ಚೆನ್ನೈ: ಈ ಬಾರಿಯ ಐಪಿಎಲ್ 17ನೇ ಆವೃತ್ತಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ, ಇದೀಗ ಫೈನಲ್ ಹಂತವನ್ನು ಪ್ರವೇಶಿಸಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಪ್ಯಾಟ್ ಕಮ್ಮಿನ್ಸ್ ಕ್ಯಾಪ್ಟನ್ಸಿಯ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಸದ್ಯ ಫೈನಲ್ನಲ್ಲಿ ಭರ್ಜರಿ ಪೈಪೋಟಿ ಕೊಡಲು ಸಜ್ಜಾಗಿದ್ದೇ ಆದರೂ ಮಳೆರಾಯನ ಅಡ್ಡಿ ಎದುರಾಗಲಿದ್ಯಾ? ಎಂಬ ಚಿಂತೆಯಲ್ಲಿದೆ.
ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ಗೆ ಇಂದಿನ (ಮೇ 26) ಫೈನಲ್ ಪಂದ್ಯದ ಮೂಲಕ ತೆರೆ ಬೀಳಲಿದ್ದು, ಸನ್ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತಾ ನೈಟ್ರೈಡರ್ಸ್ ಭಾರೀ ಹಣಾಹಣಿಯಲ್ಲಿ ತೊಡಗಿದೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಈಗಾಗಲೇ ಟಿಕೆಟ್ ಖರೀದಿಸಿ ಕಾಯುತ್ತಿರುವ ಕ್ರಿಕೆಟ್ ಫ್ಯಾನ್ಸ್, ಸದ್ಯ ಮಳೆ ಬರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಒಂದೆಡೆ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಫೈನಲ್ ಹಣಾಹಣಿ ನಡೆಯುವುದೇ ಡೌಟ್ ಎನ್ನಲಾಗುತ್ತಿದೆ. ಮತ್ತೊಂದೆಡೆ ಈ ಎರಡು ಬಲಿಷ್ಠ ತಂಡಗಳ ಪೈಕಿ ನಾನು ಹೆಸರಿಸಿದ ತಂಡವು ಫೈನಲ್ ಗೆದ್ದು, ಐಪಿಎಲ್ 2024ರ ಟ್ರೋಫಿ ಎತ್ತಲಿದೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಸದ್ಯ ಈ ವಿಷಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.
"ಎರಡು ಬಲಿಷ್ಠ ತಂಡಗಳ ಮಧ್ಯೆ ನಡೆಯಲಿರುವ ಫೈನಲ್ ಪಂದ್ಯ ನಿಜಕ್ಕೂ ರೋಚಕವಾಗಿ ಮೂಡಿಬರಲಿದೆ. ಈ ಮ್ಯಾಚ್ ಖುಷಿ ನೀಡುವುದರಲ್ಲಿ ಅನುಮಾನವೇ ಬೇಡ. ಈ ಬಾರಿ ಸನ್ರೈಸರ್ಸ್ ಹೈದರಾಬಾದ್ ಟ್ರೋಫಿ ಎತ್ತಿದರೆ, ಆಶ್ಚರ್ಯ ಪಡಬೇಡಿ. ಯಾಕಂದ್ರೆ, ಕೆಕೆಆರ್ ಈಗಾಗಲೇ ಎರಡು ಬಾರಿ ಕಪ್ ಗೆದ್ದಿದೆ. ಇಂದು ನಡೆಯಲಿರುವ ಪಂದ್ಯದಲ್ಲಿ ಎಸ್ಆರ್ಎಚ್ ತಂಡವನ್ನು ಮಣಿಸಿ, ಕೆಕೆಆರ್ ಪಡೆ ಮತ್ತೊಮ್ಮೆ ಚಾಂಪಿಯನ್ಸ್ ಪಟ್ಟ ಅಲಂಕರಿಸಲಿದ್ದಾರೆ" ಎಂದು ಭವಿಷ್ಯ ನುಡಿದಿದ್ದಾರೆ,(ಏಜೆನ್ಸೀಸ್).