ಗಗನಕ್ಕೇರಿದ ಟೊಮ್ಯಾಟೋ ಬೆಲೆ: ಹೊಲಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಕಳ್ಳತನ

Tomato Crop
Published on

ಹಾಸನ: ತರಕಾರಿ ಬೆಲೆಗಳು ಗಗನಕ್ಕೇರಿದ ಬೆನ್ನಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೋ ಬೆಲೆಯನ್ನು ಕಳ್ಳತನ ಮಾಡಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೋ ಬೆಲೆ ಕಳ್ಳತನವಾಗಿದ್ದು, ಜಮೀನಿನ ಮಾಲೀಕ ಸೋಮಶೇಖರ್ ಹಾಗೂ ಅವರ ಪುತ್ರ ಧರಣಿ ಹಳೇಬೀಡು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಮೀನಿನ ಮಾಲೀಕ ಸೋಮಶೇಖರ್ ಅನಾರೋಗ್ಯದಿಂದ ಬಳಲುತ್ತಿದ್ದರು ಸಹ ಟೊಮ್ಯಾಟೋ ಬೆಲೆಯನ್ನು ಬೆಳೆದಿದ್ದರು. ಕಳೆದ ಮೂರು ದಿನಗಳಿಂದ ಟೊಮ್ಯಾಟೋವನ್ನು ಕೊಯ್ದು ಮಾರಾಟ ಮಾಡುತ್ತಿದ್ದರು. ಬಾಕಿ ಉಳಿದಿರುವ ಬೆಳೆಯನ್ನು ಬುಧವಾರ ಕಟಾವು ಮಾಡಲು ಯೋಜಿಸಿದ್ದರು. ಆದರೆ, ಬುಧವಾರ ಬೆಳಗ್ಗೆ ಸೋಮಶೇಖರ್​ ಅವರ ಪುತ್ರ ಧರಣಿ ಜಮೀನಿಗೆ ತೆರಳಿದಾಗ ಕೃತ್ಯ ಬೆಳಕಿಗೆ ಬಂದಿದೆ.

Tomato Theft

ಮಂಗಳವಾರ ತಡರಾತ್ರಿ ಸೋಮಶೇಖರ್​ ಅವರ ಹೊಲಕ್ಕೆ ನುಗ್ಗಿರುವ ಕಳ್ಳರು 50 ಕೆಜಿ ತೂಕದ 60 ಬ್ಯಾಗ್​ಗಳಷ್ಟು ಟೊಮ್ಯಾಟೋ ಕದ್ದು ಪರಾರಿಯಾಗಿದ್ದಾರೆ. ಇದರ ಮೌಲ್ಯ 1.5 ಲಕ್ಷ ಎಂದು ಅಂದಾಜಿಸಲಾಗಿದ್ದು, ಹಳೇಬೀಡು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡು ಸ್ಥಳ್ಕಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ದೂರುದಾರರಿಗೆ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net