ!

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…