More

    ಲೈಬ್ರರಿ ಸೈನ್ಸ್​ನಲ್ಲಿ ಪಿ.ಜಿ ಆಗಿದೆಯಾ? ಹಾಗಿದ್ದರೆ ಬೆಂಗಳೂರು ವಿವಿಯಲ್ಲಿದೆ ಅವಕಾಶ

    ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಗ್ರಂಥಾಲಯಗಳಲ್ಲಿ 2020-21ನೇ ಸಾಲಿಗೆ ಒಂದು ವರ್ಷದ ಅವಧಿಗೆ ಲೈಬ್ರರಿ ಅಪ್ರೆಂಟಿಸ್ ತರಬೇತುದಾರರಾಗಿ ಕೆಲಸ ನಿರ್ವಹಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
    ಒಟ್ಟು ಸ್ಥಾನಗಳು: 25

    ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸಲು ಬೇಕಾಗುವ ಅವಶ್ಯ ತರಬೇತಿಯನ್ನು ಲೈಬ್ರರಿ ಅಪ್ರೆಂಟಿಸ್ ಅವಧಿಯಲ್ಲಿ ಕಲಿತುಕೊಳ್ಳಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಹೆಸರು, ಜನ್ಮದಿನಾಂಕ, ವಿಳಾಸ, ವಿದ್ಯಾರ್ಹತೆ, ಜಾತಿ ಹಾಗೂ ಮತ್ತಿತರ ಸ್ವವಿವರಗಳನ್ನೊಳಗೊಂಡ ಅರ್ಜಿಯ ನಮೂನೆಯನ್ನು ವಿಶ್ವವಿದ್ಯಾಲಯದ ಜಾಲತಾಣದಿಂದ ಡೌನ್‍ಲೋಡ್ ಮಾಡಿಕೊಂಡು ಸೂಕ್ತ ದಾಖಲಾತಿ ಹಾಗೂ ಸ್ವ-ದೃಢೀಕರಿಸಿ ವಿಶ್ವವಿದ್ಯಾಲಯ ವಿಳಾಸಕ್ಕೆ ಸಲ್ಲಿಸಬೇಕು.

    ಪ್ರಸ್ತುತ ನೇಮಕ ಮಾಡಿಕೊಳ್ಳಲಾಗುತ್ತಿರುವ 25 ಸ್ಥಾನಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 13 ಸ್ಥಾನ (ಹೈದರಾಬಾದ್ ಕರ್ನಾಟಕಕ್ಕೆ 2, ಅಂಗವಿಕಲರಿಗೆ 1), ಎಸ್ಸಿಗೆ 4, ಎಸ್ಟಿಗೆ 1, 2ಎಗೆ 3, 2ಬಿಗೆ 1, 3ಎಗೆ 1, 3ಬಿ ಗೆ 1, ಪ್ರವರ್ಗ 1ಕ್ಕೆ 1 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಸಂದರ್ಶನದ ದಿನಾಂಕವನ್ನು ನಂತರ ತಿಳಿಸಲಾಗುವುದು.

    ವಿದ್ಯಾರ್ಹತೆ: ಲೈಬ್ರರಿ ಆ್ಯಂಡ್ ಇನ್ಫರ್ಮೇಷನ್ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

    ಸೂಚನೆ: 2019-20ನೇ ಸಾಲಿನಲ್ಲಿ ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಅಥವಾ ಅದರ ಹಿಂದಿನ ವರ್ಷಗಳಲ್ಲಿ ತರಬೇತಿ ಪಡೆದುಕೊಂಡಿರುವ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

    ಶಿಷ್ಯವೇತನ: ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಹೆಯಾನ 15,000 ರೂ. ಶಿಷ್ಯವೇತನ ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 6.2.2021
    ಅರ್ಜಿ ಸಲ್ಲಿಸುವ ವಿಳಾಸ: ಗ್ರಂಥಪಾಲಕರು, ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯ, ಜ್ಞಾನಭಾರತಿ, ಬೆಂಗಳೂರು- 560056
    ಅಧಿಸೂಚನೆಗೆ: https://bit.ly/3ciXxxu
    ಮಾಹಿತಿಗೆ: https://bangaloreuniversity.ac.in/

    ಎಸ್​ಎಸ್​ಎಲ್​ಸಿಯಿಂದ ಉನ್ನತ ಪದವಿಯವರೆಗೂ ಔಷಧ ಸಂಶೋಧನಾ ಸಂಸ್ಥೆಯಲ್ಲಿ ಖಾಲಿಯಿವೆ ಹುದ್ದೆಗಳು

    ಟೈಪಿಂಗ್​, ಷಾರ್ಟ್​ಹ್ಯಾಂಡ್​ ಮುಗಿಸಿರುವಿರಾ? ಕೆಎಟಿಯಲ್ಲಿ ಖಾಲಿ ಇವೆ ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts