ನ್ಯೂಸ್

ಬಿಹಾರ ರೈಲು ನಿಲ್ದಾಣದಲ್ಲಿ ತನ್ನ ಅಶ್ಲೀಲ ವಿಡಿಯೋ ಪ್ರದರ್ಶನ: ನೀಲಿತಾರೆ ಕೇಂದ್ರ ಲಸ್ಟ್​ ಪ್ರತಿಕ್ರಿಯೆ ಹೀಗಿದೆ…

ಪಟನಾ: ಬಿಹಾರ ರಾಜಧಾನಿ ಪಟನಾದ ರೈಲು ನಿಲ್ದಾಣದಲ್ಲಿ ತನ್ನ ಪೋರ್ನ್​ ವಿಡಿಯೋ ವೈರಲ್​ ಆಗಿರುವುದು ನೀಲಿತಾರೆ ಕೇಂದ್ರ ಲಸ್ಟ್​ ಗಮನಕ್ಕೆ ಬಂದಿದ್ದು, ಘಟನೆಯ ಬಗ್ಗೆ ನಿಗೂಢ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಇಂಡಿಯಾ ಎಂದು ಇಂಗ್ಲಿಷ್​ನಲ್ಲಿ ಬರೆದು ನೇರಳೆ ಬಣ್ಣದ ಟಾಪ್​ ಧರಿಸಿರುವ ಫೋಟೋ ಪೋಸ್ಟ್​ ಮಾಡಿ ಬಿಹಾರ ರೈಲ್ವೆ ನಿಲ್ದಾಣ (#BiharRailwayStation) ಎಂದು ಹ್ಯಾಷ್​ಟ್ಯಾಗ್​ ಹಾಕಿ ನಿಗೂಢವಾಗಿ ಟ್ವೀಟ್​ ಮಾಡಿದ್ದಾರೆ. ಕೇಂದ್ರ ಲಸ್ಟ್​ ಮಾಡಿರುವ ಟ್ವೀಟ್​ ಅನ್ನು 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 14 ಸಾವಿರ ಮಂದಿ ಟ್ವಿಟ್​ ಅನ್ನು ಲೈಕ್ಸ್​ ಮಾಡಿದ್ದು, ಸಾವಿರಕ್ಕೂ ಅಧಿಕ ಮಂದಿ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿದ್ದಾರೆ. ಸುಮಾರು 600ಕ್ಕೂ ಅಧಿಕ ಮಂದಿ ಲಸ್ಟ್​ ಅವರು ಟ್ವೀಟ್​ಗೆ ಬಗೆ ಬಗೆಯ ಕಾಮೆಂಟ್​ ಮಾಡಿದ್ದಾರೆ.

ಘಟನೆ ಹಿನ್ನೆಲೆ ಏನು?

ಬಿಹಾರದ ಪಟನಾ ರೈಲು ನಿಲ್ದಾಣದಲ್ಲಿ ಅಳವಡಿಸಿದ್ದ ಟಿ.ವಿ. ಪರದೆಯಲ್ಲಿ ಮೂರು ನಿಮಿಷಗಳ ಕಾಲ ನೀಲಿ ಚಿತ್ರ ಪ್ರದರ್ಶನಗೊಂಡ ಘಟನೆ ಮಾ.19ರ ಬೆಳಗ್ಗೆ 9.30ರ ಸುಮಾರಿಗೆ ನಡೆಯಿತು. ಈ ಘಟನೆಯಿಂದ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಮುಜುಗರಕ್ಕೊಳಗಾದರು. ಟಿವಿಯಲ್ಲಿ ನೀಲಿಚಿತ್ರ ಪ್ರದರ್ಶನವಾಗುತ್ತಿದ್ದಂತೆ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಅಧಿಕಾರಿಗಳು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್)ಗೆ ದೂರು ಸಲ್ಲಿಸಿದರು.

ದೂರು ದಾಖಲಿಸಿಕೊಂಡ ಆರ್​ಪಿಎಫ್ ಅಧಿಕಾರಿಗಳು, ಟಿ.ವಿಯಲ್ಲಿ ಜಾಹೀರಾತು ಪ್ರದರ್ಶಿಸುವ ಜವಾಬ್ದಾರಿ ವಹಿಸಿಕೊಂಡ ದತ್ತಾ ಕಮ್ಯುನಿಕೇಷನ್ ಸಂಸ್ಥೆಯನ್ನು ಸಂಪರ್ಕಿಸಿ ನೀಲಿ ಚಿತ್ರ ಪ್ರದರ್ಶನವಾಗುತ್ತಿರುವುದನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಬಳಿಕ ರೈಲ್ವೇ ಅಧಿಕಾರಿಗಳು ದತ್ತಾ ಕಮ್ಯುನಿಕೇಷನ್ ವಿರುದ್ಧ ಎಫ್ಐಆರ್ ದಾಖಲಿಸಿ, ದಂಡ ವಿಧಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೇ ಅಧಿಕಾರಿಗಳು, ನಿಲ್ದಾಣದಲ್ಲಿ ಟಿ.ವಿ ಪರದೆಯ ಮೇಲೆ ಜಾಹೀರಾತುಗಳನ್ನು ಪ್ರಸಾರ ಮಾಡಲು ಏಜೆನ್ಸಿಗೆ ನೀಡಲಾಗಿದ್ದ ಗುತ್ತಿಗೆಯನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್​)