More

    ನೋಟು ಮುದ್ರಣ ಕೇಂದ್ರದಲ್ಲಿ ವಿವಿಧ ಉದ್ಯೋಗಗಳಿಗೆ ಅರ್ಜಿ ಆಹ್ವಾನ

    ಸೆಕ್ಯುರಿಟಿ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೋರೇಷನ್ ಆಫ್​ ಇಂಡಿಯಾ ಲಿಮಿಟೆಡ್‍ನ (ಎಸ್‍ಪಿಎಂಸಿಐಎಲ್) 9 ಘಟಕಗಳಲ್ಲಿ ಒಂದಾಗಿರುವ ಕೋಲ್ಕತದ ಇಂಡಿಯಾ ಗವರ್ನಮೆಂಟ್ ಮಿಂಟ್‍ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
    ಎಸ್‍ಪಿಎಂಸಿಐಎಲ್ ನೋಟುಗಳು, ಪಾಸ್‍ಪೋರ್ಟ್​, ಸ್ಟ್ಯಾಂಪ್​ ಪೇಪರ್ಸ್, ಅಂಚೆ ಚೀಟಿಗಳ ವಿನ್ಯಾಸ ಹಾಗೂ ಮುದ್ರಣದಲ್ಲಿ ತೊಡಗಿದ್ದು, ಇಲ್ಲಿನ ಕೆಲ ವಿಭಾಗಗಳಲ್ಲಿನ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇಲ್ಲಿ ನೇಮಕಗೊಂಡ ಅಭ್ಯರ್ಥಿಗಳು ಇದರ ಯಾವುದೇ ಶಾಖೆಯಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಒಟ್ಟು ಹುದ್ದೆಗಳು: 54.

    ಹುದ್ದೆ, ಸಂಖ್ಯೆ ವಿವರ
    * ಸೂಪರ್‍ವೈಸರ್ (ಟೆಕ್ ಆಪರೇಟರ್ಸ್ – ಮೆಕ್ಯಾನಿಕಲ್-8, ಸಿವಿಲ್-1, ಮೆಟಲರ್ಜಿಕಲ್-1) – 10
    * ಎನ್‍ಗ್ರೇವರ್-ಐಐಐ (ಸ್ಕಲ್ಪಚರ್-2, ಮೆಟಲ್ ವರ್ಕ್ಸ್​-2, ಪೇಂಟಿಂಗ್-2)- 6
    * ಜೂನಿಯರ್ ಆಫೀಸ್ ಅಸಿಸ್ಟೆಂಟ್ – 12
    * ಜೂನಿಯರ್ ಬುಲಿಯನ್ ಅಸಿಸ್ಟೆಂಟ್ – 10
    * ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್) – 16

    ಶೈಕ್ಷಣಿಕ ಅರ್ಹತೆ: ಇಂಜಿನಿಯರಿಂಗ್ ಡಿಪ್ಲೋಮಾ , ಬಿಇ, ಬಿ.ಟೆಕ್, ಐಟಿಐ ಪ್ರಮಾಣಪತ್ರ, ಫೈನ್ಸ್ ಆರ್ಟ್ಸ್​ ಹಾಗೂ ಯಾವುದೇ ಪದವಿ. ಪದವಿಗಳಲ್ಲಿ ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಜೂನಿಯರ್ ಹುದ್ದೆಗಳಿಗೆ ಟೈಪಿಂಗ್ ತಿಳಿದಿದ್ದು, ಪ್ರತಿ ನಿಮಿಷಕ್ಕೆ 40 ಇಂಗ್ಲಿಷ್ ಪದ, 30 ಹಿಂದಿ ಪದ ಟೈಪ್ ಮಾಡಬೇಕು. ಕಂಪ್ಯೂಟರ್ ಜ್ಞಾನ ಅವಶ್ಯ.

