ಟೈಪಿಂಗ್​, ಷಾರ್ಟ್​ಹ್ಯಾಂಡ್​ ಮುಗಿಸಿರುವಿರಾ? ಕೆಎಟಿಯಲ್ಲಿ ಖಾಲಿ ಇವೆ ಹುದ್ದೆಗಳು

KAT
Published on

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಖಾಲಿ ಇರುವ ಉಳಿದ ಮೂಲ ವೃಂದ ಮತ್ತು ಸ್ಥಳೀಯ ವೃಂದದ ಶೀಘ್ರಲಿಪಿಗಾರ ಹಾಗೂ ಬೆರಳಚ್ಚುಗಾರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ. ಒಟ್ಟು ಹುದ್ದೆಗಳು: 16

ಕೆಎಟಿಯಲ್ಲಿರುವ ಹುದ್ದೆಗಳಲ್ಲಿ ಗ್ರಾಮೀಣ, ಕನ್ನಡ ಮಾಧ್ಯಮ, ಅಂಗವಿಕಲ, ಮಹಿಳಾ ಅಭ್ಯರ್ಥಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಕಲ್ಯಾಣ ಕರ್ನಾಟಕ ಮೀಸಲಾತಿ ಕೋರುವ ಅಭ್ಯರ್ಥಿಗಳು ಅಗತ್ಯ ಪ್ರಮಾಣಪತ್ರ ಸಲ್ಲಿಸಬೇಕಿದೆ. ಅರ್ಜಿಗಳನ್ನು ಕೆಸ್ಯಾಟ್ ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳತಕ್ಕದ್ದು.

ಹುದ್ದೆ, ಸಂಖ್ಯೆ ವಿವರ

* ಶೀಘ್ರಲಿಪಿಗಾರ - 13 (ಉಳಿದ ಮೂಲ ವೃಂದ -11, ಸ್ಥಳೀಯ ವೃಂದ 2)

* ಬೆರಳಚ್ಚುಗಾರ - 3 (ಉಳಿದ ಮೂಲ ವೃಂದ)

ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು, ಶೀಘ್ರಲಿಪಿ ಪರೀಕ್ಷೆ ಪ್ರೌಢದರ್ಜೆ (ಸೀನಿಯರ್ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಎಸ್ಸಿ, ಎಸ್ಸಿ, ಪ್ರವರ್ಗ-1ಕ್ಕೆ ಗರಿಷ್ಠ 40, 2ಎ,2ಬಿ, 3ಎ, 3ಬಿ ಗೆ ಗರಿಷ್ಠ 38 ವರ್ಷ.

ವೇತನ: ಶೀಘ್ರಲಿಪಿಗಾರರಿಗೆ ಮಾಸಿಕ 30,350 ರೂ. ನಿಂದ 58,250 ರೂ. ವೇತನ ಇದೆ. ಟೈಪಿಸ್ಟ್‍ಗೆ ಮಾಸಿಕ 21,400 ರೂ. ನಿಂದ 42,000 ರೂ. ವೇತನ ಇದೆ.

ಸೂಚನೆ: ಹುದ್ದೆಗಳ ಆಯ್ಕೆಗಾಗಿ ಮಂಡಳಿ ನಿಗದಿಪಡಿಸಿರುವ ನಮೂನೆಯಲ್ಲಿಯೇ ಅರ್ಜಿ ಸಲ್ಲಿಸಬೇಕು. ಇತರ ಯಾವುದೇ ನಮೂನೆ ಅಥವಾ ಬೆರಳಚ್ಚು/ ಛಾಯಾ ಪ್ರತಿಯಿಂದ ಮಾಡಿರುವ, ಕೈ ಬರಹದಿಂದ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಂಚೆ ಮೂಲಕ ಅಥವಾ ಖುದ್ದಾಗಿ ಅರ್ಜಿ ಸಲ್ಲಿಸತಕ್ಕದ್ದು.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 150 ರೂ. ಶುಲ್ಕ ಪಾವತಿಸಬೇಕು.

ಆಯ್ಕೆ ವಿಧಾನ: ಅಭ್ಯರ್ಥಿಯ ಶೈಕ್ಷಣಿಕ ಅಂಕ, ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮತ್ತು ಚಾಲ್ತಿಯಲ್ಲಿರುವ ಮೀಸಲಾತಿ ನಿಯಮದನ್ವಯ ನೇಮಕಾತಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 25.2.2021

ಅರ್ಜಿ ಸಲ್ಲಿಕೆ ವಿಳಾಸ: ವಿಲೇಖನಾಧಿಕಾರಿಗಳು, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ. ರಸ್ತೆ ಬೆಂಗಳೂರು- 560 009

ಅಧಿಸೂಚನೆಗೆ: http://www.ksat.karnataka.gov.in/recruitment

ಮಾಹಿತಿಗೆ: http://www.ksat.karnataka.gov.in

ಹೆಚ್ಚಿನ ಉದ್ಯೋಗಾವಕಾಶಗಳ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net