More

    ಯುಗಾದಿ ಹಿನ್ನೆಲೆ ಚರಂಡಿ ಸ್ವಚ್ಛ ಮಾಡುವಾಗ ವಿಷಕಾರಿ ಗಾಳಿ ಸೇವಿಸಿ ಪೌರಕಾರ್ಮಿಕರಿಬ್ಬರ ದುರಂತ ಸಾವು

    ದಾವಣಗೆರೆ: ಚರಂಡಿ ಸ್ವಚ್ಛಗೊಳಿಸುವಾಗ ವಿಷಕಾರಿ ಗಾಳಿ ಸೇವಿಸಿ ಪೌರಕಾರ್ಮಿಕರಿಬ್ಬರು ದುರಂತ ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಇಂದು (ಮಾ.21) ನಡೆದಿದೆ.

    ಮೃತ ಪೌರ ಕಾರ್ಮಿಕರನ್ನು ಸತ್ಯಪ್ಪ (45) ಹಾಗೂ ಮೈಲಪ್ಪ (42) ಎಂದು ಗುರುತಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕರ ಜೀವ ಬಲಿಯಾಗಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬಹುದಿನಗಳಿಂದ ತುಂಬಿದ್ದ ಚರಂಡಿಯನ್ನು ಸ್ವಚ್ಛಗೊಳಿಸಲು ಪಿಡಿಒ ಸೂಚಿಸಿದ್ದರು.

    ಇದನ್ನೂ ಓದಿ: ಈಗಿನ ಟೀಮ್​ ಇಂಡಿಯಾದಲ್ಲಿ ತನ್ನಂತೆ ಬ್ಯಾಟಿಂಗ್ ಮಾಡುವ ಆಟಗಾರ ಯಾರೆಂಬುದನ್ನು ತಿಳಿಸಿದ ವೀರೂ!

    ಪಿಡಿಒ ಆದೇಶದ ಮೇರೆಗೆ ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಸತ್ಯಪ್ಪ ಮತ್ತು ಮೈಲಪ್ಪ ಮುಂದಾಗಿದ್ದರು. ಹೀಗೆ ಚರಂಡಿ ಸ್ವಚ್ಛಗೊಳಿಸುವಾಗ ವಿಷ ಗಾಳಿ ಸೇವಿಸಿ ಕಾರ್ಮಿಕರಿಬ್ಬರು ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಹತ್ತಿರದ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.

    ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದೀಗ ಎರಡು ಕುಟುಂಬಗಳು ಅನಾಥವಾಗಿವೆ. ಘಟನೆ ಸಂಬಂಧ ಬೀಳಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. (ಏಜೆನ್ಸೀಸ್​)

    ಇಂದು ರಾತ್ರಿ-ಹಗಲು ಸಮಾನ ಅವಧಿ; ವಸಂತ ವಿಷುವತ್ ಸಂಕ್ರಾಂತಿಯಂದು ವಿಶೇಷ ವಿದ್ಯಮಾನ

    ಜೀವನದ ಉದ್ದೇಶ ಸಮಕಾಲೀನ ದೃಷ್ಟಿಕೋನ

    ನ್ಯಾಯದೇವತೆ: ಮೊದಲ ಹೆಂಡತಿ ಒಪ್ಪಿದರೆ ಎರಡನೇ ಮದುವೆ ಆಗಬಹುದೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts