

ಗದಗ: ಚುನಾವಣೆ ಘೋಷಣೆ ಮುನ್ನವೇ ಗದಗ ಜಿಲ್ಲಾಡಳಿತ ಭರ್ಜರಿ ಚಿನ್ನದ ಬೇಟೆಯನ್ನು ಮಾಡಿದೆ. ಗದಗ ನಗರದ ಹೊರವಲಯದ ಚೆಕ್ ಪೋಸ್ಟ್ನಲ್ಲಿ ಪೊಲೀಸರು ಭಾರಿ ಪ್ರಮಾಣದ ಚಿನ್ನದ ಜತೆ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
4 ಕಿಲೋ ಬಂಗಾರದ ಆಭರಣ ಜಪ್ತಿ ಮಾಡಲಾಗಿದೆ. ಮಹಿಪಾಲ್ ಜೈನ್, ಅಭಿಷೇಕ್ ಜೈನ್ ಎಂಬುವರ ಸೇರಿದ ಚಿನ್ನವಾಗಿದೆ ಎನ್ನಲಾಗಿದೆ.
ಚುನಾವಣೆ ಘೋಷಣೆ ಮುನ್ನವೇ ಗದಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ನಗರದ ಹೊರವಲಯದ ಚೆಕ್ ಪೋಸ್ಟ್ನಲ್ಲಿ ಬಾಂಬೆಯಿಂದ ಗದಗಕ್ಕೆ ತರುತ್ತಿದ್ದ ದಾಖಲೆ ಇಲ್ಲದ 4 ಕಿಲೋ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ: ಪಾರಿವಾಳಗಳಿಗೆ ಆಹಾರ ಹಾಕಿದರೆ 500 ರೂ. ದಂಡ..!
ಡಿಸಿ ವೈಶ್ಯಾಲಿ, ಎಸ್ಪಿ ಬಿ ಎಸ್ ನೇಮಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಭಾರಿ ಪ್ರಮಾಣದ ಚಿನ್ನದ ಜತೆಗೆ ಆರೋಪಿಗಳನ್ನು ವಶಪಡಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ .