More

    ಅರ್ಜಿ ಆಹ್ವಾನ

    ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ: ಗದಗ: 2023-24 ನೇ ಸಾಲಿನಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯಡಿ ಕೃಷಿ ಇಲಾಖೆಯಿಂದ ಸೂಕ್ಷ್ಮ ನೀರಾವರಿ ಘಟಕಗಳಾದ ತುಂತುರು ನೀರಾವರಿ ಹಾಗೂ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಳ್ಳಲು ಸಹಾಯಧನದಲ್ಲಿ ಲಭ್ಯವಿದ್ದು, ಎಲ್ಲಾ ವರ್ಗದ ರೈತರಿಗೆ ಶೇ. 90 ರಷ್ಟು ಸಹಾಯಧನದಡಿ ಸೂಕ್ಷ್ಮ ನೀರಾವರಿ ಘಟಕ ವಿತರಣೆಗಾಗಿ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತ ರೈತರು ಫೋಟೋ, ಆಧಾರ ಪ್ರತಿ, ಬ್ಯಾಂಕ್ ಪಾಸ್‍ಬುಕ್ ಪ್ರತಿ, ಪಹಣಿ, ನೀರಾವರಿ ದೃಢೀಕರಣ, 20 ರೂ. ಛಾಪಾ ಕಾಗದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಜಾತಿ ಪ್ರಮಾಣ ಪತ್ರದೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ಜಿ. ಹೆಚ್. ತಾರಾಮಣಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕರ್ನಾಟಕ ಸುವರ್ಣ ಸಂಭ್ರಮ-50 ರ ಅಂಗವಾಗಿ ರಸಪ್ರಶ್ನೆ ಸ್ಪರ್ಧೆ: ಗದಗ: ಕರ್ನಾಟಕ ಸುವರ್ಣ ಸಂಭ್ರಮ-50 ರ ಅಂಗವಾಗಿ ಗದಗ ಜಿಲ್ಲಾಡಳಿತ ಹಾಗೂ ಅರುಣೋದಯ  ವಾಯುವಿಹಾರಿಗಳ ವಿವಿದೋದ್ದೇಶಗಳ ಸಂಘದ  ಸಹಯೋಗದೊಂದಿಗೆ  ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರೌಢಶಾಲೆಗಳಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು  ಆಯೋಜಿಸಲಾಗುತ್ತಿದೆ. ನವೆಂಬರ್ 18 ರಂದು ನರಸಾಪುರದ ಎಸ್.ಎ. ಪ್ರೌಢಶಾಲೆಯಲ್ಲಿ ಬೆಳಿಗ್ಗೆ 10 ರಿಂದ 11.30 ಗಂಟೆಯವರೆಗೆ, ನವೆಂಬರ್ 20 ರಂದು ಬೆಟಗೇರಿಯ ಎಚ್.ಸಿ.ಇ.ಎಸ್.ಬಾಲಕಿಯರ ಪ್ರೌಢಶಾಲೆಯಲ್ಲಿ ಮಧ್ಯಾಹ್ನ 3 ರಿಂದ 4.30 ಗಂಟೆಯವರೆಗೆ, ನವೆಂಬರ್ 24 ರಂದು ಗದಗ ವಿ.ಡಿ.ಎಸ್. ಬಾಲಕಿಯರ ಪ್ರೌಢಶಾಲೆಯಲ್ಲಿ ಮಧ್ಯಾಹ್ನ 3 ರಿಂದ 4.30 ಗಂಟೆಯವರೆಗೆ,  ನವೆಂಬರ್ 25 ರಂದು ಅಡವಿಸೋಮಾಪುರದ ಸರಕಾರಿ ಪ್ರೌಢಶಾಲೆಯಲ್ಲಿ ಬೆ. 10 ರಿಂದ 11.30 ರವರೆಗೆ ಸ್ಪರ್ಧೆಯನ್ನು ನಡೆಸಲಾಗುವುದು.  ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ರೂ.500/ , ದ್ವಿತೀಯ 300/-  ಹಾಗೂ  ತೃತೀಯ ಬಹುಮಾನ  ರೂ.200 /- ಹೀಗೆ ಪ್ರತಿ ಶಾಲೆಯಲ್ಲಿ ನೀಡಲಾಗುವುದು. ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ, ಹಿರಿಮೆ ಬೆಳೆಸಲು, ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ವಿಜ್ ಮಾಸ್ಟರ್ ಎಫ್.ಪಿ.ಲಕ್ಷ್ಮೇಶ್ವರಮಠ, ಪ್ರಧಾನ ಕಾರ್ಯದರ್ಶಿ ಪಿಡಗಣ್ಣವರ ಹಾಗೂ ಪ್ರೊ.ಆರ್.ಎಸ್. ಕುಂದಗೋಳ ಅವರು ತಿಳಿಸಿದ್ದಾರೆ.  ಹೆಚ್ಚಿನ  ಮಾಹಿತಿಗಾಗಿ  ಲಕ್ಷ್ಮೇಶ್ವರಮಠ- ಮೊ.ಸಂ. 9742186806, ವೈ.ಕೆ. ಪಿಡಗಣ್ಣವರ ಮೊ.ಸಂ. 8762226270 ಇವರನ್ನು ಸಂಪರ್ಕಿಸಬಹುದಾಗಿದೆ.  

     ರೈತ ಬಾಂಧವರ ಗಮನಕ್ಕೆ ಗದಗ: 2023-24 ನೇ ಸಾಲಿನಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ಕೃಷಿ ಇಲಾಖೆಯಿಂದ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳಾದ ದಾಲ್ ಪ್ರೊಸೆಸರ್, ಫ್ಲೋರ್ ಮಿಲ್, ಮಿನಿ ರೈಸ್ ಮಿಲ್, ಮಿನಿ ಆಯಿಲ್ ಮಿಲ್, ರಾಗಿ ಕ್ಲೀನಿಂಗ್ ಮಶಿನ್, ಶುಗರ್ ಕೇನ್ ಕ್ರಶಿಂಗ್ ಯೂನಿಟ್, ಪಲ್ವರೈಸರ್, ರವಾ/ಕ್ಯಾಟಲ್ ಫೀಡ್ ಮಶಿನ್, ಚಿಲ್ಲಿ ಪೌಂಡಿಂಗ್ ಮಶಿನ್, ಶಾವಿಗೆ ಮಶಿನ್, ಶುಗರ್ ಕೇನ್ ಜ್ಯೂಸ್ ಮೇಕಿಂಗ್ ಮಶಿನ್ ಹಾಗೂ ಇನ್ನಿತರೆ ಕೃಷಿ ಸಂಸ್ಕರಣಾ ಘಟಕಗಳು ಸಹಾಯಧನದಲ್ಲಿ ಲಭ್ಯವಿದ್ದು, ಸಾಮಾನ್ಯ ರೈತರಿಗೆ ಶೇ. 50 ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನದಡಿ ಘಟಕಗಳ ವಿತರಣೆಗಾಗಿ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತ ರೈತರು ಫೋಟೋ, ಆಧಾರ ಪ್ರತಿ, ಬ್ಯಾಂಕ್ ಪಾಸ್‍ಬುಕ್ ಪ್ರತಿ, ಪಹಣಿ, 20 ರೂ. ಛಾಪಾ ಕಾಗದ, ಕೆ.ಇ.ಬಿ ಯಿಂದ ವಿದ್ಯುಚ್ಛಕ್ತಿ ಸರ್ಟಿಫಿಕೇಟ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಜಾತಿ ಪ್ರಮಾಣ ಪತ್ರದೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ಜಿ. ಹೆಚ್. ತಾರಾಮಣಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಗದಗ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಸ್ಪರ್ಧೆ: ಗದಗ (ಕರ್ನಾಟಕ ವಾರ್ತೆ) ನವೆಂಬರ್ 16: 2023-24 ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಯುವಜನೋತ್ಸವದ ಆಯ್ಕೆ ಸ್ಪರ್ಧೆಗಳಾದ  ಜಾನಪದ ನೃತ್ಯ (ತಂಡ) , ಜಾನಪದ ಗೀತೆ (ತಂಡ) ಜಾನಪದ ನೃತ್ಯ ( ವೈಯಕ್ತಿಕ), ಜಾನಪದ ಗೀತೆ ( ವೈಯಕ್ತಿಕ), ಕಥೆ ಬರೆಯುವುದು, ಪೋಸ್ಟರ್ ಮೇಕಿಂಗ್ , ಘೋಷಣೆ ( ಡಿಕ್ಲರೇಷನ್ ) , ಛಾಯಾಚಿತ್ರಣ  ( ಫೋಟೋಗ್ರಾಫಿ)  ಸ್ಪರ್ಧೆಗಳನ್ನು   ಗದುಗಿನ ಆದರ್ಶ ಶಿಕ್ಷಣ ಸಮಿತಿಯ (ಎ.ಎಸ್.ಎಸ್.) ಮಹಾವಿದ್ಯಾಲಯದಲ್ಲಿ  ನವೆಂಬರ್ 18 ರಂದು  ಬೆಳಿಗ್ಗೆ 9-00 ಗಂಟೆಯಿಂದ  ಏರ್ಪಡಿಸಲಾಗುವುದು. ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ 15 ರಿಂದ 29 ವರ್ಷ ವಯೋಮಾನದೊಳಗಿನ ಯುವಜನರನ್ನು ಮಾತ್ರ ಸಂಬಂಧಿದ ಆಧಾರ ಕಾರ್ಡ, ಅಥವಾ ಅಧೀಕೃತ ಜನ್ಮ ದಾಖಲೆಯ ದಾಖಲೆಗಳನ್ನು ಆಧರಿಸಿ ಆಯ್ಕೆಗೆ ಪರಿಗಣಿಸಲಾಗುವುದು. ಯುವಜನೋತ್ಸವದಲ್ಲಿ ಮುಕ್ತವಾಗಿ 15 ರಿಂದ 29 ವರ್ಷ ವಯೋಮಾನದೊಳಗಿನ ಯುವಜನರು ಭಾಗವಹಿಸಬಹುದು. ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ಸ್ಥಾನ ಪಡೆದವರು ಮಾತ್ರ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ. ಆಸಕ್ತಿಯುಳ್ಳ ಯುವಕ/ಯುವತಿಯರು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣ, ಗದಗ ಇಲ್ಲಿ ಇರುವ ನಿಗಧಿತ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ತಮ್ಮ ಸವಿವರಗಳನ್ನೊಳಗೊಂಡ ಆಧಾರ ಕಾರ್ಡ ಅಥವಾ ಜನ್ಮ ದಿನಾಂಕ ದಾಖಲೆ ಮತ್ತು 2 ಭಾವಚಿತ್ರಗಳೊಂದಿಗೆ ಅಥವಾ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ನೇರವಾಗಿ ಭಾಗವಹಿಸಲು ಅವಕಾಶ ಒದಗಿಸಲಾಗಿದೆ. ಭಾಗವಹಿಸುವ ಸ್ಪರ್ಧಾಳುಗಳಿಗೆ ಯಾವುದೇ ರೀತಿಯ ಪ್ರವಾಸ ಭತ್ಯೆಯನ್ನು ನೀಡಲಾಗುವುದಿಲ್ಲ. ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಆಯ್ಕೆ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಆಯ್ಕೆಯಾದವರನ್ನು ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಕಳುಹಿಸಲಾಗುವುದು. ನಿಗಧಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಮೇಲಿನ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿದೆ. ನಿಗಧಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದ ಯುವಕ/ಯುವತಿಯರು ನವೆಂಬರ್ 18 ರಂದು  ಬೆಳಿಗ್ಗೆ 9-00 ಗಂಟೆಯ ಒಳಗಾಗಿ ಆದರ್ಶ ಶಿಕ್ಷಣ ಸಮಿತಿ (ಎ.ಎಸ್.ಎಸ್.) ಗದಗನಲ್ಲಿ ವರದಿ ಮಾಡಿಕೊಳ್ಳಲು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ  ಡಾ: ಶರಣು ಗೋಗೇರಿ  ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts