Jail 
ನ್ಯೂಸ್

ಪಾಕಿಸ್ತಾನ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ 199 ಭಾರತೀಯ ಮೀನುಗಾರರು!

ಕರಾಚಿ: ಜೈಲುವಾಸ ಅನುಭವಿಸುತ್ತಿರುವ 199 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ಪಾಕಿಸ್ತಾನ ನಿರ್ಧರಿಸಿದೆ. ಪಾಕಿಸ್ತಾನದ ಸಮುದ್ರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ್ದಕ್ಕಾಗಿ ಮೀನುಗಾರರು ಬಂಧಿತರಾಗಿದ್ದರರು. ಇವರನ್ನು ಕರಾಚಿನ ಲಾಂಧಿ ಸೆರೆಮನೆಯಲ್ಲಿ ಇರಿಸಲಾಗಿತ್ತು.

ವಾಘಾ ಗಡಿಯ ಮೂಲಕ ಹಸ್ತಾಂತರ

ಬಂಧಿತ ಮೀನುಗಾರರನ್ನು ಬಿಡುಗಡೆ ಮಾಡಿ ಶುಕ್ರವಾರ(ಮೇ 12)ರಂದು ವಾಘಾ ಗಡಿಯ ಮೂಲಕ ಭಾರತಕ್ಕೆ ಹಸ್ತಾಂತರಿಸಲು ಪಾಕಿಸ್ತಾನ ನಿರ್ಧರಿಸಿದೆ. ಈ ನಡುವೆ ಬಿಡುಗಡೆಗೊಳ್ಳಬೇಕಿದ್ದ ಮೀನುಗಾರರೊಬ್ಬರು ಅನಾರೋಗ್ಯದಿಂದ ಕಳೆದ ಶನಿವಾರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಅನಾರೋಗ್ಯದಿಂದ ಒಬ್ಬ ಕೈದಿ ಸಾವು

199 ಮೀನುಗಾರರನ್ನು ಬಿಡುಗಡೆಗೊಳಿಸುವ ಬಗ್ಗೆ ಭಾರತೀಯ ವಿದೇಶಾಂಗ ಕಚೇರಿಗೆ ಮಾಹಿತಿ ನೀಡಲಾಗಿದೆ. ಮೀನುಗಾರರನ್ನು ಲಾಹೋರ್​ಗೆ ಕಳುಹಿಸಿ, ಅಲ್ಲಿಂದ ವಾಘಾ ಗಡಿಯ ಮೂಲಕ ಹಸ್ತಾಂತರಿಸಲಾಗುವುದು. ಮೀನುಗಾರರೊಂದಿಗೆ ವಾಪಸಾಗಬೇಕಿದ್ದ ಭಾರತೀಯ ನಾಗರಿಕ ಖೈದಿ ಜುಲ್ಫಿಕರ್ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ಕರಾಚಿ​ ಜೈಲಿನ ಉನ್ನತ ಪೊಲೀಸ್ ಅಧಿಕಾರಿ ಕಾಜಿ ನಝೀರ್ ಹೇಳಿದ್ದಾರೆ. (ಏಜೆನ್ಸೀಸ್)