More

    ಪದವೀಧರರಿಗೆ ಇಲ್ಲಿದೆ ಭರ್ಜರಿ ಅವಕಾಶ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಲ್ಲಿವೆ 100 ಹುದ್ದೆಗಳು

    ಬ್ಯಾಂಕ್ ಉದ್ಯೋಗ ಹೊಂದಬೇಕೆಂಬ ಕನಸು ಕಾಣುತ್ತಿರುವ ಯುವಕರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ಅವಕಾಶ ನೀಡುತ್ತಿದೆ. ದೇಶಾದ್ಯಂತ ಶಾಖೆಗಳನ್ನು ಹೊಂದಿರುವ ಪಿಎನ್‍ಬಿ 100 ಭದ್ರತಾ ಅಧಿಕಾರಿ (ಮ್ಯಾನೇಜರ್- ಸೆಕ್ಯುರಿಟಿ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು ಹುದ್ದೆಗಳು: 100.

    ಪಿಎನ್‍ಬಿ ನೇಮಕ ಮಾಡುವ ಅಭ್ಯರ್ಥಿಗಳನ್ನು ದೇಶದಲ್ಲಿರುವ ಇತರ ಯಾವುದೇ ಶಾಖೆಗೆ ಬೇಕಾದರೂ ನೇಮಕ ಮಾಡಬಹುದು. ಸಾಮಾನ್ಯವರ್ಗದ ಅಭ್ಯರ್ಥಿಗೆ 40 ಸ್ಥಾನ, ಎಸ್ಸಿಗೆ 15, ಎಸ್ಟಿಗೆ 8, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ 27, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 10 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಈ ಹುದ್ದೆಗಳು ಅಂಗವಿಕಲರಿಗೆ ಸೂಕ್ತವಲ್ಲದ ಕಾರಣ ಅಂತಹವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

    ವಿದ್ಯಾರ್ಹತೆ: ಯಾವುದೇ ಪದವಿ. ವೃತ್ತಿ ಅನುಭವ ಅವಶ್ಯ.

    ಇತರ ಅರ್ಹತೆ: ಸೇನೆ, ನೌಕಾಪಡೆ ಅಥವಾ ವಾಯುದಳದಲ್ಲಿ ಕನಿಷ್ಠ ಐದು ವರ್ಷ ಸೇವೆ ಸಲ್ಲಿಸಿದವರು, 6ನೇ ವೇತನ ಶ್ರೇಣಿಯಲ್ಲಿ ಗ್ರೇಡ್ ಪೇ 5400 ರೂ. / 7ನೇ ವೇತನ ಶ್ರೇಣಿಯ ಹುದ್ದೆ ಹೊಂದಿದವರು ಅಥವಾ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ಕಡಿಮೆಯಿಲ್ಲದ ಸ್ಥಾನ ನಿಭಾಯಿಸಿರಬೇಕು. ಪ್ಯಾರಾ ಮಿಲಿಟರಿಯಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದವರು ಅರ್ಜಿ ಸಲ್ಲಿಸಬಹುದು.

    ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 35 ವರ್ಷ. ಎಸ್ಸಿ, ಎಸ್ಟಿ, ಜಮ್ಮು-ಕಾಶ್ಮೀರದ ಅಭ್ಯರ್ಥಿಗೆ 5 ವರ್ಷ, 1984ರ ಗಲಭೆಯಲ್ಲಿ ಮೃತಪಟ್ಟವರ ಮಕ್ಕಳು/ ಕುಟುಂಬ ಸದಸ್ಯರಿಗೆ, ಮಾಜಿ ಸೈನಿಕರಿಗೆ, ಇತರ ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಿಲಿಕೆ ಇದೆ. ಸ್ಪೀಡ್/ ರಿಜಿಸ್ಟರ್ಡ್ ಪೋಸ್ಟ್​ ಮೂಲಕ ಸಲ್ಲಿಸುವ ಅರ್ಜಿಗಳಿಗೆ ಮಾತ್ರ ಮಾನ್ಯತೆ.

    ವೇತನ: ಮಾಸಿಕ 48,170 ರೂ. ನಿಂದ 69,810 ರೂ. ವೇತನ ಇದೆ.

    ಆಯ್ಕೆ ಪ್ರಕ್ರಿಯೆ: ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಅಭ್ಯರ್ಥಿಗಳ ಬರವಣಿಗೆ ಕೌಶಲ ಪರೀಕ್ಷಿಸುವುದಕ್ಕಾಗಿ ಸಂದರ್ಶನದಲ್ಲಿ ಪ್ರಬಂಧ/ ಪತ್ರ ಬರವಣಿಗೆಯ ಪರೀಕ್ಷೆ ನಡೆಸಲಾಗುವುದು.

    ಅರ್ಜಿ ಶುಲ್ಕ: ಎಸ್‍ಸಿ, ಎಸ್‍ಟಿ, ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ, ಆದರೆ ಅಂಚೆ ಶುಲ್ಕ 50 ರೂ. ಪಾವತಿಸಬೇಕು. ಉಳಿದ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿಯಾಗಿದೆ.

    ಸೇವಾ ಬಾಂಡ್: ಬ್ಯಾಂಕ್‍ನಲ್ಲಿ 3 ವರ್ಷ ಸೇವೆ ಸಲ್ಲಿಸುವುದಾಗಿ 2 ಲಕ್ಷ ರೂ. ಮೊತ್ತದ ಸೇವಾ ಬಾಂಡ್ ಅನ್ನು ಸಂಸ್ಥೆ ಹೆಸರಿಗೆ ಸಲ್ಲಿಸಬೇಕು.

    ಅರ್ಜಿ ಡೌನ್‍ಲೋಡ್ ಮಾಡಿಕೊಳ್ಳಲು ಕೊನೇ ದಿನ: 13.2.2021

    ಅರ್ಜಿ ಸಲ್ಲಿಸಲು ಕೊನೆಯ ದಿನ: 15.2.2021

    ಅರ್ಜಿ ಸಲ್ಲಿಕೆ ವಿಳಾಸ: Chief Manager (Recruitment Section), HRM Division, Punjab National Bank,
    ಅಧಿಸೂಚನೆಗೆ: https://bit.ly/3cj2M0c
    ಹೆಚ್ಚಿನ ಮಾಹಿತಿಗೆ: http://www.pnbindia.in

    ಹೆಚ್ಚಿನ ಉದ್ಯೋಗ ಸುದ್ದಿಗೆ

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಕೇಂದ್ರ ಸರ್ಕಾರಿ ಉದ್ಯೋಗಿ ಆಗುವ ಆಸೆ ಇದೆಯೆ? ಹಾಗಿದ್ದರೆ ಇಲ್ಲಿವೆ ಭರಪೂರ ಅವಕಾಶ

    ಎಸ್‌ಎಸ್‌ಎಲ್‌ಸಿ ಆಗಿದ್ಯಾ? ಹಾಗಿದ್ರೆ ಆರ್‌ಬಿಐನಲ್ಲಿದೆ ಉದ್ಯೋಗ- ಬೆಂಗಳೂರಿನಲ್ಲೂ ಅವಕಾಶ

    ಟೈಪಿಂಗ್​, ಷಾರ್ಟ್​ಹ್ಯಾಂಡ್​ ಮುಗಿಸಿರುವಿರಾ? ಕೆಎಟಿಯಲ್ಲಿ ಖಾಲಿ ಇವೆ ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts