ನ್ಯೂಸ್

ಮನೆಯೊಳಕ್ಕೆ ನುಗ್ಗಿದ ಹಾವನ್ನೇ ತಿಂದು ತೇಗಿದ ಭೂಪ!

ಎರ್ನಾಕುಲಂ: ಮನೆಯೊಳಕ್ಕೆ ಹಾವು ಬಂದರೆ ಹೌಹಾರಿಹೋಗುವವರೇ ಎಲ್ಲಾ. ಆದರೆ ಕೇರಳದ ಎರ್ನಾಕುಲಂ ಜಿಲ್ಲೆಯ ಕೋಥಮಂಗಲಂನ ವಾಸಿಯೊಬ್ಬ ಮನೆಯೊಳಕ್ಕೆ ಬಂದಿದ್ದ ಹಾವನ್ನು ಕೊಂದು ತಿಂದು ತೇಗಿದ್ದಾನೆ. ಮಾತ್ರವಲ್ಲದೇ, ಮಾಂಸವನ್ನು ಮಾರಾಟ ಮಾಡಲೂ ಮುಂದಾಗಿದ್ದಾನೆ.

ಈತನ ಕೃತ್ಯ ಕಂಡು ಪೊಲೀಸರು ದಂಗಾಗಿ ಹೋಗಿದ್ದು, ಆತನನ್ನು ಬಂಧಿಸಿದ್ದಾರೆ. ನೇರಿಯಮಂಗಲಂನ ವಿಜೆ ಬಿಜು ಎಂಬಾತ ಈ ಕೃತ್ಯ ಎಸಗಿದ್ದು, ಆತನೀಗ ಪೊಲೀಸರ ಅತಿಥಿಯಾಗಿದ್ದಾನೆ

ಅರಣ್ಯ ಅಧಿಕಾರಿಗಳ ಪ್ರಕಾರ, ಈತನ ಮನೆಗೆ ಇಲಿ ಹಾವು (ರ್‍ಯಾಟ್‌ ಸ್ನೇಕ್‌) ಬಂದಿತ್ತು. ಅದನ್ನು ಕೊಂದಿರುವ ವಿಜೆ, ಅದರ ಚರ್ಮ ತೆಗೆದು ಮಾಂಸ ಬೇಯಿಸಿದ್ದಾನೆ. ತಾನು ಸಂಪೂರ್ಣ ತೃಪ್ತನಾದ ಮೇಲೆ, ಉಳಿದ ಮಾಂಸವನ್ನು ಮಾರಾಟ ಮಾಡಲು ಮುಂದಾಗಿದ್ದಾನೆ.

ಇದನ್ನೂ ಓದಿ: ಎಐಸಿಸಿ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಬಿತ್ತು ಮುದ್ರೆ: ಒತ್ತಾಯಕ್ಕೆ ಮಣಿದ ಸೋನಿಯಾ

ಈ ಕುರಿತು ಅರಣ್ಯ ಸಿಬ್ಬಂದಿ ತಿಳಿಯುತ್ತಲೇ ದಾಳಿ ಮಾಡಿದ್ದಾರೆ. ಬೇಯಿಸಿಟ್ಟ ಮಾಂಸ ಹಾಗೂ ಮಾರಾಟಕ್ಕಿಟ್ಟ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಇದೇ ಮೊದಲಲ್ಲದೇ, ಈ ಹಿಂದೆ ಕೂಡ ಈತ ಹಾವುಗಳನ್ನು ಹಿಡಿದು ಕೊಂದು, ತಿಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.