ನವದೆಹಲಿ: ಥ್ರೆಡ್ಸ್, ಮೆಟಾ ಆರಂಭಿಸಿದ ಹೊಸ ಸಾಮಾಜಿಕ ಪ್ಲಾಟ್‌ಫಾರ್ಮ್, ಎಲಾನ್ ಮಸ್ಕ್ ಟ್ವಿಟರ್‌ಗೆ ಪೈಪೋಟಿ ನೀಡುತ್ತಿದೆ. Instagramನ ಬ್ರ್ಯಾಂಡಿಂಗ್ ಹಾಗೂ ರಚನೆಯೊಂದಿಗೆ, ಥ್ರೆಡ್ಸ್ ಬಳಕೆದಾರರಿಗೆ ಸುಲಭವಾಗಿ ಲಾಗ್ ಇನ್ ಮಾಡಲು, ಸ್ನೇಹಿತರನ್ನು ಹುಡುಕಲು ಮತ್ತು ಅವರ ಸಂಪರ್ಕ ಸಾಧಿಸಲು ಅನುಮತಿಸುತ್ತದೆ. ಮೊದಲ ದಿನವೇ 30 ಮಿಲಿಯನ್ ಅಂದರೆ 3 ಕೋಟಿ ಬಳಕೆದಾರರು ಥ್ರೆಡ್ಸ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಪಠ್ಯ-ಆಧಾರಿತ ಚಾಟ್ ಅಪ್ಲಿಕೇಶನ್ ಎಂದೇ ಕರೆಯಲ್ಪಡುತ್ತಿರುವ ಥ್ರೆಡ್ಸ್, ಟ್ರೆಂಡಿಂಗ್ ವಿಷಯಗಳ ಬಗ್ಗೆ ಮಾತನಾಡಲು ವೇದಿಕೆಯನ್ನು ನೀಡುತ್ತದೆ. ಬಳಕೆದಾರರು ತಮ್ಮ ನೆಚ್ಚಿನ ಕ್ರಿಯೇಟರ್ಗಳನ್ನು ಇಲ್ಲಿ ಅನುಸರಿಸಬಹುದಾಗಿದ್ದು ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಬಹುದು. ಈ ಮೂಲಕ ಟ್ವಿಟರ್ನಲ್ಲಿ ಮಾಡಿದಂತೆಯೇ ಅವರ ಆಲೋಚನೆಗಳು, ಅಭಿಪ್ರಾಯಗಳು ಮತ್ತು ಸೃಜನಶೀಲತೆಯನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಬಹುದು.
ಇದನ್ನೂ ಓದಿ: ಥ್ರೆಡ್ಸ್ ಆ್ಯಪ್ ನಾಗಾಲೋಟಕ್ಕೆ ಬೆಚ್ಚಿಬಿದ್ರಾ ಎಲನ್ ಮಸ್ಕ್? ಮೆಟಾ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
ಪ್ರಸ್ತುತ ಟ್ವಿಟರ್ನಲ್ಲಿ 450 ಮಿಲಿಯನ್ ಅಂದರೆ 45 ಕೋಟಿ ಬಳಕೆದಾರರನ್ನು ಹೊಂದಿದೆ. ಒಂದೇ ದಿನಕ್ಕೆ ಥ್ರೆಡ್ಸ್ನಲ್ಲಿ 3 ಕೋಟಿ ಜನರು ನೊಂದಾಯಿಸಿಕೊಂಡಿದ್ದು ನೋಂದಣಿದಾರರ ಸಂಖ್ಯೆ ಇನ್ನು ಕೆಲವೇ ದಿನಗಳಲ್ಲಿ ಹೆಚ್ಚಾಗಲಿದೆ. ಆದರೆ ಕೆಲ ದಿನಗಳ ನಂತರ ಟ್ರೆಂಡ್ ಇಳಿದಂತೆಯೇ ನಿತ್ಯವೂ ಎಷ್ಟು ಜನರು ಹೊಸ ಮಾಧ್ಯಮವನ್ನು ಬಳಸಲಿದ್ದಾರೆ ಎನ್ನುವುದರ ಆಧಾರದ ಮೇಲೆ ಥ್ರೆಡ್ಸ್, ಟ್ವಿಟರ್ಅನ್ನು ಮುಳುಗಿಸುತ್ತಾ ಇಲ್ಲವೇ ಎನ್ನುವುದು ತಿಳಿದುಬರಲಿದೆ. (ಏಜೆನ್ಸೀಸ್)