More

    ಬಿಜೆಪಿ ಅತಿದೊಡ್ಡ ಪಕ್ಷವಾಗಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ಪ್ರಚಾರದ ವಿವರ ಕೊಟ್ಟ ಶೋಭಾ ಕರಂದ್ಲಾಜೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನಡೆಸಿದ್ದ ಭಾರಿ ಪ್ರಚಾರದ ವಿವರವನ್ನು ನೀಡಿದ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕಿ ಶೋಭಾ ಕರಂದ್ಲಾಜೆ, ಭಾರತೀಯ ಜನತಾ ಪಕ್ಷವು ಅತಿದೊಡ್ಡ ಪಕ್ಷವಾಗಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಡಿಸಿದ್ದಾರೆ.

    ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಗೆಲ್ಲಲಿದೆ. ನಮಗೆ ಬಹುಮತ ಬರುವ ವಿಶ್ವಾಸ ಇದೆ, ಮತ್ತೆ ಸರ್ಕಾರ ರಚಿಸುತ್ತೇವೆ ಎಂದರು. ವೇಗಗತಿಯಲ್ಲಿ ಅಭಿವೃದ್ಧಿ ಮಾಡಿದ್ದೇವೆ, ಮೋದಿಯವರ ನೇತೃತ್ವದಲ್ಲಿ ದೇಶ, ರಾಜ್ಯ ಅಭಿವೃದ್ಧಿ ಆಗಿದೆ. ವಿಮಾನ ನಿಲ್ದಾಣಗಳು, ಬಂದರುಗಳು, ರೈಲು ಸೇವೆ ಅಭಿವೃದ್ಧಿ ಆಗಿದೆ. ಜನರು ಖುಷಿಯಿಂದ ನಮ್ಮನ್ನು ಸ್ವೀಕಾರ ಮಾಡಿದ್ದಾರೆ ಎಂದರು.

    ಇದನ್ನೂ ಓದಿ: ರಾಜ್ಯಾದ್ಯಂತ ಮದ್ಯ ಮಾರಾಟ, ಸಾಗಾಟ, ಸಂಗ್ರಹ ಬಂದ್; ಎಂದಿನಿಂದ ಎಂದಿನವರೆಗೆ?

    ಚುನಾವಣೆ ಸಲುವಾಗಿ ನಮ್ಮ ರಾಜ್ಯ ನಾಯಕರು 231 ಸಾರ್ವಜನಿಕ ಸಭೆಗಳನ್ನು, 48 ರೋಡ್ ಶೋಗಳನ್ನು ಮಾಡಿದ್ದಾರೆ. ಕೇಂದ್ರದಿಂದ ಬಂದ ನಾಯಕರು ಉತ್ತಮವಾಗಿ ಪ್ರಚಾರ ಮಾಡಿದಾರೆ. ಭಾಷಾವಾರು ಸಮುದಾಯಗಳ ಜನರಿರುವ ಕಡೆ ಅದೇ ಭಾಷೆಗಳ ನಾಯಕರು ಪ್ರಚಾರ ಮಾಡಿದಾರೆ. ನಮ್ಮ ರಾಷ್ಟ್ರೀಯ ನಾಯಕರು 206 ಬಹಿರಂಗ ಸಮಾವೇಶಗಳನ್ನು ಮಾಡಿದ್ದಾರೆ. ಮೋದಿಯವರು 19 ಸಭೆ, 6 ರೋಡ್ ಶೋಗಳನ್ನು ಮಾಡಿದ್ದಾರೆ ಎಂದು ಶೋಭಾ ವಿವರಣೆ ನೀಡಿದರು.

    ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂ. ಕಳೆದುಕೊಂಡು ನಿಮ್ಹಾನ್ಸ್​ಗೆ ಹೋದ ಉದ್ಯಮಿ!

    ಏಪ್ರಿಲ್ 25, 26ರಂದು ಬಿಜೆಪಿಯಿಂದ ಮಹಾ ಪ್ರಚಾರ ಅಭಿಯಾನ ನಡೆಸಲಾಗಿದ್ದು, 3116 ಕಡೆ ಬೂತ್ ಮಟ್ಟದ ಕಾರ್ಯಕರ್ತರು ಪ್ರಚಾರ ಮಾಡಿದ್ದಾರೆ. 9125 ಚಿಕ್ಕಪುಟ್ಟ ಸಭೆಗಳನ್ನು ನಡೆಸಲಾಗಿದ್ದು, 1137 ರೋಡ್ ಶೋ ಮಾಡಲಾಗಿತ್ತು. ಈ ಮೂಲಕ ಒಂದೂವರೆ ದಿನದಲ್ಲಿ 20 ಲಕ್ಷ ಜನರನ್ನು ತಲುಪಿದ್ದೆವು ಎಂದು ಹೇಳಿದರು.

    ಇದನ್ನೂ ಓದಿ: ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

    ಪ್ರಧಾನಿ ಮೋದಿ, ಅಮಿತ್ ಷಾ, ಜೆ.ಪಿ.ನಡ್ಡಾ ಮಾತ್ರವಲ್ಲದೆ ಅನೇಕರು ಪ್ರಚಾರ ಮಾಡಿದ್ದಾರೆ. ಬೇರೆ ರಾಜ್ಯಗಳ 31 ಜನ ನಾಯಕರು ಕರ್ನಾಟಕದಲ್ಲಿ ಪ್ರಚಾರ ಮಾಡಿದಾರೆ. ಅಮಿತ್ ಷಾ 16 ಸಭೆ, 17 ಕಡೆ ರೋಡ್ ಶೋ ಮಾಡಿದ್ದು, ಕೇಂದ್ರದ ಅನೇಕ ಸಚಿವರು, ಅನ್ಯರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು ಕೂಡ ಬಂದಿದ್ದರು ಎಂದರು.

    ಬಿ.ಎಲ್. ಸಂತೋಷ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿದ್ದ ಯುವಕನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts