VIDEO | ನ್ಯೂಸ್‌ ಓದುತ್ತಲೇ ದಿಢೀರ್‌ ಕುಸಿದು ಬಿದ್ದ ನಿರೂಪಕಿ..!

US News Reporter Collapses During Live Broadcast
Published on

ವಾಷಿಂಗ್ಟನ್​​: ಯಾವ ಕ್ಷಣ ಏನಾಗುತ್ತದೆ ಎಂಬುದರ ಅರಿವು ನಮಗೆ ಇರುವುದಿಲ್ಲ. ಇದೇ ರೀತಿ, ಹವಾಮಾನದ ವರದಿ ಮಾಡುತ್ತಲೇ ಸುದ್ದಿ ವಾಚಕರೊಬ್ಬರು ದಿಢೀರನೇ ಕುಸಿದು ಬಿದ್ದಿದ್ದಾರೆ. ನೇರ ಟಿವಿ ಪ್ರಸಾರದ ವೇಳೆ ಅಮೆರಿಕದಲ್ಲಿ ಈ ಘಟನೆ ನಡೆದಿದೆ.

ಸಿಬಿಎಸ್‌ ನ್ಯೂಸ್‌ ಚಾನೆಲ್‌ನ ಲಾಸ್‌ ಏಂಜಲೀಸ್‌ನಲ್ಲಿ ಅಲಿಸ್ಸಾ ಕಾರ್ಲ್ಸನ್ ಶ್ವಾರ್ಟ್ಜ್ ಎಂಬ ಮಹಿಳೆ ಹವಾಮಾನ ವರದಿಯನ್ನು ನೀಡಲು ಮುಂದಾದಾಗ ಈ ರೀತಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾ ತುಂಬಾ ಹರಿದಾಡುತ್ತಿದೆ. ತುಂಬಾ ಭಯಾನಕವಾಗಿದೆ. ಅವರು ಆರೋಗ್ಯ ಬೇಗ ಸುಧಾರಿಸಲಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ: ಮತ್ತೊಂದು ಸ್ಟುಡಿಯೋದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸುದ್ದಿ ನಿರೂಪಕರಾದ ನಿಚೆಲ್ ಮದೀನಾ ಮತ್ತು ರೇಚೆಲ್ ಕಿಮ್ ವರದಿಗಾರ್ತಿಯನ್ನು ವೀಕ್ಷಕರಿಗೆ ಪರಿಚಯಿಸಿದ್ದಾರೆ. ಬಳಿಕ, ಆಕೆ ಇದ್ದಕ್ಕಿದ್ದಂತೆ ಕುಸಿದು ಬೀಳುತ್ತಾಳೆ. ಇದನ್ನು ಗಮನಿಸಿದಾಗ, ಅವರು ಒಂದು ಕ್ಷಣ ಆಘಾತಗೊಂಡಿದ್ದು, ನಂತರ ಆ ಚಾನೆಲ್‌ನಲ್ಲಿ ವಿರಾಮ ತೆಗೆದುಕೊಳ್ಳುತ್ತಾರೆ.

ಘಟನೆ ನಡೆದ ಗಂಟೆಗಳ ನಂತರ, ಸಿಬಿಎಸ್ ಲಾಸ್ ಏಂಜಲೀಸ್ ಉಪಾಧ್ಯಕ್ಷ ಮತ್ತು ಸುದ್ದಿ ನಿರ್ದೇಶಕ ಮೈಕ್ ಡೆಲ್ಲೊ ಸ್ಟ್ರಿಟ್ಟೊ ಮಾತನಾಡಿ, ನಮ್ಮ ಸಹೋದ್ಯೋಗಿ ಅಲಿಸ್ಸಾ ಕಾರ್ಲ್ಸನ್ ಇಂದು ಬೆಳಗ್ಗೆ 7 ಗಂಟೆಗೆ ಸುದ್ದಿ ಪ್ರಸಾರದ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾದರು. ಅಲಿಸ್ಸಾ ಕಾರ್ಲ್ಸನ್ ಅವರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವು ಶೀಘ್ರದಲ್ಲೇ ಇನ್ನಷ್ಟು ಮಾಹಿತಿ ತಿಳಿದುಕೊಳ್ಳುತ್ತೇವೆ. ಶೀಘ್ರದಲ್ಲೇ ಅವಳ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ನಾವು ಪ್ರಾರ್ಥಿಸುತ್ತಿದ್ದೇವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net