More

    Twitter vs Threads; ಥ್ರೆಡ್ಸ್​ನಲ್ಲಿ ಒಮ್ಮೆ ಲಾಗಿನ್​ ಮಾಡಿದರೆ ಡಿಲೀಟ್ ಮಾಡುವುದು ಅಸಾಧ್ಯ ​

    ನ್ಯೂಯಾರ್ಕ್​: ಮೈಕ್ರೋಬ್ಲಾಗಿಂಗಗ ವೇದಿಕೆ ಟ್ವೀಟರ್​ಗೆ ಪರ್ಯಾಯ ಎಂಬಂತೆ ಬಿಂಬಿತವಾಗಿರುವ ಥ್ರೆಡ್ಸ್​ ಆ್ಯಪ್​ ಗುರುವಾರ ಬಿಡುಗಡೆಯಾಗಿದೆ. ಫೇಸ್​ಬುಕ್​ ಒಡೆತನದ ಮೆಟಾ ಕಂಪನಿಯ ಈ ಹೊಸ ಅಪ್ಲಿಕೇಶನ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಏಕೆಂದರೆ ಥ್ರೆಡ್ಸ್​ನಲ್ಲಿ ಸುಲಭವಾಗಿ ಲಾಗಿನ್​ ಆಗಬಹುದಾಗಿದೆ. ಆದರೆ, ಲಾಗೌಟ್​ ಮಾಡುವುದು ಅಷ್ಟು ಸುಲಭದ ಮಾತಲ್ಲ ಎಂದು ಹೇಳಲಾಗುತ್ತಿದೆ. ಹೊಸ ಆ್ಯಪ್​ ಹೇಗಿದೆ ನೋಡುವ ಎಂದು ನೀವು ಒಮ್ಮೆ ಖಾತೆಯನ್ನು ಸೃಜಿಸಿದರೆ ಅದನ್ನು ಯಾವುದೇ ಕಾರಣಕ್ಕೂ ಡಿಲೀಟ್​ ಮಾಡುವುದಕ್ಕೆ ಸಾಧ್ಯವಿಲ್ಲ.

    ಒಂದು ವೇಳೆ ನೀವು ಹಾಗೆ​ ಮಾಡಲು ಮುಂದಾದರೆ ಮೊದಲಿಗೆ ನಿಮ್ಮ ಇನ್ಸ್​​ಟಾಗ್ರಾಂ ಖಾತೆಯನ್ನು ಡಿಲೀಟ್​ ಮಾಡಿದಾಗ ಮಾತ್ರ ಥ್ರೆಡ್ಸ್​ ಖಾತೆಯನ್ನು ಶಾಶ್ವತವಾಗಿ ಡಿಲೀಟ್​ ಮಾಡಲು ಸಾಧ್ಯ ಎಂದು ಪ್ರೈವಸಿ ಪಾಲಿಸಿಯಲ್ಲಿ ಹೇಳಲಾಗಿದೆ.

    Meta Threads App

    ಇದನ್ನೂ ಓದಿ: AIADMKಯ ಏಕೈಕ ಸಂಸದನ ಆಯ್ಕೆ ಅಸಿಂಧುಗೊಳಿಸಿದ ಮದ್ರಾಸ್​ ಹೈಕೋರ್ಟ್​

    ಥ್ರೆಡ್ಸ್​ ಖಾತೆಯನ್ನು ಒಮ್ಮೆ ಡಿಲೀಟ್​ ಮಾಡಿದರೆ ಬೇರೆಯವರು ನೋಡಲು ಸಾಧ್ಯವಿಲ್ಲ. ಆಧರೆ, ನೀವು ಹಂಚಿಕೊಂಡ ಪೋಸ್ಟ್​ಗಳು ಮಾತ್ರ ಆ್ಯಪ್​ನ ಸರ್ವರ್​ ಅಲ್ಲಿ ಲೈವ್​ ಸ್ಟ್ರೀಮ್​ ಆಗುತ್ತಿರುತ್ತವೆ. ಖಾತೆಯನ್ನು ನಿಷ್ಕ್ರಿಯಗೊಳಿಸುವ ಮುನ್ನ ನಿಮ್ಮ ಪೋಸ್ಟ್​ಗಳನ್ನು ಒಂದೊಂದಾಗಿ ಡಿಲೀಟ್​ ಮಾಡಿದರೆ ಮಾತ್ರ ಎಲ್ಲೂ ಕಾಣದಂತೆ ಮಾಡಲು ಸಾಧ್ಯವಾಗುತ್ತದೆ.

    ಒಂದು ವೇಳೆ ಇನ್ಸ್​​ಟಾಗ್ರಾಂ ಖಾತೆಯನ್ನು ನೀವು ಡಿಲೀಟ್​ ಮಾಡಿದರೆ ಥ್ರೆಡ್ಸ್​ ಆ್ಯಪ್​ನಲ್ಲಿ ನೀವು ಹಂಚಿಕೊಂಡ ಮಾಹಿತಿ 90 ದಿನಗಳವರೆಗೂ ಸರ್ವರ್​ನಲ್ಲಿ ಉಳಿದಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts