More

    ಮಾ. 29ರಿಂದ ಏ.8ರವರೆಗೆ ಕರಗ ಉತ್ಸವ: ಮಸ್ತಾನ್ ಸಾಬ್ ದರ್ಗಾಕ್ಕೆ ಹೋಗದಂತೆ ಹಿಂದು ಸಂಘಟನೆಗಳ ಪಟ್ಟು

    ಬೆಂಗಳೂರು: ಮಾರ್ಚ್​ 29 ರಿಂದ ಏಪ್ರಿಲ್​ 8ರವರೆಗೆ ಐತಿಹಾಸಿಕ ಕರಗ ಉತ್ಸವ ಬಹಳ ವಿಜೃಂಭಣೆಯಿಂದ ನಗರದಲ್ಲಿ ನಡೆಯಲಿದೆ. ಈ ಬಾರಿಯು ಕರಗ ವಿಚಾರದಲ್ಲಿ ಧರ್ಮ ದಂಗಲ್​ ಎದುರಾಗುವ ಸಾಧ್ಯತೆ ಇದೆ.

    ಕರಗವನ್ನು ಮಸ್ತಾನ್ ಸಾಬ್ ದರ್ಗಕ್ಕೆ ಕರೆದೊಯ್ಯದಂತೆ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿದ್ದರೆ, ಈ ಬಾರಿಯೂ ಕರಗ ದರ್ಗಗೆ ಹೋಗೆ ಹೋಗುತ್ತೆ ಎಂದು ಧರ್ಮರಾಯಸ್ವಾಮಿ ದೇವಸ್ಥಾನದ ಅಧ್ಯಕ್ಷ ಸತೀಶ್ ಹೇಳಿಕೆ ನೀಡಿದ್ದಾರೆ.

    ಕರಗವನ್ನು ನಾವು ಮಾಡಿಸಲ್ಲ, ಆ ತಾಯಿ ಮಾಡಿಸುತ್ತಾಳೆ. ಬೆಂಗಳೂರು ಕರಗಕ್ಕೆ 8 ನೂರು ವರ್ಷ ಇತಿಹಾಸ ಇದೆ. ಅಂದಿನಿಂದಲೂ ಕರಗ ದರ್ಗಕ್ಕೆ ಹೋಗುತ್ತದೆ. ಹೋಗಬಾರದು ಎಂಬ ವಿಚಾರ ಕಳೆದ ಬಾರಿ ಮುನ್ನೆಲೆಗೆ ಬಂದಿತು. ಆದರೆ, ಎಲ್ಲವು ತಾಯಿಯ ಕೈಯಲ್ಲಿ ಇದೆ. ನಾವು ಜೊತೆಗೆ ಹೋಗ್ತಿವಿ ಅಷ್ಟೇ. ಈ ಬಾರಿಯೂ ಕರಗ ದರ್ಗಗೆ ಹೋಗೆ ಹೋಗುತ್ತದೆ ಎಂದು ಹೇಳಿದರು.

    ಇದನ್ನೂ ಓದಿ: ಕಳೆದು ಹೋದ ಆಭರಣವನ್ನು ತಾಸಿನಲ್ಲೇ ಹುಡುಕಿಕೊಟ್ಟ ಪೊಲೀಸರು

    ಶತಮಾನಗಳ ಇತಿಹಾಸ ಹೊಂದಿರುವ ವಿಶ್ವ ಪ್ರಸಿದ್ಧ ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಆದಿಶಕ್ತಿಯನ್ನು ಗುರುತಿಸಿ ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಕರಗ ಮಹೋತ್ಸವವೂ ಒಂದು. ಕರಗ ಎಂಬ ಮಾತಿಗೆ ‘ಕುಂಭ’ ಎಂಬ ಅರ್ಥ ಇದೆ. ಶತಮಾನಗಳ ಇತಿಹಾಸ ಹೊಂದಿರುವ ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ.

    ಕರಗದ ಒಂದೊಂದು ಅಕ್ಷರವೂ ಒಂದೊಂದು ಸಂಕೇತವನ್ನು ಹೊಂದಿವೆ ಎನ್ನುವ ಪ್ರತೀತಿ ಇದೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು ಅಥವಾ ತಿರುಗುವುದು ಎಂಬ ಅರ್ಥ ವಿವರಣೆ ಬಳಕೆಯಲ್ಲಿದೆ. ಕರಗ ಪೂಜೆ ಮತ್ತು ಉತ್ಸವಗಳು ತಮಿಳುನಾಡಿನಲ್ಲಿ ಬಹು ಹಿಂದಿನಿಂದಲೂ ವೈಭವದಿಂದ ಆಚರಿಸಲ್ಪಡುತ್ತಿದೆ. ಕರ್ನಾಟಕ ರಾಜ್ಯದ ಬೆಂಗಳೂರು, ಕೋಲಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಆಚರಣೆ ರೂಢಿಯಲ್ಲಿದೆ. ಬೆಂಗಳೂರಿನ ಕರಗ ಪ್ರಸಿದ್ಧಿಯಾಗಿದೆ.

    ಕರಗ ಕುರಿತು ಅವಹೇಳನಕಾರಿ ಮಾತಾಡಿದ ಶಾಸಕ ಹ್ಯಾರಿಸ್; ಭಾರಿ ಪ್ರತಿಭಟನೆಯ ಸುಳಿವು ಸಿಗುತ್ತಿದ್ದಂತೆ ಕ್ಷಮೆಯಾಚನೆ

    ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಸಂಸದೆ ಸುಮಲತಾ ಅಂಬರೀಷ್​ ಪ್ಲಾನ್​!

    ಯುಗಾದಿ ಹಿನ್ನೆಲೆ ಚರಂಡಿ ಸ್ವಚ್ಛ ಮಾಡುವಾಗ ವಿಷಕಾರಿ ಗಾಳಿ ಸೇವಿಸಿ ಪೌರಕಾರ್ಮಿಕರಿಬ್ಬರ ದುರಂತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts