More

    ವಿಶ್ವಕಪ್​ ಬೆನ್ನಲ್ಲೇ ನಿವೃತ್ತಿ ಘೋಷಿಸಿ ಬಾಂಗ್ಲಾದೇಶ ತಂಡಕ್ಕೆ ಆಘಾತ ಮೂಡಿಸಿದ ತಮೀಮ್​ ಇಕ್ಬಾಲ್

    ಢಾಕಾ: ಬಾಂಗ್ಲಾದೇಶ ಏಕದಿನ ಕ್ರಿಕೆಟ್​ ತಂಡದ ನಾಯಕ ತಮೀಮ್​ ಇಕ್ಬಾಲ್​ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯವನ್ನು ಘೋಷಿಸಿದ್ದಾರೆ.

    ಏಕದಿನ ವಿರ್ಶವಕಪ್​ ಆರಂಭವಾಗುವುದಕ್ಕೆ ಕೆಲ ತಿಂಗಳುಗಳು ಬಾಕಿ ಇರುವ ನಡುವೆಯೇ ತಮೀಮ್​ ಅಚ್ಚರಿಯ ರೀತಿಯಲ್ಲೇ ವಿದಾಯ ಘೋಷಿಸಿರುವುದು ಬಾಂಗ್ಲಾದೇಶ ತಂಡಕ್ಕೆ ಆಘಾತವನ್ನುಂಟು ಮಾಡಿದೆ.

    ಇದು ಸಕಾಲ

    ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸ ಮಾತನಾಡಿದ ತಮೀಮ್​ ಅಫ್ಘಾನಿಸ್ತಾನ ವಿರುದ್ಧ ಬುಧವಾರ ನಡೆದ ಮೊದಲ ಏಕದಿನ ಪಂದ್ಯವೇ ನನ್ನ ಕೊನೆಯ ಅಂತರಾಷ್ಟ್ರೀಯ ಕ್ರಿಕೆಟ್​ ಮ್ಯಾಚ್​ ಆಗಿದೆ. ತಾವು ನಿವೃತ್ತಿಯಾಗುತ್ತಿರುವ ವಿಷಯವನ್ನು ಪ್ರಸ್ತಾಪ ಮಾಡಿದ ಮರುಕ್ಷಣವೇ ಅವರು ಭಾವುಕರಾದರು. ಇದು ತಕ್ಷಣದ ನಿರ್ಧಾರವಲ್ಲ. ತುಂಬಾ ದಿನಗಳಿಂದ ಈ ಬಗ್ಗೆ ಯೋಚಿಸುತ್ತಿದ್ದು, ಕುಟುಂಬ ಸದಸ್ಯರ ಜೊತೆ ಚರ್ಚಿಸಿದ ನಂತರ ಇದು ಸಕಾಲ ಎನಿಸಿತು.

    Tamim Iqbal

    ಇದನ್ನೂ ಓದಿ: ವರ್ಗಾವಣೆ ದಂಧೆ ಆರೋಪ; ಮಾಜಿ ಸಿಎಂ ಎಚ್​.ಡಿ.ಕೆ-ಸಚಿವ ಜಾರ್ಜ್​ ನಡುವೆ ಮಾತಿನ ಚಕಮಕಿ

    ಅಫ್ಘಾನಿಸ್ತಾನ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪೂರ್ಣ ಫಿಟ್​ ಆಗದೆ ತಮೀಮ್​ ಕಣಕ್ಕಿಳಿದ ಕಾರಣ ತೀವ್ರ ಟೀಕೆಗೆ ಗುರಿಯಾಗಿದ್ದರು. ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯ ಸೋತ ಬಳಿಕ ತಮಿಮ್​ ಅವರು ನಿವೃತ್ತಿ ಘೋಷಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಬಾಂಗ್ಲಾದೇಶ ತಂಡದ ಎಡಗೈ ಆರಂಭಿಕನಾಗಿರುವ ತಮೀಮ್ ಇಕ್ಬಾಲ್​​ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 25 ಶತಕ ಸೇರಿದಂತೆ 15 ಸಾವಿರ ರನ್​ ಗಳಿಸಿದ್ದಾರೆ. ಏಕದಿನ ಮಾದರಿಯಲ್ಲಿ 14 ಶತಕ ಒಳಗೊಂಡಂತೆ 8,313 ರನ್​ ಗಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts