

ನವದೆಹಲಿ: ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಯೊಂದಕ್ಕೆ ವಿದ್ಯಾರ್ಥಿಯೊಬ್ಬ ಬರೆದಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿದ್ಯಾರ್ಥಿಯು ಸರಳವಾದ ಪ್ರಶ್ನೆಗೆ ತುಂಬಾ ತಮಾಷೆಯ ಉತ್ತರವನ್ನು ನೀಡಿದ್ದು, ಅದನ್ನು ನೋಡಿದವರೆಲ್ಲ ನಗೆಗಡಲಲ್ಲಿ ತೇಲುತ್ತಿದ್ದಾರೆ. ಅಷ್ಟಕ್ಕೂ ವಿದ್ಯಾರ್ಥಿ ಕೊಟ್ಟ ಉತ್ತರವೇನು ಎಂಬುದನ್ನು ತಿಳಿಯಲು ಮುಂದೆ ಓದಿ.
ಗಾಂಧೀಜಿ ಪ್ರತಿ ನೋಟಿನಲ್ಲಿ ಏಕೆ ನಗುತ್ತಿದ್ದಾರೆ? ಎಂಬ ಪ್ರಶ್ನೆಯನ್ನು ಪರೀಕ್ಷೆಯಲ್ಲಿ ಕೇಳಲಾಗಿದೆ. ಅದಕ್ಕೆ ವಿದ್ಯಾರ್ಥಿ, ಗಾಂಧೀಜಿ ಅತ್ತರೆ ಆ ನೋಟು ಒದ್ದೆಯಾಗುತ್ತದೆ. ಹೀಗಾಗಿ ನಗುತ್ತಿದ್ದಾರೆ ಎಂದು ಉತ್ತರಿಸಿದ್ದಾನೆ. ಈ ಉತ್ತರ ನೋಡಿ ಎಲ್ಲರೂ ಇದೀಗ ನಗುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು @rohit_hand_writing ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಡಲಾಗಿದೆ.
ಉತ್ತರ ನೀಡಿದ ವಿದ್ಯಾರ್ಥಿಗೆ ಶಿಕ್ಷಕರು 10ಕ್ಕೆ 10 ಅಂಕ ನೀಡಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಆದರೆ ಈ ವಿಡಿಯೋ ನಿಜವೋ ಸುಳ್ಳೋ ಎಂಬ ಅನುಮಾನ ಹಲವರಿಗೆ ಇದೆ. ಏಕೆಂದರೆ, ಪರೀಕ್ಷೆಯಲ್ಲಿ ಇಂತಹ ಪ್ರಶ್ನೆಗಳನ್ನು ಕೇಳುವುದಿಲ್ಲ ಎಂಬ ಅಭಿಪ್ರಾಯವನ್ನು ಅನೇಕ ನೆಟ್ಟಿಗರು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಪ್ರಶ್ನೆ ಮತ್ತು ಉತ್ತರವನ್ನು ಒಬ್ಬನೇ ವ್ಯಕ್ತಿ ಬರೆದಿದ್ದಾರೆ ಎಂದು ಕೆಲವರು ಭಾವಿಸಿದ್ದಾರೆ.
ಅದೇನೆ ಇರಲಿ ಇದನ್ನು ತಮಾಷೆಗೋಸ್ಕರ ಮಾಡಿರಬಹುದು. ಆದರೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ಈಗಾಗಲೇ ಅನೇಕ ಜನರನ್ನು ತಲುಪಿದೆ. ಸುಮಾರು 55 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಕೆಲವರು ಈ ಉತ್ತರ ತುಂಬಾ ಚೆನ್ನಾಗಿದೆ ಎಂದಿದ್ದಾರೆ. ಇನ್ನು ಕೆಲವರು ಇದು ನಿರೀಕ್ಷಿತ ಉತ್ತರ ಎಂದಿದ್ದಾರೆ.
ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಪೋಸ್ಟ್ ನಿಜವೋ ಸುಳ್ಳೋ ಎಂಬ ಅನುಮಾನ ಹಲವರಿಗೆ ಕಾಡುತ್ತಿದೆ. ಏಕೆಂದರೆ, ಪ್ರತಿದಿನ ಅನೇಕ ತಮಾಷೆಯ ಮೀಮ್‌ಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ. ಈ ಪ್ರಶ್ನೆ ತುಂಬಾ ಉತ್ಪ್ರೇಕ್ಷಿತವಾಗಿದೆ ಮತ್ತು ಉತ್ತರವೂ ಕೂಡ ಅದೇ ರೀತಿ ಇದೆ. ಆದ್ದರಿಂದ, ಇದನ್ನು ಕೇವಲ ನಗುವಿಗಾಗಿ ಮಾಡಿರುವುದಾಗಿ ತೋರುತ್ತದೆ. ಆದಾಗ್ಯೂ, ಈ ಸೃಜನಶೀಲ ಉತ್ತರವನ್ನು ಅನೇಕ ಜನರು ಇಷ್ಟಪಟ್ಟಿದ್ದಾರೆ. (ಏಜೆನ್ಸೀಸ್)