ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಡಿಎಲ್, ಆರ್ಸಿ ಕಾರ್ಡ್ಗಾಗಿ ಇನ್ನು ಮುಂದೆ ಆರ್ಟಿಒ ಕಚೇರಿಗೆ ಅಲೆದಾಡ ಬೇಕಿಲ್ಲ. ಏಕೆಂದರೆ, ಅವುಗಳನ್ನು ಮನೆ ಬಾಗಿಲಿಗೆ ತೆಲುಪಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದೆ.
ಇನ್ನು ಮುಂದೆ ಆರ್ಸಿ ಕಾರ್ಡ್ ಮತ್ತು ಡಿಎಲ್ ಅನ್ನು ಪೋಸ್ಟಲ್ ಮೂಲಕವೇ ಸಾರಿಗೆ ಇಲಾಖೆ ಮನೆಗಳಿಗೆ ಕೊರಿಯರ್ ಮಾಡಲಿದೆ. ಎನ್ವಲಪ್ ಕವರ್ನಲ್ಲಿ ಸೂಚನಾ ಫಲಕಗಳೊಂದಿಗೆ ಕೊರಿಯರ್ ವ್ಯವಸ್ಥೆ ಇರಲಿದೆ. ಈ ಸಂಬಂಧ ಅಂಚೆ ಇಲಾಖೆಯೊಂದಿಗೆ ಆರ್ಟಿಒ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಸಂಬಂಧ ಸರ್ಕಾರದಿಂದಲೂ ಅನುಮೋದನೆ ಪಡೆದುಕೊಂಡಿದ್ದು, ಸಾರಿಗೆ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ಆದೇಶ ಮಾಡಲಾಗಿದೆ.
ಮುಖ್ಯ ಅಂಚೆ ಕಚೇರಿ ಆಯುಕ್ತ, ಸಾರಿಗೆ ಮುಖ್ಯ ಆಯುಕ್ತರು ಸಭೆಯಲ್ಲಿ ಭಾಗಿಯಾಗಿ ನೂತನ ವ್ಯವಸ್ಥೆಗೆ ಅಸ್ತು ಎಂದಿದ್ದು, ಇನ್ಮುಂದೆ ಸ್ಪೀಡ್ ಪೋಸ್ಟ್ ಮೂಲಕವೇ ಆರ್ಸಿ- ಡಿಎಲ್ ಕಾರ್ಡ್ಗಳು ಮನೆಬಾಗಿಲಿಗೆ ಶಿಫ್ಟ್ ಆಗಲಿವೆ. ಅರ್ಜಿದಾರರು ಆನ್ಲೈನ್ ಮೂಲಕವೂ ದಾಖಲೆಗಳನ್ನು ಟ್ರ್ಯಾಕ್ ಮಾಡಲು ಅವಕಾಶ ಇದೆ.
ಈ ನೂತನ ವ್ಯವಸ್ಥೆ ಬಗ್ಗೆ ರಾಜ್ಯ ಸಾರಿಗೆ ಇಲಾಖೆ ಹೊರಡಿಸಿರುವ ಪತ್ರಿಕಾ ಪ್ರಕಟಣೆ ಇಲ್ಲಿದೆ ನೋಡಿ