More

    ವರ್ಗಾವಣೆ ದಂಧೆ ಆರೋಪ; ಮಾಜಿ ಸಿಎಂ ಎಚ್​.ಡಿ.ಕೆ-ಸಚಿವ ಜಾರ್ಜ್​ ನಡುವೆ ಮಾತಿನ ಚಕಮಕಿ

    ಬೆಂಗಳೂರು: ರಾಜ್ಯ ಕಾಂಗ್ರೆಸ್​ ಸರ್ಕಾರ ಮಾಡುತ್ತಿರುವ ವರ್ಗಾವಣೇ ದಂಧೆ ಕುರಿತು ನನ್ನ ಬಳಿ ಸಾಕ್ಷ್ಯಾಧಾರಗಳಿವೆ ಸ್ಪೀಕರ್​ ಅನುಮತಿಸಿದರೆ ಅದನ್ನು ಸದನದಲ್ಲಿ ಪ್ಲೇ ಮಾಡುತ್ತೇನೆ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    ಗುರುವಾರ ಸದನದಲ್ಲಿ ಕೆಎಸ್​ಆರ್​ಟಿಸಿ ಬಸ್​ ಚಾಲಕ ಜಗದೀಶ್​ ಆತ್ಮಹತ್ಯೆ ವಿಚಾರವನ್ನು ಪ್ರಸ್ತಾಪಿಸಿದ ಎಚ್​ಡಿಕೆ ಸ್ಪೀಕರ್​ ಅನುಮತಿಸಿದರೆ ಸದನದಲ್ಲಿರುವ 224 ಶಾಸಕರಿಗೂ ಆಡಿಯೋವನ್ನು ಕೇಳಿಸಲು ಸಿದ್ದನಿದ್ದೇನೆ.

    ಮಾತಿನ ಚಕಮಕಿ

    ಈ ವೇಳೆ ಮಧ್ಯ ಪ್ರವೇಶಿಸಿದ ಇಂಧನ ಸಚಿವ ಕೆ.ಕೆ. ಜಾರ್ಜ್​ ಕುಮಾರಸ್ವಾಮಿಯವರೇ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬೇಡಿ. ಇಂಧನ ಇಲಾಖೆಯಲ್ಲಿ ವರ್ಗಾವಣೆ ನಡೆಯುತ್ತಿದೆ ಎಂದು ಆರೋಪಿಸಿ ಪೆನ್​ಡ್ರೈವ್ ತೋರಿಸಿದ್ದೀರಿ. ಈ ರೀತಿ ಹೇಳುವ ಬದಲು ಆ ಪೆನ್​ಡ್ರೈವ್​ಅನ್ನು ನಮಗೆ ಹಸ್ತಾಂತರಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ಥೇವೆ ಎಂದು ಹೇಳಿದ್ದರು.

    HDK KJ George

    ಇದನ್ನೂ ಓದಿ: ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ​; ಮೂವರು ಮಕ್ಕಳು ಸೇರಿ ನಾಲ್ವರ ಮೃತ್ಯು

    ಹಿಂದೆ ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಎಲ್ಲರೂ ನನ್ನ ಮೇಲೆ ಆರೋಪ ಮಾಡಿದ್ದರು. ಸಿಐಡಿ, ಸಿಬಿಐ ತನಿಖೆ ಬಳಿಕ ಸತ್ಯಾಂಶ ಹೊರಬಂತು. ನಾನು ದೋಷಮುಕ್ತನಾದೆ. ಆ ಸಮಯದಲ್ಲಿ ಯಾರೂ ಸಹ ವಿಷಾದ ವ್ಯಕ್ತಪಡಿಸಲಿಲ್ಲ ಎಂದು ಕಿಡಿಕಾರಿದ್ದರು.

    ಈ ವೇಳೆ ಜಾರ್ಜ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್​ಡಿಕೆ ನಾನು ನಿಮ್ಮ ಹೆಸರು ಎಲ್ಲಿಯೂ ಪ್ರಸ್ತಾಪಿಸಿಲ್ಲ. ನಿಮ್ಮ ಇಲಾಖೆಯಲ್ಲಿ ಯಾವ ಅಧಿಕಾರಿಗಳು ಮಾಡುತ್ತಾರೆ ಎಂಬುದು ನನಗೆ ಗೊತ್ತಿದೆ. ಸ್ಪೀಕರ್​ ಅನುಮತಿಸಿದರೆ ಇಲ್ಲಿಯೇ ಎಲ್ಲರಿಗೂ ಕೇಳಿಸುತ್ತೇನೆ ಎಂದು ಹೇಳಿದ್ದರು. ಈ ವೇಳೆ ಇದೇ ವಿಚಾರಕ್ಕೆ ಕುಮಾರಸ್ವಾಮಿ ಹಾಗೂ ಸಚಿವ ಜಾರ್ಜ್​ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts