More

    ತಂದೆ-ತಾಯಿ ವಿಧಿವಶ; 20 ವರ್ಷದಿಂದ ಮನೆಯಲ್ಲೇ ಬಂಧಿಯಾದ ಅಣ್ಣ-ತಂಗಿ!

    ಹರಿಯಾಣ: ಕಳೆದ 20 ವರ್ಷಗಳಿಂದ ಮನೆಯೊಂದರಲ್ಲಿ ಬಂಧಿಯಾಗಿದ್ದ ಅಣ್ಣ-ತಂಗಿಯನ್ನು ರಕ್ಷಿಸಲಾಗಿದೆ. ಈ ಘಟನೆ ಹರಿಯಾಣದ ಅಂಬಾಲಾ ಕ್ಯಾಂಟ್‍ನ ಬೋಹ್ ಗ್ರಾಮದಲ್ಲಿ ನಡೆದಿದೆ.

    ಸೂರ್ಯ ಪ್ರಕಾಶ್ ಶರ್ಮಾ ದಂಪತಿ ಮಕ್ಕಳು ಸಿಂಧು ಮತ್ತು ಸುನೀಲ್. ಸೂರ್ಯ ಪ್ರಕಾಶ್ ಶರ್ಮಾ ಅವರು ಆಯುರ್ವೇದ ವೈದ್ಯರಾಗಿದ್ದರು. ಇವರದ್ದು ತುಂಬಿದ ಕುಟುಂಬವಾಗಿತ್ತು. ಸಿಂಧು ಅವರು ಮಾಸ್ಟರ್ ಆಫ್ ಆರ್ಟ್ಸ್ (MA) ಮತ್ತು ಸುನೀಲ್ ಬ್ಯಾಚುಲರ್ ಆಫ್ ಎಜುಕೇಶನ್ (B..Ed) ಪದವಿಗಳನ್ನು ಹೊಂದಿದ್ದಾರೆ.

    ಇದನ್ನೂ ಓದಿ: ಡಿವೋರ್ಸ್ ಕೊಟ್ಟ ಪತಿ; ಮೀಸೆ, ಗಡ್ಡ ಬಿಟ್ಟು ಪುರುಷನಾದ ಮಹಿಳೆ!

    ಇಪ್ಪತ್ತು ವರ್ಷಗಳ ಹಿಂದೆ ಸೂರ್ಯ ಪ್ರಕಾಶ್ ಮತ್ತು ಅವರ ಪತ್ನಿ ನಿಧನರಾಗುತ್ತಾರೆ. ಹೆತ್ತವರನ್ನು ಕಳೆದುಕೊಂಡ ಸಿಂಧು ಮತ್ತು ಸುನೀಲ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಹೀಗಾಗಿ ತಮ್ಮ ಸ್ವಂತ ಮನೆಗೆ ಬೀಗ ಹಾಕಿಕೊಂಡು ಬಂಧಿಯಾಗುತ್ತಾರೆ. ನೆರೆಹೊರೆಯವರು ಆಹಾರವನ್ನು ನೀಡಿದ್ದರಿಂದ ಇಬ್ಬರು ಇಷ್ಟು ದಿನ ಬದುಕಿದ್ದಾರೆ. ಆದರೆ 20 ವರ್ಷಗಳಿಂದ ಮನೆಯಿಂದ ಆಚೆ ಬಂದಿಲ್ಲ.

    ಇದನ್ನೂ ಓದಿ: ಡ್ರೈ ಕ್ಲೀನ್‌ಗೆ ಬಟ್ಟೆ ಕೊಡೋಕೆ ಹೋದ ಮದುಮಗಳು 6 ಮಕ್ಕಳ ತಂದೆ ಜತೆ ಎಸ್ಕೇಪ್!
    ಸಿಂಧು ಮತ್ತು ಸುನೀಲ್ ಅವರ ಬಗ್ಗೆ ತಿಳಿದ ತಕ್ಷಣ ಸಾಮಾಜಿಕ ಸೇವಾ ಸಂಸ್ಥೆಗಳಾದ ಮನುಖ್ತಾ ದಿ ಸೇವಾ ಮತ್ತು ವಂದೇ ಮಾತರಂ ದಳ ಇಬ್ಬರನ್ನು ರಕ್ಷಿಸಿ ಲುಯಾನಕ್ಕೆ ಕರೆದೊಯ್ದಿದ್ದು, ಅಲ್ಲಿ ಇಬ್ಬರಿಗೆ ಸೂಕ್ತ ರಕ್ಷಣೆ ಜೊತೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದೆ.

    ಮೆಟ್ರೋ ನಿರ್ಮಾಣ ಸ್ಥಳದ ಬಳಿ ಕತ್ತರಿಸಿದ ಕೊಳೆತ ದೇಹದ ಭಾಗಗಳು ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts