More

    ಕ್ರಿಕೆಟ್ ಆಡುವಾಗ ಕುಸಿದು ಬಿದ್ದ..ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಕೊನೆಯುಸಿರು

    ಗುಜರಾತ್‌: ಇತ್ತೀಚೆಗೆ ಹೃದಯಾಘಾತ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತದೆ. ಮಕ್ಕಳು ಚಿಕ್ಕ ಪ್ರಾಯದಲ್ಲಿಯೇ ಓದು, ಪರೀಕ್ಷೆ ಅಂತ ಸಾಕಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ, ಬೆಳೆಯುತ್ತಿದ್ದಂತೆ ಕೆಲಸದ ಒತ್ತಡ, ಹೆಗಲಿಗೇರುವ ಜವಾಬ್ದಾರಿ ಇವೆಲ್ಲಾ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

    ರಾಜ್‌ಕೋಟ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ 45 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೈದಾನದಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ವೇಳೆ ವ್ಯಕ್ತಿ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದ ಘಟನೆ ಭಾನುವಾರ ನಡೆದಿದೆ.

    ಇದನ್ನೂ ಓದಿ:  ತಂದೆ-ತಾಯಿ ವಿಧಿವಶ; 20 ವರ್ಷದಿಂದ ಮನೆಯಲ್ಲೇ ಬಂಧಿಯಾದ ಅಣ್ಣ-ತಂಗಿ

    ಮೃತನನ್ನು ಮಯೂರ್ ಎಂದು ಗುರುತಿಸಲಾಗಿದ್ದು, ಆಟವಾಡುತ್ತಿದ್ದಾಗ ಸ್ವಲ್ಪ ಉದ್ವೇಗಕ್ಕೆ ಒಳಗಾದ ಅವರು ತಕ್ಷಣ ಕುಳಿತು ನೆಲದ ಮೇಲೆ ಬಿದ್ದಿದ್ದಾರೆ. ಆತನ ಸ್ನೇಹಿತರು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಇದನ್ನೂ ಓದಿ:  VIDEO | ನ್ಯೂಸ್‌ ಓದುತ್ತಲೇ ದಿಢೀರ್‌ ಕುಸಿದು ಬಿದ್ದ ನಿರೂಪಕಿ..!

    ಮಾಹಿತಿಯ ಪ್ರಕಾರ, ಮಯೂರ್ ಅಕ್ಕಸಾಲಿಗರಾಗಿದ್ದರು ಮತ್ತು ಅವರ ಕುಟುಂಬದ ಏಕೈಕ ಆಧಾರವಾಗಿದ್ದರು. ಅವರ ಸಂಬಂಧಿಕರ ಪ್ರಕಾರ, ಮಯೂರ್ ಯಾವುದೇ ರೀತಿಯ ಚಟಕ್ಕೆ ಒಳಗಾಗಿರಲಿಲ್ಲ ಎಂದು ತಿಳಿದುಬಂದಿದೆ. ಗುಜರಾತ್‌ನಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ನಡೆದ ಎಂಟನೇ ಘಟನೆ ಇದಾಗಿದೆ ಎಂದು ವರದಿಗಳು ತಿಳಿಸಿವೆ.

    ಮೆಟ್ರೋ ನಿರ್ಮಾಣ ಸ್ಥಳದ ಬಳಿ ಕತ್ತರಿಸಿದ ಕೊಳೆತ ದೇಹದ ಭಾಗಗಳು ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts