ನಿಧಿಗಾಗಿ ಅಮಾವಾಸ್ಯೆಯಂದು ಬಾಣಂತಿ ಹತ್ಯೆ?! ಮನೆಯಿಂದ ಅನತಿ ದೂರದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ

Desease Netravati
ಮೃತ ನೇತ್ರಾವತಿ
Published on

ಕೊಪ್ಪಳ: ನಿಧಿಗಾಗಿ ಬಾಣಂತಿಯ ಕೊಲೆ ನಡೆಯಿತಾ ಎಂದು ಅನುಮಾನ ಹುಟ್ಟಿಸುವಂತಹ ಘಟನೆ ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.

ನೇತ್ರಾವತಿ ಕುರಿ (26) ಕೊಲೆಯಾದ ಬಾಣಂತಿ. ಸೋಮವಾರ (ಮಾ.20) ತಡರಾತ್ರಿ ಘಟನೆ ನಡೆದಿದೆ. ಕೊಲೆಯಾದ ನೇತ್ರಾವತಿ ಒಂದೂವರೆ ತಿಂಗಳ ಬಾಣಂತಿ. ನೇತ್ರಾವತಿಯನ್ನು ಸುಟ್ಟು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಮಾವಾಸ್ಯೆ ಹಿನ್ನಲೆಯಲ್ಲಿ ನಿಧಿಗಾಗಿ ಕೊಲೆ‌ ಮಾಡಿರುವ ಅನುಮಾನ ಮೂಡಿದೆ.

ಮನೆಯಿಂದ ಅನತಿ ದೂರದಲ್ಲೇ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಘಟನಾ ಸ್ಥಳಕ್ಕೆ ಕೊಪ್ಪಳ‌ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net