ಸಿನಿಮಾ

ಯಾವ ಉದ್ದೇಶಕ್ಕೆ ಟ್ರೋಲ್ ಆಗಬೇಕು ಎನ್ನುತ್ತಲೇ ಪ್ರಶಾಂತ್ ಸಂಬರಗಿಗೆ ಟಾಂಗ್ ಕೊಟ್ಟ ಶಿವಣ್ಣ!

ಬೀದರ್: ನಟ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿರುವುದಕ್ಕೆ ಸಂಸದ ಪ್ರತಾಪ್ ಸಿಂಹ ಮೊದಲು ಸಾಮಾಜಿಕ ಜಾಲತಾಣದ ಮೂಲಕ ಟಾಂಗ್ ಕೊಟ್ಟಿದ್ದರು. ಬಳಿಕ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರಗಿ ಶಿವರಾಜ್ ಕುಮಾರ್ ವಿರುದ್ಧ ಕಿಡಿಕಾರಿದ್ದರು.

ಇವರಿಬ್ಬರ ಹೇಳಿಕೆಗಳು ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಈ ವಿಚಾರವಾಗಿ ಬೀದರ್​ನಲ್ಲಿ ಶಿವರಾಜ್ ಕುಮಾರ್ ಮಾತನಾಡುತ್ತಾ, ನಾನೊಂದು ಹೇಳುವುದು, ಪ್ರಶಾಂತ್ ಸಂಬರಗಿ ಒಂದು ಹೇಳೊದು ಬೇಡ. ಈ ವಿವಾದವನ್ನು ಇಲ್ಲಿಗೇ ಅಂತ್ಯ ಮಾಡೋಣ. ದೇಶದಲ್ಲಿ ಸಾವಿರ ಮಾತನಾಡುತ್ತಾರೆ. ಅದಕ್ಕೆಲ್ಲ ಚಿಂತೆ ಮಾಡುತ್ತಾ ಕೂತರೆ ಬದುಕಲು ಸಾಧ್ಯವಿಲ್ಲ. ಹೃದಯಕ್ಕೆ ಅನಿಸಿದ್ದನ್ನು ಮಾಡೋದು ಸುಲಭ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಜನರ ಹಣ ಖರ್ಚು ಮಾಡದೇ ಪ್ರಚಾರ ಮಾಡುವುದು ಹೇಗೆ? ಐಡಿಯಾ ಕೊಡಿ ಎಂದ ನಟ ಉಪೇಂದ್ರ

ಪ್ರಶಾಂತ್ ಸಂಬರಗಿ ಟೀಕೆ

ಪ್ರಶಾಂತ್ ಸಂಬರ್ಗಿ ಫೇಸ್​ಬುಕ್​ನಲ್ಲಿ, ‘ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ. ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ, ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತಗೊಂಡು ಇನ್ನೊಂದು ಫಿಲ್ಮ್ ಗೆ ಸೈನ್ ಮಾಡಿ ಬಿಡುತ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು ಎಲ್ಲಾ ಒಂದೇ. ಏನೋ ಹೇಳ್ತಾರಲ್ಲ ಗೆದ್ದರೆ ಬೆಟ್ಟ. ಇಲ್ಲ ಅಂದ್ರೆ.. ಬಂತಾ ಪ್ಯಾಕೆಟ್.. ಸರಿ ಆಲ್ ರೈಟ್ ಮುಂದೆ ಹೋಗೋಣ’ ಎಂದು ಬರೆದುಕೊಂಡಿದ್ದರು.

ಹೃದಕ್ಕೆ ಅನಿಸಿದ್ದನ್ನು ಮಾಡಬೇಕು

ಹೃದಯಕ್ಕೆ ಅನಿಸಿದ್ದನ್ನು ಮಾಡಿಕೊಂಡಿದ್ದರೆ ಅವನು ಮನುಷ್ಯ. ಕಾಮೆಂಟ್ ಮಾಡುವುದು ಸುಲಭ. ನನಗೆ ಇದರಿಂದ ಯಾವುದೇ ಬೇಸರ ಆಗುವುದಿಲ್ಲ. ನನ್ನ ಅಭಿಮಾನಿಗಳಿಗೂ ಬೇಸರವಾಗುವುದಿಲ್ಲ. ಇಂಥಾ ಹೇಳಿಕೆಗಳಿಗೆ ಚಿಂತೆ ಮಾಡದೆ, ನಿಷ್ಕಾಳಜಿ ಮಾಡಿ ಬಿಡಬೇಕು ಎಂದು ಹೇಳುವ ಮೂಲಕ ಶಿವರಾಜ್​ ಕುಮಾರ್ ಪ್ರಶಾಂತ್ ಸಂಬರಗಿಗಿ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ‘ಚಾಂಪ್​​’ನನ್ನು ಕಳೆದುಕೊಂಡ ಬೇಸರದಲ್ಲಿ ರಮ್ಯಾ; ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಗೈರು

ಯಾವ ಉದ್ಧೇಶಕ್ಕೆ ಟ್ರೋಲ್ ಆಗಬೇಕು ಹೇಳಿ?

ಟ್ರೋಲ್ ಮಾಡುವುದಕ್ಕೆ ಒಂದು ಕಾರಣ ಹೇಳಿ. ಟ್ರೋಲ್ ಎನ್ನುವುದು ಎಲ್ಲರಿಗೂ ತಮಾಷೆ ಆಗಿದೆ. ಯಾವ ಉದ್ಧೇಶಕ್ಕೆ ಟ್ರೋಲ್ ಆಗಬೇಕು ಹೇಳಿ? ನಾನ ಮನುಷ್ಯನಲ್ವಾ. ನನಗೂ ಒಂದು ಆಸೆ, ಆಕಾಂಕ್ಷೆ ಇರಲ್ವಾ? ನಾನು ನನ್ನ ಅಭ್ಯರ್ಥಿಗಳ ಬಗ್ಗೆ ಮಾತಾನಾಡುತ್ತೇನೆ. ವೈಯಕ್ತಿಕವಾಗಿ ನಾನು ಯಾರನ್ನು ಬೈದಿಲ್ಲ. ಸೆನ್ಸ್ ಇದ್ದರೆ ಅವರು ತಿಳಿದುಕೊಳ್ಳಬೇಕು ಎಂದು ಟ್ರೋಲ್ ವಿರುದ್ಧ ಶಿವರಾಜ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.

Latest Posts

ಲೈಫ್‌ಸ್ಟೈಲ್