    ವಯೋಮಿತಿ: ಅರ್ಜಿ ಸಲ್ಲಿಕೆಗೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಎಲ್ಲ ಹುದ್ದೆಗಳಿಗೆ ಕನಿಷ್ಠ 18 ವರ್ಷ, ಸೂಪರ್‍ವೈಸರ್ ಹುದ್ದೆಗೆ ಗರಿಷ್ಠ 30 ವರ್ಷ. ಜೂನಿಯರ್ ಟೆಕ್ನೀಷಿಯನ್‍ಗೆ ಗರಿಷ್ಠ 25 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 28 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ವೇತನ: ಸೂಪರ್‍ವೈಸರ್ ಹುದ್ದೆಗೆ ಮಾಸಿಕ 26,000 ರೂ.ನಿಂದ 1,00,000 ರೂ., ಎನ್‍ಗ್ರೇವರ್ ಹುದ್ದೆಗೆ ಮಾಸಿಕ 8,500 ರೂ. ನಿಂದ 20,850 ರೂ., ಜೂನಿಯರ್ ಟೆಕ್ನೀಷಿಯನ್‍ಗೆ ಮಾಸಿಕ 7,750 ರೂ.ನಿಂದ 19,040 ರೂ. ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 8,350 ರೂ.ನಿಂದ 20,470 ರೂ. ವೇತನ ಇದೆ.

    ಅರ್ಜಿ ಶುಲ್ಕ:
    ಸಾಮಾನ್ಯ ವರ್ಗ, ಆರ್ಥಿಕವಾಗಿ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 600 ರೂ, ಎಸ್‍ಸಿ, ಎಸ್‍ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 200ರೂ.

    ಆಯ್ಕೆ ಪ್ರಕ್ರಿಯೆ: ಎಲ್ಲ ಹುದ್ದೆಗಳಿಗೆ ಆಯ್ದ ಅಭ್ಯರ್ಥಿಗಳನ್ನು ಆನ್‍ಲೈನ್ ಟೆಸ್ಟ್‍ಗೆ ಆಹ್ವಾನಿಸಲಾಗುವುದು. ಇದರಲ್ಲಿ ಉತ್ತೀರ್ಣರಾದವರಿಗೆ ಹುದ್ದೆಗಳಿಗೆ ಅನುಗುಣವಾಗಿ ಟ್ರೇಡ್ ಪರೀಕ್ಷೆಗೆ / ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಆನ್‍ಲೈನ್ ಪರೀಕ್ಷೆಯಲ್ಲಿ ವೃತ್ತಿ ಜ್ಞಾನ, ಸಾಮಾನ್ಯ ಜ್ಞಾನ, ಇಂಗ್ಲಿಷ್ ಭಾಷೆ, ಲಾಜಿಕಲ್ ರೀಸನಿಂಗ್, ಕ್ವಾಂಟಿಟೇಟೀವ್ ಆಪ್ಟಿಟ್ಯೂಡ್ ವಿಷಯಗಳಿರುತ್ತವೆ. ಕೋಲ್ಕತದ ಸುತ್ತಮುತ್ತಲ ಪ್ರದೇಶದಲ್ಲಿ ಆನ್‍ಲೈನ್ ಪರೀಕ್ಷೆ ನಡೆಯಲಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 19.2.2021
    ಅಧಿಸೂಚನೆಗೆ: https://bit.ly/3a5ZpH6
    ಮಾಹಿತಿಗೆ: https://igmkolkata.spmcil.com

    ಹೆಚ್ಚಿನ ಉದ್ಯೋಗ ಸುದ್ದಿಗೆ

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಲೈಬ್ರರಿ ಸೈನ್ಸ್​ನಲ್ಲಿ ಪಿ.ಜಿ ಆಗಿದೆಯಾ? ಹಾಗಿದ್ದರೆ ಬೆಂಗಳೂರು ವಿವಿಯಲ್ಲಿದೆ ಅವಕಾಶ

    ರಿಸರ್ವ್​ ಬ್ಯಾಂಕ್​ನಲ್ಲಿ ವಿವಿಧ ಶ್ರೇಣಿಯ ಅಧಿಕಾರಿಗಳ 322 ಹುದ್ದೆಗೆ ಅರ್ಜಿ ಆಹ್ವಾನ

    ಪದವೀಧರರಿಗೆ ಇಲ್ಲಿದೆ ಭರ್ಜರಿ ಅವಕಾಶ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಲ್ಲಿವೆ 100 ಹುದ್ದೆಗಳು

    ಇಂಜಿನಿಯರಿಂಗ್ ಪದವೀಧರರಾ? ಇಲ್ಲಿದೆ ನಿಮಗೆ ಉತ್ತಮ ಉದ್ಯೋಗಾವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts