More

    ಪಾರಿವಾಳಗಳಿಗೆ ಆಹಾರ ಹಾಕಿದರೆ 500 ರೂ. ದಂಡ..!

    ಪುಣೆ: ಇತ್ತೀಚೆಗೆ ದೇಶದ ಜನರಿಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿದೆ. ಪ್ರಸ್ತುತ ದೇಶದಲ್ಲಿ ಹೈಪರ್ಸೆನ್ಸಿಟಿವ್ ನ್ಯುಮೋನಿಯಾ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದೆ.

    ಹೈಪರ್ಸೆನ್ಸಿಟಿವ್ ನ್ಯುಮೋನಿಯಾ ಎಂದು ಕರೆಯಲಾಗುವ ಈ ಆರೋಗ್ಯ ಸಮಸ್ಯೆ ಪ್ರಾಣಿ, ಸೂಕ್ಷ್ಮಜೀವಿಗಳು, ಪಕ್ಷಿಗಳ ಹಿಕ್ಕೆಗಳು ಮತ್ತು ಗರಿಗಳ ಮೂಲಕ ಅಥವಾ ರಾಸಾಯನಿಕ ಕ್ರಿಯೆಗಳಿಂದ ಹರಡುವ ರೋಗವಾಗಿದ್ದು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ.

    ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಕಂಡುಬರುವ ಪಕ್ಷಿಗಳೆಂದರೆ ಅದು ಪಾರಿವಾಳ. ಹೀಗಾಗಿ ಪಾರಿವಾಳ ಮತ್ತು ಇತರೆ ಪಕ್ಷಿಗಳ ಗರಿಗಳು ಮತ್ತು ಕೊಕ್ಕುಗಳು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಸೋಂಕಿನ ವಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ. ಶ್ವಾಸಕೋಶದ ಮೇಲೆ ಪರಿಣಾಮ ಬೀರಿ ಅತಿಸೂಕ್ಷ್ಮ ನ್ಯುಮೋನಿಯಾ ಪ್ರಕರಣಗಳನ್ನು ಹೆಚ್ಚಿಸುತ್ತದೆ. ಹಕ್ಕಿಗಳ ಮೂಲಕ ಸೋಂಕು ಹೇಗೆ ಹರಡುತ್ತದೆ ಎಂಬುದರ ಬಗ್ಗೆ ಫೋರ್ಟಿಸ್ ಆಸ್ಪತ್ರೆಯ ಆಂತರಿಕ ಔಷಧದ ಹಿರಿಯ ಸಲಹೆಗಾರ ಡಾ. ಮನೋಜ್ ಶರ್ಮಾ ವಿವರಿಸಿದ್ದಾರೆ.

    ಇದನ್ನೂ ಓದಿ: VIDEO | ನ್ಯೂಸ್‌ ಓದುತ್ತಲೇ ದಿಢೀರ್‌ ಕುಸಿದು ಬಿದ್ದ ನಿರೂಪಕಿ..!
    ಪುಣೆ ಮುನ್ಸಿಪಲ್ ಕಾರ್ಪೊರೇಷನ್‌ನ ಆರೋಗ್ಯ ವಿಭಾಗವು ಸಾರ್ವಜನಿಕ ಸ್ಥಳಗಳಾದ ಪಾದಚಾರಿ ಮಾರ್ಗಗಳು, ಸಾರ್ವಜನಿಕ ಚೌಕಗಳು ಅಥವಾ ನದಿಪಾತ್ರಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡಿದ ವ್ಯಕ್ತಿಗಳಿಗೆ 500 ರೂಪಾಯಿ ದಂಡ ವಿಧಿಸಲು ಪ್ರಾರಂಭಿಸಿದೆ.ನಾಗರಿಕ ಪ್ರಾಧಿಕಾರವು ಪಾರಿವಾಳದ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಹೆಚ್ಚುತ್ತಿರುವುದನ್ನು ಮನಗಂಡಿತು. ಇದು ಅನಾರೋಗ್ಯಕರ ಎಂದು ಭಾವಿಸಿರುವ ಪ್ರಾಧಿಕಾರವು, ಉಸಿರಾಟದ ಕಾಯಿಲೆಗಳ ಹರಡುತ್ತದೆ ಎನ್ನುವ ಕಾರಣಕ್ಕೆ ದಂಡ ವಿಧಿಸಲು ಆರಂಭಿಸಿದೆ.

    ಇದನ್ನೂ ಓದಿ: ತಂದೆ-ತಾಯಿ ವಿಧಿವಶ; 20 ವರ್ಷದಿಂದ ಮನೆಯಲ್ಲೇ ಬಂಧಿಯಾದ ಅಣ್ಣ-ತಂಗಿ!

    ಕಲ್ಯಾಣಿ ನಗರದ ಮಾರಿಗೋಲ್ಡ್ ಸೊಸೈಟಿಯ ನಿವಾಸಿಯೊಬ್ಬರಿಗೆ ದಂಡ ವಿಧಿಸಿದ್ದು, ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷಿಗಳ ಹಿಕ್ಕೆಗಳು ಸೋಂಕುಗಳನ್ನು ಹರಡುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಮಹಾರಾಷ್ಟ್ರ, ಥಾಣೆ ಮತ್ತು ಪನ್ವೇಲ್ ನಾಗರಿಕ ಸಂಸ್ಥೆಗಳು ಪಾರಿವಾಳಗಳಿಗೆ ಆಹಾರ ನೀಡುವ ಜನರಿಗೆ ದಂಡ ವಿಧಿಸಲು ಇದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿವೆ.

    ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಕಂಡುಬರುವ ಪಕ್ಷಿಗಳೆಂದರೆ ಅದು ಪಾರಿವಾಳ. ಹೀಗಾಗಿ ಪಾರಿವಾಳ ಮತ್ತು ಇತರೆ ಪಕ್ಷಿಗಳ ಗರಿಗಳು ಮತ್ತು ಕೊಕ್ಕುಗಳು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಸೋಂಕಿನ ವಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರಿ ಅತಿಸೂಕ್ಷ್ಮ ನ್ಯುಮೋನಿಯಾ ಪ್ರಕರಣಗಳನ್ನು ಹೆಚ್ಚಿಸುತ್ತದೆ. ಹಕ್ಕಿಗಳ ಮೂಲಕ ಸೋಂಕು ಹೇಗೆ ಹರಡುತ್ತದೆ ಎಂಬುದರ ಬಗ್ಗೆ ಫೋರ್ಟಿಸ್ ಆಸ್ಪತ್ರೆಯ ಆಂತರಿಕ ಔಷಧದ ಹಿರಿಯ ಸಲಹೆಗಾರ ಡಾ. ಮನೋಜ್ ಶರ್ಮಾ ವಿವರಿಸಿದ್ದಾರೆ.

    ಇದನ್ನೂ ಓದಿ: ಡ್ರೈ ಕ್ಲೀನ್‌ಗೆ ಬಟ್ಟೆ ಕೊಡೋಕೆ ಹೋದ ಮದುಮಗಳು 6 ಮಕ್ಕಳ ತಂದೆ ಜತೆ ಎಸ್ಕೇಪ್!

    ಮಹಾರಾಷ್ಟ್ರದ ಥಾಣೆಯಲ್ಲಿ ಅತಿಸೂಕ್ಷ್ಮ ನ್ಯುಮೋನಿಯಾ ಪ್ರಕರಣಗಳು ಏರಿಕೆ ಕಾಣುತ್ತಿದ್ದಂತೆ, ಪುರಸಭೆಯ ಅಧಿಕಾರಿಗಳು ವಸತಿ ಪ್ರದೇಶಗಳ ಬಳಿ ಪಾರಿವಾಳಗಳಿಗೆ ಆಹಾರ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಪಾರಿವಾಳಗಳಿಗೆ ಆಹಾರ ನೀಡುವವರಿಗೆ 500 ದಂಡ ವಿಧಿಸಲಾಗುವುದು ಎಂಬ ಎಚ್ಚರಿಕೆಯೊಂದಿಗೆ ಅಧಿಕಾರಿಗಳು ವಿವಿಧೆಡೆ ಭಿತ್ತಿಪತ್ರಗಳನ್ನು ಸಹ ಅಂಟಿಸಿದ್ದಾರೆ.

    ಕ್ರಿಕೆಟ್ ಆಡುವಾಗ ಕುಸಿದು ಬಿದ್ದ..ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಕೊನೆಯುಸಿರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts