ನ್ಯೂಸ್

ನಾಲ್ಕು ಮಕ್ಕಳಿದ್ದಾರೆ, ದಯವಿಟ್ಟು ಗಂಡನನ್ನು ಬಿಟ್ಟುಬಿಡಿ- ಉಗ್ರನ ಹೆಂಡತಿ ಗೋಳಾಟ

ನವದೆಹಲಿ: ಐಸಿಸ್‌ ಉಗ್ರ ಸಂಘಟನೆಯ ಜತೆ ನಿಕಟ ಸಂಪರ್ಕ ಹೊಂದಿರುವ ಭಯೋತ್ಪಾದಕ ಅಬು ಯೂಸುಫ್‌ಗೆ ದೆಹಲಿ ಸ್ಪೆಷಲ್ ಸೆಲ್ ಪೊಲೀಸರ ಬಲೆಗೆ ಬೀಳುತ್ತಿದ್ದಂತೆಯೇ ಪೊಲೀಸರು ಆತನ ಜನ್ಮ ಜಾಲಾಡುತ್ತಿದ್ದಾರೆ.

ಅಬುನ ಹೆಂಡತಿಯ‌ನ್ನು ವಿಚಾರಿಸಿದಾಗ ಆಕೆ ತನ್ನ ಗಂಡ ಭಯೋತ್ಪಾದನಾ ಕೆಲಸ ಮಾಡುತ್ತಿದ್ದುದು ತನಗೆ ತಿಳಿದಿದೆ ಎಂದು ವಿವರಿಸಿದ್ದಾರೆ.
ಬಂಧಿತ ಐಸಿಸ್ ಆಪರೇಟಿವ್ ಅಬು ಯೂಸುಫ್ ಕಳೆದ ಎರಡು ವರ್ಷಗಳಿಂದ ಗನ್‌ಪೌಡರ್ ಮತ್ತು ಇತರ ವಸ್ತುಗಳನ್ನು ಸಣ್ಣ ಪ್ರಮಾಣದಲ್ಲಿ ತಂದು ಮನೆಯಲ್ಲಿ ಸಂಗ್ರಹಿಸುತ್ತಿದ್ದ ಎಂದು ಪತ್ನಿ ಆಯೇಷಾ ಹೇಳಿದ್ದಾರೆ.

ತನ್ನ ಗಂಡನ ಕೃತ್ಯ ಗೊತ್ತಿದ್ದರೂ ಏನೂ ಮಾಡದ ಅಸಹಾಯಕಳಾಗಿದ್ದೆ. ಏಕೆಂದರೆ ಪತಿ ಅಬು ಯೂಸುಫ್‌ ಯಾರಿಗೂ ಈ ಮಾಹಿತಿಯನ್ನು ಬಹಿರಂಗಪಡಿಸದಂತೆ ಕಟ್ಟುನಿಟ್ಟಾಗಿ ಹೇಳಿದ್ದರು ಎಂದು ಆಯೇಷಾ ಹೇಳಿದ್ದಾರೆ. ’ನನ್ನ ಗಂಡ ಮನೆಯಲ್ಲಿ ಗನ್‌ಪೌಡರ್ ಮತ್ತು ಇತರ ವಸ್ತುಗಳನ್ನು ಪೆಟ್ಟಿಗೆಯಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಇಂಥ ಕೆಲಸ ಮಾಡಬೇಡಿ ಎಂದು ನಾನು ಹಲವಾರು ಬಾರಿ ಹೇಳಿದ್ದೆ. ನೀನು ನನ್ನನ್ನು ತಡೆಯಬೇಡ ಎಂದು ಅವರು ಹೇಳುತ್ತಿದ್ದರು. ಅದಕ್ಕೆ ನಾನು ಸುಮ್ಮನಿರುತ್ತಿದ್ದೆ’ ಎಂದಿದ್ದಾರೆ.

https://twitter.com/ANINewsUP/status/1297424499030151168

‘ನನಗೆ ನಾಲ್ಕು ಮಕ್ಕಳಿದ್ದಾರೆ. ನೀವು ಗಂಡನನ್ನು ಬಂಧಿಸಿದರೆ ನಾನು ಹೋಗುವುದೆಲ್ಲಿ. ನನ್ನ ತನ್ನ ಗಂಡನನ್ನು ನೀವು ಕ್ಷಮಿಸಿಬಿಡಿ. ಇಲ್ಲದಿದ್ದರೆ ಇಷ್ಟು ಮಕ್ಕಳನ್ನು ಕಟ್ಟಿಕೊಂಡು ನನಗೆ ಬದುಕು ನಡೆಸುವುದು ಕಷ್ಟವಾಗುತ್ತದೆ’ ಎಂದಿರುವ ಆಯೇಷಾ. ಯೂಸುಫ್ ತಂದೆ, ತಾಯಿ ಮತ್ತು ಆತನ ತಮ್ಮ, ಭಯೋತ್ಪಾದಕ ಸಂಘಟನೆಯೊಂದಿಗೆ ಭಾಗಿಯಾಗಿರುವ ಬಗ್ಗೆ ಯಾವುದೇ ಜ್ಞಾನವನ್ನು ಹೊಂದಿಲ್ಲ ಎಂದಿದ್ದಾರೆ.

ಇದೇ ವೇಳೆ ಉಗ್ರ ಅಬುಗೆ ಇಂಡಿಯನ್ ಮುಜಾಹುದ್ದೀನ್ ಉಗ್ರ ಭಟ್ಕಳ ಮೂಲದ ಸಫಿ ಅರ್ಮರ್ ಅಥವಾ ಯೂಸುಫ್ – ಅಲ್ -ಹಿಂದಿ ಜತೆ ಸಂಪರ್ಕವಿರುವುದು ತನಿಖೆಯ ವೇಳೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕರ್ನಾಟಕದ ಭಟ್ಕಳ ಮೂಲದವನಾಗಿರುವ ಯೂಸಫ್-ಅಲ್-ಹಿಂದಿ ಅಫ್ಘಾನಿಸ್ಥಾನದಲ್ಲಿದ್ದುಕೊಂಡು ಪಾಕಿಸ್ತಾನದ ಐ.ಎಸ್.ಐ. ನೆರವಿನೊಂದಿಗೆ ಖೊರಾಸಮ್ ಮಾದರಿಯ ಇಸ್ಲಾಮಿಕ್ ಸ್ಟೇಟ್ ನಡೆಸುತ್ತಿದ್ದಾನೆ ಎಂಬುದು ತಿಳಿದುಬಂದಿದೆ.