ಇಂಜಿನಿಯರಿಂಗ್ ಪದವೀಧರರಾ? ಇಲ್ಲಿದೆ ನಿಮಗೆ ಉತ್ತಮ ಉದ್ಯೋಗಾವಕಾಶ

udyoga
Published on

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (ಐಒಸಿಎಲ್) ಭಾರತದ ಅತಿದೊಡ್ಡ ವಾಣಿಜ್ಯ ಉದ್ಯಮವಾಗಿದ್ದು, ಬಿಹಾರದ ಘಟಕ್ಕಕೆ ಅವಶ್ಯವಿರುವ 16 ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಒಟ್ಟು ಹುದ್ದೆಗಳು: 16

ಐಒಸಿಎಲ್‍ನ ಪ್ರೊಡಕ್ಷನ್ ವಿಭಾಗದಲ್ಲಿ ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್-್ಖಐ ಹುದ್ದೆ ಖಾಲಿ ಇದ್ದು, ಸಾಮಾನ್ಯವರ್ಗದ ಅಭ್ಯರ್ಥಿಗೆ 9, ಆರ್ಥಿಕವಾಗಿ ದುರ್ಬಲವಾಗಿರುವವರಿಗೆ 1, ಇತರ ಹಿಂದುಳಿದ ವರ್ಗಕ್ಕೆ 4, ಎಸ್ಸಿಗೆ 2 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಅಂಗವಿಕಲರಿಗೆ ಹಾಗೂ ಮಹಿಳೆಯರಿಗೆ ಈ ಹುದ್ದೆ ಸೂಕ್ತವಾಗಿಲ್ಲದ ಕಾರಣ ಅವರಿಗೆ ಅವಕಾಶ ಇಲ್ಲ. ಮಾಜಿ ಸೈನಿಕರಿಗೆ ಸರ್ಕಾರದ ನಿಯಮದನ್ವಯ ಮೀಸಲಾತಿ ಇದೆ. ದೂರಶಿಕ್ಷಣ, ಪಾರ್ಟ್ ಟೈಮ್, ಕರೆಸ್ಪಾಂಡೆನ್ಸ್ ಮೂಲಕ ಪಡೆದ ಪದವಿಗಳಿಗೆ ಮಾನ್ಯತೆ ಇಲ್ಲ.

ಶೈಕ್ಷಣಿಕ ಅರ್ಹತೆ: ಕೆಮಿಕಲ್/ ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ ಇಂಜಿನಿಯರಿಂಗ್‍ನಲ್ಲಿ 3 ವರ್ಷದ ಡಿಪ್ಲೋಮಾ ಅಥವಾ ಬಿಎಸ್ಸಿ (ಮ್ಯಾಥ್ಸ್​, ಫಿಜಿಕ್ಸ್, ಕೆಮಿಸ್ಟ್ರಿ/ ಇಂಡಸ್ಟ್ರಿಯಲ್ ಕೆಮಿಸ್ಟ್ರಿ) ಪದವಿ ಪಡೆದಿದ್ದು, ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಕನಿಷ್ಠ ಶೇ.45 ಅಂಕ, ಹಾಗೂ ಉಳಿದ ಅಭ್ಯರ್ಥಿಗಳು ಶೇ.50 ಅಂಕ ಪಡೆದಿರಬೇಕು. ಕನಿಷ್ಠ ಒಂದು ವರ್ಷದ ವೃತ್ತಿ ಅನುಭವ ಅವಶ್ಯ.

ವಯೋಮಿತಿ: 31.1.2021ಕ್ಕೆ ಕನಿಷ್ಠ 18 ವರ್ಷ, ಸಾಮಾನ್ಯವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 26 ವರ್ಷ, ಎಸ್ಸಿ, ಎಸ್ಟಿ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ, ಮಾಜಿ ಸೈನಿಕರಿಗೆ 3 ವರ್ಷ ವಯೋ ಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಆಧರಿಸಿ ಸಿದ್ಧಪಡಿಸಿದ ಶಾರ್ಟ್‍ಲಿಸ್ಟ್ ಅಭ್ಯರ್ಥಿಗಳಿಗೆ ಸ್ಕಿಲ್/ ಪ್ರೊಫೆಷಿಯನ್ಸಿ/ ಫಿಜಿಕಲ್ ಟೆಸ್ಟ್ (ಎಸ್‍ಪಿಪಿಟಿ) ನಡೆಸಲಾಗುವುದು. ಹೆಚ್ಚು ಅಭ್ಯರ್ಥಿಗಳಿಗೆ ಒಂದೇ ಅಂಕ ಬಂದಲ್ಲಿ, ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ವಯಸ್ಸಿನ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಸಾಮಾನ್ಯವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಹಾಗೂ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು 150 ರೂ. ಪಾವತಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೇ ದಿನ: 19.2.2021

ಅಧಿಸೂಚನೆಗೆ: https://bit.ly/3tcid08

ಮಾಹಿತಿಗೆ: http://www.iocl.com

ಹೆಚ್ಚಿನ ಉದ್ಯೋಗ ಸುದ್ದಿಗೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net