ನ್ಯೂಸ್

ಸಿವಿಲ್, ಇಲೆಕ್ಟ್ರಿಕಲ್ ಇಂಜಿನಿಯರಿಂಗ್​ ಪದವೀಧರರಾ? ಬಿಇಎಲ್​ನಿಂದ ಅರ್ಜಿ ಆಹ್ವಾನ

suchetana

ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ನಲ್ಲಿನ (ಬಿಇಎಲ್) ಮಿಲಿಟರಿ ಕಮ್ಯುನಿಕೇಷನ್ ಎಸ್‍ಬಿಯು ಕಾಂಪ್ಲೆಕ್ಸ್‍ನಲ್ಲಿ ಉದ್ಯೋಗಾವಕಾಶವಿದ್ದು, ಸಂದರ್ಶನ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಒಟ್ಟು 16 ಹುದ್ದೆಗಳಿದ್ದು, ಒಂದು ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯರ್ಥಿಯ ವೈಯಕ್ತಿಕ ಕಾರ್ಯಕ್ಷಮತೆ, ಸಂಸ್ಥೆಯ ಅಗತ್ಯಕ್ಕೆ ಅನುಗುಣವಾಗಿ ಗರಿಷ್ಠ 3 ವರ್ಷ ಅವಧಿ ವಿಸ್ತರಿಸಲಾಗುವುದು.

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ, ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಗಳೂರಿನ ಬಿಇಎಲ್‍ನಿಂದ ನೇಮಕ ಮಾಡಿಕೊಳ್ಳುವ ಅಭ್ಯರ್ಥಿಗಳನ್ನು ಆರಕೋಣಂ, ವಿಶಾಖಪಟ್ಟಣ, ಕೊಚ್ಚಿ, ಗೋವಾ, ಮುಂಬೈನಲ್ಲಿ ನೇಮಕ ಮಾಡಲಾಗುವುದು, ಒಟ್ಟು 16 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಸಾಮಾನ್ಯವರ್ಗಕ್ಕೆ 6 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 5, ಎಸ್‍ಸಿ -3, ಎಸ್‍ಟಿಗೆ 1, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 1 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

ಹುದ್ದೆಗಳ ಮಾಹಿತಿ

* ಟ್ರೈನಿ ಇಂಜಿನಿಯರ್ ಐ ಸಿವಿಲ್ - 10

* ಪ್ರಾಜೆಕ್ಟ್ ಇಂಜಿನಿಯರ್ ಐ ಎಲೆಕ್ಟ್ರಿಕಲ್ - 6

ಶೈಕ್ಷಣಿಕ ಅರ್ಹತೆ: ಸಿವಿಲ್ ಮತ್ತು ಎಲೆಕ್ಟ್ರಿಕಲ್‍ನಲ್ಲಿ ಬಿಇ, ಬಿ.ಟೆಕ್ ಪದವಿ ಪಡೆದಿರಬೇಕು. ಸಾಮಾನ್ಯ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಉಳಿದ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ ಸಾಕು. ವೃತ್ತಿ ಅನುಭವ ಅವಶ್ಯ.

ವಯೋಮಿತಿ: 1.1.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 25 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ 3 ರಿಂದ 10 ವರ್ಷ ವಯೋ ಸಡಿಲಿಕೆ ಇದೆ.

ವೇತನ: ಮೊದಲ ವರ್ಷ ಮಾಸಿಕ 25,000 ರೂ. 2ನೇ ವರ್ಷ ಮಾಸಿಕ 28,000, 3ನೇ ವರ್ಷ 31,000 ರೂ. ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಸಿದ್ಧಪಡಿಸಲಾದ ಆಯ್ದಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ದಿನಾಂಕ ಹಾಗೂ ವಿವರಗಳನ್ನು ಆಯ್ಕೆಯಾದ ಅಭ್ಯರ್ಥಿಗಳ ಮೇಲ್‍ಗೆ ಕಳುಹಿಸಲಾಗುವುದು.

ಅರ್ಜಿ ಶುಲ್ಕ: ಎಸ್‍ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 200 ರೂ. ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 16.2.2021

ಅಧಿಸೂಚನೆಗೆ: https://bit.ly/3riiA7y

ಮಾಹಿತಿಗೆ: https://www.bel-india.in

ಹೆಚ್ಚಿನ ಉದ್ಯೋಗ ಸುದ್ದಿಗೆ